Bengaluru Accident: ಸಿಗ್ನಲ್​ನಲ್ಲಿ ಕಾರುಗಳ ನಡುವೆ ಅಪ್ಪಚ್ಚಿಯಾಯ್ತು ಬೈಕ್; ಅಮಾಯಕ ಸಾವು, ಕಾರು ಚಾಲಕ ಬಂಧನ

Accident News: ರಿಚ್​ಮಂಡ್ ರಸ್ತೆಯ ಸಿಗ್ನಲ್​ನಲ್ಲಿ ನಿಂತಿದ್ದ ವಾಹನಗಳಿಗೆ ಹಿಂಬದಿಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದ ಕಿಯಾ ಕಾರು ಚಾಲಕ ರೋಹಿತ್​ನಿಂದಾಗಿ ಕನಕನಪಾಳ್ಯದ ನಿವಾಸಿಯಾಗಿದ್ದ ಯುವಕ ಕಿರಣ್‌ ಮೃತಪಟ್ಟಿದ್ದಾನೆ.

news18-kannada
Updated:September 18, 2020, 8:27 AM IST
Bengaluru Accident: ಸಿಗ್ನಲ್​ನಲ್ಲಿ ಕಾರುಗಳ ನಡುವೆ ಅಪ್ಪಚ್ಚಿಯಾಯ್ತು ಬೈಕ್; ಅಮಾಯಕ ಸಾವು, ಕಾರು ಚಾಲಕ ಬಂಧನ
ಕುಡಿದು ಕಾರು ಚಲಾಯಿಸಿ, ಬೈಕ್ ಸವಾರನನ್ನು ಕೊಂದ ರೋಹಿತ್
  • Share this:
ಬೆಂಗಳೂರು (ಸೆ. 18): ಕುಡಿದು, ವೇಗವಾಗಿ ವಾಹನ ಚಲಾಯಿಸಿ, ಬೈಕ್ ಸವಾರನ ಸಾವಿಗೆ ಕಾರಣವಾದ ಬೆಂಗಳೂರಿನ ಯುವಕನಿಗೆ 14 ದಿನ‌ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 30 ವರ್ಷದ ರೋಹಿತ್ ಕೇಡಿಯಾ ಎಂಬ ವ್ಯಕ್ತಿ ಕುಡಿದು ವಾಹನ ಚಲಾಯಿಸಿದ್ದ. ಆತನಿಗೆ 14 ದಿನ‌ ನ್ಯಾಯಾಂಗ ಬಂಧನಕ್ಕೊಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಅಪಘಾತದಲ್ಲಿ 23 ವರ್ಷದ ಕಿರಣ್ ಎಂಬಾತ ಮೃತಪಟ್ಟಿದ್ದಾನೆ. ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.

ಇನ್ಶುರೆನ್ಸ್​ ಕಂಪನಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಕಿರಣ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಅಪಘಾತದ ವೇಳೆ ಮದ್ಯಪಾನ‌ ಮಾಡಿದ್ದ ರೋಹಿತ್ ಕೇಡಿಯಾ ಕುಡಿದು ವೇಗವಾಗಿ ವಾಹನ ಚಲಾಯಿಸಿ ಅಪಘಾತ ಮಾಡಿದ್ದ. ಸಿಸಿಟಿವಿಗಳ ಪರಿಶೀಲನೆ ನಡೆಸಿದ ಪೊಲೀಸರು ಕಾರು ಅಪಘಾತವೆಸಗಿದ ರೋಹಿತ್​ನನ್ನು ಬಂಧಿಸಿದ್ದಾರೆ. ಆರೋಪಿ ಡ್ರಗ್ಸ್ ಸೇವನೆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಲ್ಸನ್‌ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಂಗಳೂರಿನ ರಿಚ್​ಮಂಡ್ ರಸ್ತೆಯ ಸಿಗ್ನಲ್​ನಲ್ಲಿ ಈ ಘಟನೆ ನಡೆದಿತ್ತು.

Bengaluru Man Died in Accident after Drunken Car Driver Hit the Bike in Traffic Signal
ಅಪಘಾತದಲ್ಲಿ ಸಾವನ್ನಪ್ಪಿದ ಯುವಕ ಕಿರಣ್


ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆ ಕೇಸ್​​: ಇಂದು ವಿಚಾರಣೆಗೆ ಹಾಜರಾಗುವಂತೆ ಸಂಪತ್​ ರಾಜ್​ಗೆ ಸಿಸಿಬಿ ಪೊಲೀಸರು ನೋಟಿಸ್​

ರಿಚ್​ಮಂಡ್ ರಸ್ತೆಯ ಸಿಗ್ನಲ್​ನಲ್ಲಿ ನಿಂತಿದ್ದ ವಾಹನಗಳಿಗೆ ಹಿಂಬದಿಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದ ಕಿಯಾ ಕಾರು ಚಾಲಕ ರೋಹಿತ್​ನಿಂದಾಗಿ ಕನಕನಪಾಳ್ಯದ ನಿವಾಸಿಯಾಗಿದ್ದ ಯುವಕ ಕಿರಣ್‌ ಮೃತಪಟ್ಟಿದ್ದಾನೆ. ನಿನ್ನೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಕಂಠಪೂರ್ತಿ ಕುಡಿದು ಅಪಘಾತ ಮಾಡಿದ ರೋಹಿತ್​ ಮೈಮೇಲೆ ಪ್ರಜ್ಞೆ ಇಲ್ಲದಷ್ಟು ಕುಡಿದು ಕಾರು ಚಲಾಯಿಸುತ್ತಿದ್ದ. ರಿಚ್ಮಂಡ್ ಸರ್ಕಲ್ ಬಳಿ ನಿಂತಿದ್ದ ಡಿಯೊ ಬೈಕ್ ಹಾಗೂ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದ. ಡಿಕ್ಕಿ ಹೊಡೆದ ಪರಿಣಾಮದಿಂದ ಕಾರಿನ ಮುಂಭಾಗದಲ್ಲಿ ನಿಂತಿದ್ದ ಕ್ವಿಡ್ ಕಾರಿಗೆ ಕಿರಣ್​ನ ಬೈಕ್ ಡಿಕ್ಕಿ ಹೊಡೆದಿತ್ತು.

ಎರಡು ಕಾರಿನ ಮದ್ಯ ಸಿಕ್ಕಿ ಕಿರಣ್​ನ ಬೈಕ್ ಸಂಪೂರ್ಣ ಅಪ್ಪಚ್ಚಿಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಕಿರಣ್​ನನ್ನು ರಕ್ಷಿಸಲು ತಕ್ಷಣ ಸ್ಥಳೀಯರು ಪ್ರಯತ್ನಿಸಿದ್ದರು. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದ.
Published by: Sushma Chakre
First published: September 18, 2020, 8:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading