HOME » NEWS » State » BELAGAVI SOLIDER CREATING COVID AWARENESS IN RURAL AREA CSB SESR

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ವ್ಯಾಪಿಸಿದ ಕೋವಿಡ್ ಸೋಂಕು; ನಿವೃತ್ತ ಯೋಧನಿಂದ ಹಳ್ಳಿಯಲ್ಲಿ ಜಾಗೃತಿ ಕಾರ್ಯ!

ಕೆಲ ತಿಂಗಳ ಹಿಂದೆ ನಿವೃತ್ತಿಯನ್ನು ಹೊಂದಿ ಗ್ರಾಮಕ್ಕೆ ವಾಪಸ್ ಆಗಿದ್ದ ಇವರಿಗೆ ಗ್ರಾಮದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಯಾವುದೇ ಪಾಲನೆ ಆಗುತ್ತಿರಲಿಲ್ಲ ಎಂಬುದು ಕಂಡಿತು.

news18-kannada
Updated:June 5, 2021, 7:58 PM IST
ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ವ್ಯಾಪಿಸಿದ ಕೋವಿಡ್ ಸೋಂಕು; ನಿವೃತ್ತ ಯೋಧನಿಂದ ಹಳ್ಳಿಯಲ್ಲಿ ಜಾಗೃತಿ ಕಾರ್ಯ!
ಜಾಗೃತಿ
  • Share this:
ಬೆಳಗಾವಿ (ಜೂನ್. 5)- ನಗರ ಪ್ರದೇಶದಲ್ಲಿ ಕೋವಿಡ್ -19 ಸೋಂಕಿನ ಎರಡನೇ ಅಲೆ ಇಳಿಮುಖವಾಗಿದೆ. ಆದರೇ ಗ್ರಾಮೀಣ ಪ್ರದೇಶದಲ್ಲಿ ಈ ಸಲ ಸೋಂಕಿನ ಹಾವಳಿ ತೀವ್ರಗೊಂಡಿದೆ. ಬೆಳಗಾವಿ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಸೋಂಕು ವ್ಯಾಪಿಸಿದೆ. ಗ್ರಾಮಗಳಲ್ಲಿ ಹತ್ತಾರು ಸಾವು- ನೋವುಗಳು ಸಹ ಸಂಭವಿಸಿದೆ. ಇನ್ನೂ ಗ್ರಾಮೀಣ ಪ್ರದೇಶದ ಜನ ಸೋಂಕಿನ ಲಕ್ಷಣ ನಿರ್ಲಕ್ಷ್ಯ ಮಾಡಿರೋದು ಇದಕ್ಕೆ ಪ್ರಮುಖ ಕಾರಣವಾಗಿದೆ. ಇಲ್ಲೊಬ್ಬ ನಿವೃತ್ತ ಸೈನಿಕ ತನ್ನ ಊರಿನಲ್ಲಿ ಸೋಂಕು ವ್ಯಾಪಿಸಿರುವುದನ್ನು ಗಮನಿಸಿ ಜಾಗೃತಿಗೆ ಮುಂದಾಗಿದ್ದಾರೆ. ಜತೆಗೆ ಸ್ವತಃ ಖರ್ಚಿನಲ್ಲಿ ಕಿಟ್ ವಿತರಣೆ ಮಾಡಿ ಮಾದರಿಯಾಗಿದ್ದಾರೆ. 

ಜಿಲ್ಲೆಯ ಬೈಲಹೊಂಗ ತಾಲೂಕಿನ ಚಿವಟಗುಂಡಿ ಗ್ರಾಮ ನಿವೃತ್ತ ಯೋಧ ವೀರು ದೋಡವೀರಪ್ಪನವರ ಗ್ರಾಮದಲ್ಲಿ ಕೊರೋನಾ ಜಾಗೃತಿ ಮೂಡಿಸುವ ಮೂಲಕ ಮಾದರಿಯಾಗಿದ್ದಾರೆ. ಭಾರತೀಯ ಸೇನೆಯಲ್ಲಿ ವೀರು 17 ವರ್ಷಗಳ ಸುದೀರ್ಘ ಸೇವೆಯನ್ನು ಸಲಿಸಿದ್ದಾರೆ. ಕೆಲ ತಿಂಗಳ ಹಿಂದೆ ನಿವೃತ್ತಿಯನ್ನು ಹೊಂದಿ ಗ್ರಾಮಕ್ಕೆ ವಾಪಸ್ ಆಗಿದ್ದ ಇವರಿಗೆ ಗ್ರಾಮದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಯಾವುದೇ ಪಾಲನೆ ಆಗುತ್ತಿರಲಿಲ್ಲ ಎಂಬುದು ಕಂಡಿತು. ಇದನ್ನು ನೋಡಿ ಜಾಗೃತಿ ಮೂಡಿಸಬೇಕು ಎನ್ನುವುದು ನಿರ್ಧಸಿದ್ದಾರೆ. ಸ್ನೇಹಿತರನ್ನು ಜತೆಗೆ ಕರೆದುಕೊಂಡು ಗ್ರಾಮದಲ್ಲಿ ಜಾಗೃತಿ ಮೂಡಿಸಲು ಆರಂಭಿಸಿದ್ದು, ಜತಗೆ ಜನರ ನೆರವಿಗೂ ಮುಂದಾಗಿದ್ದಾರೆ

ನಿವೃತ್ತ ಯೋಧ ವೀರು ತನ್ನ ಗೆಳೆಯರನ್ನು ಒಗ್ಗೂಡಿಸಿಕೊಂಡು ಕೋವಿಡ್ ಸುರಕ್ಷಾ ಕಿಟ್​​ ಗಳನ್ನು ತಯಾರು ಮಾಡಿದ್ದಾರೆ. ಗ್ರಾಮದ ಪ್ರತಿ ಮನೆ ಮನೆಗೆ ಕಿಟ್​​  ಕೊಟ್ಟುಅವರಿಗೆ ಕೋವಿಡ್ ಮುಂಜಾಗ್ರತೆ ಕ್ರಮಗನ್ನು ತಿಳಿಸುತ್ತಿದ್ದಾರೆ, ಇವರ ಈ ಕಾರ್ಯಕ್ಕೆ ಎಲ್ಲ ಗ್ರಾಮದ ಜನರು ಧನ್ಯವಾದ ತಿಳಿಸುತ್ತಿದ್ದಾರೆ. ಕಿಟ್​ ನಲ್ಲಿ ವಾಷಬಲ್  ಮಾಸ್ಕ್, ಸ್ಯಾನಿಟೈಜರ್, ಸೋಪು, ಬಿಸ್ಕೀಟ್ ಹಾಗೂ ಫೇಸ್​​ ಶೀಲ್ಡ್ ಇದೆ. ಚಿವಟಗುಂಡಿ, ನೇಗಿನಾಳ, ಬೈಲವಾಡ, ಸಾಣಿಕೊಪ್ಪ, ನಾಗನೂರು, ಯಡಾಲ್, ನಯಾನಗರ ಹಾಗೂ ಬೈಲಹೊಂಗದಲ್ಲಿ 2 ಸಾವಿರಕ್ಕೂ ಹೆಚ್ಚು ಕಿಟ್ ವಿತರಣೆ ಮಾಡಿದ್ದಾರೆ.

ಇದನ್ನು ಓದಿ: ಪರಿಸರ ಹೋರಾಟಗಾರರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ: ಕೊನೆಗೂ ಕಾಡಿಗೆ ಮರಳಿದ ‘ಕುಶ’ ಆನೆ..!

ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಇವರು ಬಡವರಿಗೆ 75ಕ್ಕೂ ಹೆಚ್ಚು ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಗುಜಾರಾತ್ ನಲ್ಲಿ ಏರ್ ಡಿಫೆನ್ಸ್ ಸೈನಿಕನಾಗಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ತನ್ನ ಸ್ನೇಹಿತರ ಮೂಲಕ ಫುಡ್ ಕಿಟ್ ವಿತರಣೆ ಮಾಡಿದ್ದರು. ಇದೀಗ ನಾಲ್ಕು ತಿಂಗಳ ಹಿಂದೆ ನಿವೃತ್ತಿಯನ್ನು ಹೊಂದಿದ್ದು ವೀರು ಗ್ರಾಮದಲ್ಲಿ ಇದ್ದಾರೆ. ಕೊರೊನೆ ಎರಡನೇ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಹಾನಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಸುರಕ್ಷಾ ಕೀಟ್ ವಿತರಣೆಗೆ ವೀರು ಮುಂದಾಗಿದ್ದಾರೆ.

ಈ ಕಾರ್ಯಕ್ಕೆ ಗೆಳೆಯರಾದ ಶಿವಾನಂದ ಕೆಂಚನಗೌಡ್ರ, ನಾಗಪ್ಪ ಗುಂಡಲೂರ್, ಬಸವಾರಾಜ ಮಲ್ಲೂರ, ಸುಪ್ರೀಮ್ ಪಾಟೀಲ್, ಈರಣ್ಣ ಸಂಗನಗೌಡ್ರ, ಅನಿಲ ಸಂಗನಗೌಡ್ರ, ಚನ್ನಬಸಪ್ಪ ಕುರಬರ, ನಿಲ್ಲಪ್ಪ ಮಲ್ಲೂರ, ನಾಗಪ್ಪ ತಳವಾರ, ಗೌಡಪ್ಪ ದೋಡವೀರಪ್ಪನವರ,  ಮಲ್ಲಪ್ಪ ಬನ್ನೂರ, ಗುರು ಮಲ್ಲೂರ, ಬಡವರಾಜ ಕೆಂಚನಗೌಡ್ರ, ಯಲ್ಲಗೌಡ ಸಂಗನಗೌಡ್ರ,ಪುಂಡಲೀಕ್ ಕುರುಬರ, ಮಹಾತೇಶ್ ಶಿವನಾಯಕರ್, ಆನಂದ ಹಲಸಗಿ ಸಾಥ್ ನೀಡಿದ್ದಾರೆ. ಇನ್ನೂ ಅಧಿಕಾರಿಗಳು ಸಹ ಕೋವಿಡ್ ಜಾಗೃತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
Youtube Video
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Seema R
First published: June 5, 2021, 7:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories