Bengaluru Crime: ಬೆಂಗಳೂರಿನಲ್ಲಿ ಮಕ್ಕಳ ಆಟಿಕೆಗಳ ಮೂಲಕ ಡ್ರಗ್ಸ್​ ಪೂರೈಕೆ!; ಎನ್​ಸಿಬಿ ವಿಚಾರಣೆಯಲ್ಲಿ ಬಯಲು

Bangalore Drug Mafia: ಜರ್ಮನಿ, ಬೆಲ್ಜಿಯಂ ದೇಶಗಳಿಂದ ಬೆಂಗಳೂರಿಗೆ ಡ್ರಗ್ಸ್​ ಪಾರ್ಸಲ್ ಆಗುತ್ತಿತ್ತು. ಮಕ್ಕಳ ಗೊಂಬೆಗಳ ಗಿಫ್ಟ್ ಬಾಕ್ಸ್ ಗ್ರಾಹಕರಿಗೆ ನೇರವಾಗಿ ರವಾನೆ ಮಾಡಲಾಗುತ್ತಿತ್ತು. ಡಾರ್ಕ್ ವೆಬ್​ನ ಮೂಲಕ ಬುಕ್ ಮಾಡಿ ಬಿಟ್ ಕಾಯಿನ್ ಮೂಲಕ ಹಣ ಸಂದಾಯ ಮಾಡಲಾಗುತ್ತಿತ್ತು.

news18-kannada
Updated:August 27, 2020, 3:14 PM IST
Bengaluru Crime: ಬೆಂಗಳೂರಿನಲ್ಲಿ ಮಕ್ಕಳ ಆಟಿಕೆಗಳ ಮೂಲಕ ಡ್ರಗ್ಸ್​ ಪೂರೈಕೆ!; ಎನ್​ಸಿಬಿ ವಿಚಾರಣೆಯಲ್ಲಿ ಬಯಲು
ಬೆಂಗಳೂರಿನಲ್ಲಿ ಸೀಜ್ ಮಾಡಲಾದ ಡ್ರಗ್ಸ್​
  • Share this:
ಬೆಂಗಳೂರು (ಆ. 27): ಬೆಂಗಳೂರಿನಲ್ಲಿ ಎನ್​ಸಿಬಿ ಅಧಿಕಾರಿಗಳು ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ವಿಚಾರಣ ವೇಳೆ ಅನೇಕ ಅಚ್ಚರಿಯ ಮಾಹಿತಿಗಳು ಹೊರಬೀಳುತ್ತಿವೆ. ಇವರು ನಟ, ನಟಿಯರು, ಸಂಗೀತ ನಿರ್ದೇಶಕರು ಸೇರಿದಂತೆ ಅನೇಕ ಗಣ್ಯರಿಗೂ ಡ್ರಗ್ ಪೂರೈಸುತ್ತಿದ್ದ ವಿಷಯ ಬೆಳಕಿಗೆ ಬಂದಿದೆ. ಮರದ, ರಟ್ಟಿನ ಬಾಕ್ಸ್​ಗಳಲ್ಲಿ ಮಕ್ಕಳ ಆಟಿಕೆ ವಸ್ತುಗಳಲ್ಲಿ ಡ್ರಗ್ಸ್ ಪಾರ್ಸೆಲ್ ಮಾಡುತ್ತಿದ್ದರು ಎಂಬ ಸಂಗತಿ ವಿಚಾರಣೆಯಲ್ಲಿ ತಿಳಿದುಬಂದಿದೆ.

ಜರ್ಮನಿ, ಬೆಲ್ಜಿಯಂ ದೇಶಗಳಿಂದ ಬೆಂಗಳೂರಿಗೆ ಡ್ರಗ್ಸ್​ ಪಾರ್ಸಲ್ ಆಗುತ್ತಿತ್ತು. ಮಕ್ಕಳ ಗೊಂಬೆಗಳ ಗಿಫ್ಟ್ ಬಾಕ್ಸ್ ಗ್ರಾಹಕರಿಗೆ ನೇರವಾಗಿ ರವಾನೆ ಮಾಡಲಾಗುತ್ತಿತ್ತು. ಡಾರ್ಕ್ ವೆಬ್​ನ ಮೂಲಕ ಬುಕ್ ಮಾಡಿ ಬಿಟ್ ಕಾಯಿನ್ ಮೂಲಕ ಹಣ ಸಂದಾಯ ಮಾಡಲಾಗುತ್ತಿತ್ತು. ದೊಡ್ಡ ಗುಬ್ಬಿಯ ತನ್ನ ಮನೆಯಲ್ಲಿ ಡ್ರಗ್ಸ್ ಸಂಗ್ರಹಿಸಿದ್ದ ಅನಿಕಾ ಎಂಬಾಕೆ ಕೆ. ರೆಹಮಾನ್ ಎಂಬ ವ್ಯಕ್ತಿಯ ಹೆಸರಲ್ಲಿ ಬುಕ್ಕಿಂಗ್ ಮಾಡುತ್ತಿದ್ದಳು. ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ಅಂಚೆ ಕಚೇರಿಗೆ ಬರುತ್ತಿದ್ದ ಡ್ರಗ್ಸ್ ಅನ್ನು ರೆಹಮಾನ್ ಪಡೆದುಕೊಂಡು, ಅದನ್ನು ಅನಿಕಾ, ಅನೂಪ್ ಹಾಗೂ ರಾಜೇಶ್​ಗೆ ನೀಡುತ್ತಿದ್ದ.

ಬೆಂಗಳೂರಿನ ಕಾಲೇಜ್ ಒಂದರಲ್ಲಿ ವಿದ್ಯಾರ್ಥಿಯಾಗಿದ್ದ ರೆಹಮಾನ್ ವಿದ್ಯಾರ್ಥಿಗಳಿಗೆ ಡ್ರಗ್ಸ್​ ಸರಬರಾಜು ಮಾಡುತ್ತಿದ್ದ. ಇದೀಗ ತಲೆಮರೆಸಿಕೊಂಡಿರುವ ರೆಹಮಾನ್​ಗೆ ಹುಡುಕಾಟ ನಡೆಸಲಾಗುತ್ತಿದೆ. ಅನಿಕಾ, ಅನೂಪ್ ಹಾಗೂ ರಾಜೇಶ್ ಅವರಿಂದ ಡ್ರಗ್ ಪಡೆಯುತ್ತಿದ್ದವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅವರಿಂದ ಡ್ರಗ್ಸ್ ಪಡೆದವರಿಗೂ ಎನ್​ಸಿಬಿ ಬಲೆ ಬೀಸಿದೆ.

ಇದನ್ನೂ ಓದಿ: ಕಾಸರಗೋಡು- ಕರ್ನಾಟಕ ಗಡಿ ರಸ್ತೆ ತೆರವುಗೊಳಿಸಲು ಕೇರಳ ಹೈಕೋರ್ಟ್ ಆದೇಶ

ಆರೋಪಿ ಅನೂಪ್ ಕಲ್ಯಾಣನಗರದಲ್ಲಿ ವಾಸವಾಗಿದ್ದ. ಕೊಚ್ಚಿ ಮೂಲದ ಆರೋಪಿ ಅನೂಪ್ ರಾಯಲ್ ಸೂಟ್ಸ್ ಹೊಟೇಲ್ ಅಪಾರ್ಟ್​ಮೆಂಟ್​ನಲ್ಲಿದ್ದ. ಎನ್​ಸಿಬಿ ದಾಳಿ ವೇಳೆ ಡ್ರಗ್ ಸಮೇತ ಸಿಕ್ಕಿ ಬಿದ್ದಿದ್ದ ಆರೋಪಿಯ ಬಳಿಯಿದ್ದ ವಸ್ತುಗಳು ಮತ್ತು ಡ್ರಗ್ ಎಲ್ಲಾ ಜಪ್ತಿ ಮಾಡಲಾಗಿತ್ತು ಎಂದು ನ್ಯೂಸ್ 18 ಗೆ ಹೊಟೇಲ್ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಮೂರು ಸ್ಥಳಗಳ ಮೇಲೆ ರೇಡ್ ಮಾಡಿ ಅನೇಕ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಲ್ಯಾಣನಗರದ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್​ಮೆಂಟ್, ಥಣಿಸಂದ್ರದ ನಿಕೂ ಹೋಮ್ಸ್ ಮತ್ತು ದೊಡ್ಡಗುಬ್ಬಿಯ ಮನೆಯೊಂದರಲ್ಲಿ ಕೋಟ್ಯಂತರ ಮೌಲ್ಯದ ಮಾದಕ ವಸ್ತುಗಳು ಪತ್ತೆಯಾಗಿವೆ. ಆ. 21ರಂದು ಈ ರೇಡ್ ನಡೆದಿದ್ದು, ಅನಿಕಾ, ಅನೂಪ್ ಮತ್ತು ರಾಜೇಶ್​ನನ್ನು ಬಂಧಿಸಲಾಗಿದೆ.

ಇವರಿಂದ ವಶಪಡಿಸಿಕೊಳ್ಳಲಾದ ಮಾದಕ ವಸ್ತುವಿನಲ್ಲಿ 511 ಎಂಡಿಎಂಎ ಗುಳಿಗೆಗಳು ಹಾಗೂ 180 ಎಲ್​ಎಸ್​ಡಿ ಮಾತ್ರೆಗಳು ಸೇರಿವೆ. ಇವುಗಳ ಮೌಲ್ಯ 2 ಕೋಟಿ ರೂಗೂ ಹೆಚ್ಚು ಇರಬಹುದು ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ದೇವನಹಳ್ಳಿಯಲ್ಲಿ ಗ್ರಾಹಕರಿಗೆ ಡಗ್ಸ್ ಸಪ್ಲೈ ಮಾಡಲು ಈ ಮೂವರ ಗ್ಯಾಂಗ್ ಸಜ್ಜಾಗಿತ್ತು. ಈ ವೇಳೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಪ್ರಕಾರ, ಈ ದಂಧೆಯ ಕಿಂಗ್​ಪಿನ್ ಕೈಸರ್ ಎನ್ನಲಾಗಿದೆ. ಈತ ಮೈಸೂರು ಪಾಲಿಕೆ ಚುನಾವಣೆಯಲ್ಲಿ ಶಾಂತಿನಗರ ವಾರ್ಡ್​ನಿಂದ ಸ್ಪರ್ಧಿಸಿ ಕೇವಲ 150 ಮತಗಳಿಂದ ಪರಾಭವಗೊಂಡಿದ್ದ. ಈತನ ಡ್ರಗ್ಸ್ ಜಾಲ ವಿಶಾಖಪಟ್ಟಣದಿಂದ ಮೈಸೂರಿನವರೆಗೆ ಚಾಚಿದೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಜಾಲ ಪತ್ತೆ; ನಟ ನಟಿಯರು, ಮ್ಯೂಸಿಕ್ ಡೈರೆಕ್ಟರ್ಸ್ ಇವರ ಗ್ರಾಹಕರು

ಗಮನಾರ್ಹ ಸಂಗತಿ ಎಂದರೆ ಈ ಡ್ರಗ್ಸ್ ಜಾಲಕ್ಕೆ ಸ್ಯಾಂಡಲ್​ವುಡ್​ನ ಅನೇಕ ಸೆಲಬ್ರಿಟಿಗಳು ಗ್ರಾಹಕರಾಗಿದ್ದಾರಂತೆ. ಬಂಧಿತಳಾಗಿರುವ ಅನಿಕಾಳ ವಿಚಾರಣೆಯ ವೇಳೆ ಈ ಸ್ಫೋಟಕ ಮಾಹಿತಿ ಸಿಕ್ಕಿದೆ. ಸ್ಯಾಂಡಲ್​​ವುಡ್​ನ ನಟ, ನಟಿಯರು, ಸಂಗೀತ ನಿರ್ದೇಶಕರು ಈ ಡ್ರಗ್ಸ್​ಗೆ ದಾಸರಾಗಿದ್ದಾರೆ ಎಂದು ಈಕೆ ಬಾಯಿಬಿಟ್ಟಿದ್ದಾಳೆ. ಯುವಕರು, ಯುವತಿಯರು, ಕಾಲೇಜು ವಿದ್ಯಾರ್ಥಿಗಳೂ ಕೂಡ ಇವರಿಗೆ ಗ್ರಾಹಕರಾಗಿದ್ದಾರೆನ್ನಲಾಗಿದೆ. ಈಗ ಇನ್ನಷ್ಟು ವಿಚಾರಣೆ ನಡೆಸಲಾಗುತ್ತಿದೆ.

ಜುಲೈ 31ರಂದು ಜರ್ಮನಿಯಿಂದ ತರಿಸಲಾಗಿದ್ದ 750 ಎಂಡಿಎಂಎ ಮಾತ್ರೆಗಳನ್ನ ಬೆಂಗಳೂರಿನಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಆ ಸುಳಿವಿನ ಆಧಾರದ ಮೇಲೆ ಆ. 21ರಂದು ಮೂರು ಕಡೆ ರೇಡ್ ಮಾಡಿ ಇನ್ನಷ್ಟು ಮಾದಕವಸ್ತುಗಳನ್ನ ಸೀಜ್ ಮಾಡಲಾಗಿದೆ.ಮುಂಬೈನಲ್ಲಿ ಆಗಸ್ಟ್ 10ರಂದು ಬರೋಬ್ಬರಿ 3010 ಎಂಡಿಎಂಎ ಪಿಲ್​ಗಳನ್ನ ವಶಪಡಿಸಿಕೊಳ್ಳಲಾಗಿತ್ತು.
Published by: Sushma Chakre
First published: August 27, 2020, 3:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading