ಬಸ್ ಪ್ರಯಾಣಿಕರಿಗೆ ಗುಡ್​ ನ್ಯೂಸ್; ನಾಳೆಯಿಂದ ಬಿಎಂಟಿಸಿಯಲ್ಲಿ ಹೊಸ ಟಿಕೆಟ್ ದರ

Bangalore News: ಬಿಎಂಟಿಸಿ ಬಸ್​ನಲ್ಲಿ ಪಾಸ್​ಗಳನ್ನು ಕಡ್ಡಾಯಗೊಳಿಸಿದ್ದರಿಂದ ಹತ್ತಿರದ ಸ್ಥಳಗಳಿಗೆ ಪ್ರಯಾಣಿಸುವವರಿಗೆ ಭಾರೀ ಹೊರೆಯಾಗಿತ್ತು. ಹೀಗಾಗಿ, ಬಿಎಂಟಿಸಿ ಬಸ್ ಟಿಕೆಟ್ ದರವನ್ನು ಕಡಿಮೆಗೊಳಿಸಿದೆ.

news18-kannada
Updated:May 25, 2020, 4:29 PM IST
ಬಸ್ ಪ್ರಯಾಣಿಕರಿಗೆ ಗುಡ್​ ನ್ಯೂಸ್; ನಾಳೆಯಿಂದ ಬಿಎಂಟಿಸಿಯಲ್ಲಿ ಹೊಸ ಟಿಕೆಟ್ ದರ
ಬಿಎಂಟಿಸಿ
  • Share this:
ಬೆಂಗಳೂರು (ಮೇ 25): ಕರ್ನಾಟಕದ ಜನರ ಅನುಕೂಲಕ್ಕೆಂದು ಲಾಕ್​ಡೌನ್​ ಸಡಿಲಗೊಳಿಸಿದ್ದ ಸರ್ಕಾರ ಕೆಲವು ಷರತ್ತುಗಳೊಂದಿಗೆ ಬಸ್​ಗಳ ಸಂಚಾರಕ್ಕೆ ಅನುಮತಿ ನೀಡಿತ್ತು. ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ದಿನ, ವಾರ ಮತ್ತು ಮಾಸಿಕ ಪಾಸ್​ಗಳನ್ನು ಹೊಂದಿದವರಿಗೆ ಮಾತ್ರ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಆದರೆ, ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಹೊರೆಯಾಗಿತ್ತು. ಹೀಗಾಗಿ, ಪ್ರಯಾಣದ ದರ ಇಳಿಕೆ ಮಾಡಿ, ಬಸ್​ನಲ್ಲೇ ಟಿಕೆಟ್ ನೀಡುವ ವ್ಯವಸ್ಥೆ ಕಲ್ಪಿಸಬೇಕೆಂದು ಪ್ರಯಾಣಿಕರು ಒತ್ತಡ ಹೇರಿದ್ದರು. ಹೀಗಾಗಿ, ನಾಳೆಯಿಂದ ಬೆಂಗಳೂರಿನಲ್ಲಿ ಹೊಸ ಬಸ್​ ಟಿಕೆಟ್ ದರದೊಂದಿಗೆ, ಬಸ್​ನಲ್ಲೇ ಟಿಕೆಟ್ ನೀಡಲು ಮುಂದಾಗಿದೆ.

ಬಿಎಂಟಿಸಿ ಬಸ್​ನಲ್ಲಿ ಪಾಸ್​ಗಳನ್ನು ಕಡ್ಡಾಯಗೊಳಿಸಿದ್ದರಿಂದ ಹತ್ತಿರದ ಸ್ಥಳಗಳಿಗೆ ಪ್ರಯಾಣಿಸುವವರಿಗೆ ಭಾರೀ ಹೊರೆಯಾಗಿತ್ತು. ಹೀಗಾಗಿ, ಬಿಎಂಟಿಸಿ ಬಸ್ ಟಿಕೆಟ್ ದರವನ್ನು ಕಡಿಮೆಗೊಳಿಸಿದ್ದು, ಮೇ 25ರಿಂದ ಹೊಸ ಟಿಕೆಟ್ ದರ ಅನ್ವಯವಾಗಲಿದೆ. ಬಿಎಂಟಿಸಿ ದಿನದ ಪಾಸ್ ದರವನ್ನು ರೂ. 70ರಿಂದ 50 ರೂ.ಗೆ ಇಳಿಕೆ ಮಾಡಲಾಗಿದೆ. ಹಾಗೇ, ಟಿಕೆಟ್ ದರವನ್ನು ಕೂಡ ಮೊದಲಿಗಿಂತ ಕಡಿಮೆಗೊಳಿಸಲಾಗಿದೆ.

ಇದನ್ನೂ ಓದಿ: ತುರ್ತು ಸೇವೆಯಲ್ಲಿರುವ ನಾನು ಕ್ವಾರಂಟೈನ್ ಆಗೋದಿಲ್ಲ; ಬೆಂಗಳೂರಿಗೆ ಬಂದ ಡಿ.ವಿ. ಸದಾನಂದ ಗೌಡ ಸ್ಪಷ್ಟನೆ

ನಾಳೆಯಿಂದ 2 ಕಿ.ಮೀ. ಒಳಗೆ ಪ್ರಯಾಣಿಸುವ ಪ್ರಯಾಣಿಕರಿಗೆ 5 ರೂ., 3 ರಿಂದ 4 ಕಿ.ಮೀ.ವರೆಗೆ 10 ರೂ., 5 ರಿಂದ 6 ಕಿ.ಮೀ.ವರೆಗೆ 15 ರೂ., 7 ರಿಂದ 14 ಕಿ.ಮೀ. ವರೆಗೆ 20 ರೂ. ಹಾಗೂ 41 ಕಿ.ಮೀ.ನಿಂದ ಹಾಗೂ ಹೆಚ್ಚಿನ ದೂರದವರೆಗೆ 30 ರೂ. ದರ ನಿಗದಿ ಮಾಡಲಾಗಿದೆ. ಬಿಎಂಟಿಸಿ ದರ ಪರಿಷ್ಕರಣೆಯ ಪ್ರಸ್ತಾಪನೆಗೆ ಸರ್ಕಾರ ಕೂಡ ಹಸಿರು ನಿಶಾನೆ ತೋರಿದೆ.
First published: May 25, 2020, 4:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading