ಆಫ್ರಿಕನ್‌ ಪ್ರಜೆಗಳ ಪಾರ್ಟಿ ಮೇಲೆ ಪೊಲೀಸ್‌ ರೇಡ್‌; ದಿಕ್ಕಾಪಾಲಾಗಿ ಓಡಿದ ವಿದೇಶಿಗರು, ಓರ್ವನ ಬಂಧನ

ಆಫ್ರಿಕನ್‌ ಕಿಚನ್ ಪಾರ್ಟಿ ನಡೆಸಲು ಯಾವುದೇ ಅನುಮತಿ ಪಡೆಯದ ಕಾರಣ ಹೆಣ್ಣೂರು ಠಾಣಾ ಪೊಲೀಸರು ನಿನ್ನೆ ರಾತ್ರಿ ನಡೆದ ಪಾರ್ಟಿ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, ಘಟನೆ ಸಂಬಂಧ ಒರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿಯೂ ಪೊಲೀಸರು ಮಾಹಿತಿ ನೀಡಿದ್ದಾರೆ.

news18-kannada
Updated:September 6, 2020, 5:40 PM IST
ಆಫ್ರಿಕನ್‌ ಪ್ರಜೆಗಳ ಪಾರ್ಟಿ ಮೇಲೆ ಪೊಲೀಸ್‌ ರೇಡ್‌; ದಿಕ್ಕಾಪಾಲಾಗಿ ಓಡಿದ ವಿದೇಶಿಗರು, ಓರ್ವನ ಬಂಧನ
ಪೊಲೀಸ್ ದಾಳಿ ವೇಳೆ ದಿಕ್ಕಾಪಾಲಾಗಿ ಓಡುತ್ತಿರುವ ಆಫ್ರಿಕನ್ ಪ್ರಜೆಗಳು.
  • Share this:
ಬೆಂಗಳೂರು (ಸೆಪ್ಟೆಂಬರ್‌ 06); ರಾಜ್ಯದಲ್ಲಿ ಡ್ರಗ್ಸ್‌ ಜಾಲದ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೆ, ಈ ಜಾಲದ ಹಿಂದೆ ಇರುವವರು ವಿದೇಶಿಗರು ಎಂದು ಹೇಳಲಾಗುತ್ತಿದೆ. ಈಗಾಗಲೇ ನಗರದ ಪ್ರಮುಖ ಡ್ರಗ್ಸ್‌ ಪೆಡ್ಲರ್‌ಗಳ ಜೊತೆಗೆ ಪೊಲೀಸರು ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿಯನ್ನೂ ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಹೊರಮಾವು ಬಳಿ ನಡೆದಿದ್ದ ಆಫ್ರಿಕನ್‌ ಮೂಲದ ಪ್ರಜೆಗಳ ಆಫ್ರಿಕನ್‌ ಕಿಚನ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರ ದಾಳಿ ವೇಳೆ ವಿದೇಶಿ ಪ್ರಜೆಗಳು ದಿಕ್ಕಾಪಾಲಾಗಿ ಓಡಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅಲ್ಲದೆ, ಈ ವೇಳೆ ಓರ್ವ ಆಫ್ರಿಕನ್‌ ವ್ಯಕ್ತಿಯನ್ನು ಬಂಧಿಸಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.  

ಆಫ್ರಿಕನ್‌ ಕಿಚನ್ ಪಾರ್ಟಿ ನಡೆಸಲು ಯಾವುದೇ ಅನುಮತಿ ಪಡೆಯದ ಕಾರಣ ಹೆಣ್ಣೂರು ಠಾಣಾ ಪೊಲೀಸರು ನಿನ್ನೆ ರಾತ್ರಿ ನಡೆದ ಪಾರ್ಟಿ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, ಘಟನೆ ಸಂಬಂಧ ಜಾನ್ಸನ್‌ ಎಂಬ ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿಯೂ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ನಗರದ ಡ್ರಗ್ಸ್‌ ಜಾಲಕ್ಕೂ ಈ ಆಫ್ರಿಕನ್‌ ಪ್ರಜೆಗಳಿಗೂ ನಂಟಿದೆಯಾ? ಎಂಬುದು ವಿಚಾರಣೆಯ ನಂತರವಷ್ಟೇ ಬೆಳಕಿಗೆ ಬರಲಿದೆ.

ಕಳೆದ ಗುರುವಾರ ಬೆಂಗಳೂರು ಪೊಲೀಸರು ಕೋಟ್ಯಾಂತರ ರೂಪಾಯಿ ಮೌಲ್ಯದ ಡ್ರಗ್ಸ್‌ಗಳನ್ನು ಪತ್ತೆಹಚ್ಚಿದ್ದರು. ಅಲ್ಲದೆ, ಇಬ್ಬರು ಪ್ರಮುಖ ಪೆಡ್ಲರ್‌ಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾಗ ಈ ಎಲ್ಲಾ ಅಂಶಗಳು ಬೆಳಕಿಗೆ ಬಂದಿತ್ತು. ಈ ವಿಚಾರಣೆ ವೇಳೆ ಜರ್ಮನಿ, ಬೆಲ್ಜಿಯಂ ದೇಶಗಳಿಂದ ಬೆಂಗಳೂರಿಗೆ ಡ್ರಗ್ಸ್​ ಪಾರ್ಸಲ್ ಆಗುತ್ತಿತ್ತು. ಮಕ್ಕಳ ಗೊಂಬೆಗಳ ಗಿಫ್ಟ್ ಬಾಕ್ಸ್ ಗ್ರಾಹಕರಿಗೆ ನೇರವಾಗಿ ರವಾನೆ ಮಾಡಲಾಗುತ್ತಿತ್ತು.

ಇದನ್ನೂ ಓದಿ : ಡ್ರಗ್ಸ್‌ ಜಾಲ; ಪೊಲೀಸ್‌ ವಿಚಾರಣೆ ಸ್ಪಂದಿಸದ ನಟಿ ರಾಗಿಣಿ, ಪ್ರಶ್ನೆ ಕೇಳಿ ಬಾಯ್‌ಬಿಡಿಸಲು ಸಾಧ್ಯವಾಗದೆ ಹೈರಾಣಾದ ಅಧಿಕಾರಿಗಳು

ಡಾರ್ಕ್ ವೆಬ್​ನ ಮೂಲಕ ಬುಕ್ ಮಾಡಿ ಬಿಟ್ ಕಾಯಿನ್ ಮೂಲಕ ಹಣ ಸಂದಾಯ ಮಾಡಲಾಗುತ್ತಿತ್ತು. ದೊಡ್ಡ ಗುಬ್ಬಿಯ ತನ್ನ ಮನೆಯಲ್ಲಿ ಡ್ರಗ್ಸ್ ಸಂಗ್ರಹಿಸಿದ್ದ ಅನಿಕಾ ಎಂಬಾಕೆ ಕೆ. ರೆಹಮಾನ್ ಎಂಬ ವ್ಯಕ್ತಿಯ ಹೆಸರಲ್ಲಿ ಬುಕ್ಕಿಂಗ್ ಮಾಡುತ್ತಿದ್ದಳು. ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ಅಂಚೆ ಕಚೇರಿಗೆ ಬರುತ್ತಿದ್ದ ಡ್ರಗ್ಸ್ ಅನ್ನು ರೆಹಮಾನ್ ಪಡೆದುಕೊಂಡು, ಅದನ್ನು ಅನಿಕಾ, ಅನೂಪ್ ಹಾಗೂ ರಾಜೇಶ್​ಗೆ ನೀಡುತ್ತಿದ್ದ ಎಂದು ಹೀಗೆ ಸಿಕ್ಕ ನಾನಾ ಮಾಹಿತಿಗಳನ್ನು ಕಲೆಹಾಕುತ್ತಾ ಇದೀಗ ಪೊಲೀಸರು ಸ್ಯಾಂಡಲ್‌ವುಡ್‌ಗೆ ಕೈ ಹಾಕಿದ್ದಾರೆ.

ಇದೇ ಪ್ರಕರಣದಲ್ಲಿ ನಟಿ ರಾಗಿಣಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಮೂರು ದಿನಗಳ ಕಾಲ ಪೊಲೀಸ್‌ ವಿಚಾರಣೆಗೂ ಪಡೆಯಲಾಗಿದೆ. ಅಲ್ಲದೆ, ಸತತ ಎರಡು ದಿನಗಳಿಂದ ಅಧಿಕಾರಿಗಳು ವಿವಿಧ ವಿಚಾರಗಳನ್ನು ಮುಂದಿಟ್ಟು ಪ್ರಶ್ನೆ ಮಾಡುತ್ತಿದ್ದಾರೆ. ಈ ಜೊತೆಗೆ ಇದೀಗ ಆಫ್ರಿಕನ್‌ ಪ್ರಜೆಯನ್ನೂ ಬಂಧಿಸಲಾಗಿದ್ದು, ವಿಚಾರಣೆ ವೇಳೆ ಏನಾದರೂ ಹೆಚ್ಚಿನ ಮಾಹಿತಿ ದೊರೆಯುತ್ತದೆಯೇ? ಎಂಬುದನ್ನು ಕಾದುನೋಡಬೇಕಿದೆ.
Published by: MAshok Kumar
First published: September 6, 2020, 5:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading