Bangalore: ಬೆಂಗಳೂರಿನ ಕೆಂಗೇರಿಯಲ್ಲಿ ಲಿಫ್ಟ್​ನ​​ ಹೊಂಡಕ್ಕೆ ಬಿದ್ದ 2 ವರ್ಷದ ಮಗು ಸಾವು

Bangalore News: ಕೆಂಗೇರಿಯ ಕೋಡಿಪಾಳ್ಯದಲ್ಲಿ ಇಂದು ಬೆಳಗ್ಗೆ 8.30ರ ವೇಳೆಗೆ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಲಿಫ್ಟ್​ನ ಗುಂಡಿಗೆ ಬಿದ್ದ 2 ವರ್ಷದ ಮಗು ಸಾವನ್ನಪ್ಪಿದೆ.

news18-kannada
Updated:October 30, 2020, 3:19 PM IST
Bangalore: ಬೆಂಗಳೂರಿನ ಕೆಂಗೇರಿಯಲ್ಲಿ ಲಿಫ್ಟ್​ನ​​ ಹೊಂಡಕ್ಕೆ ಬಿದ್ದ 2 ವರ್ಷದ ಮಗು ಸಾವು
2 ವರ್ಷದ ಮಗು ಬಿದ್ದ ಲಿಫ್ಟ್​ನ ಗುಂಡಿ
  • Share this:
ಬೆಂಗಳೂರು (ಅ. 30): ಚಿಕ್ಕ ಮಕ್ಕಳನ್ನು ಎಷ್ಟು ಮುತುವರ್ಜಿಯಿಂದ ನೋಡಿಕೊಂಡರೂ ಸಾಕಾಗುವುದಿಲ್ಲ. ಒಂದೇ ಒಂದು ಕ್ಷಣ ನಾವು ಮೈ ಮರೆತರೂ ಮಕ್ಕಳು ಅನಾಹುತ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಬೆಂಗಳೂರಿನಲ್ಲಿ ಪೋಷಕರು ಕೊಂಚ ಮೈಮರೆತಿದ್ದಕ್ಕೆ 2 ವರ್ಷದ ಮಗುವೊಂದು ಜೀವ ಕಳೆದುಕೊಂಡಿದೆ. ಬೆಂಗಳೂರಿನ ಕೆಂಗೇರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಲಿಫ್ಟ್​ನ ಗುಂಡಿಗೆ ಬಿದ್ದು ಎರಡು ವರ್ಷದ ಮಗು‌ ಸಾವನ್ನಪ್ಪಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ಬೆಳಗ್ಗೆ 8.30ರ ವೇಳೆಗೆ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಲಿಫ್ಟ್​ನ ಗುಂಡಿಗೆ ಬಿದ್ದ 2 ವರ್ಷದ ಮಗು ವಿನೋದ್​ ತೀವ್ರವಾಗಿ‌ ಗಾಯಗೊಂಡಿತ್ತು. ತಕ್ಷಣ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ‌ ಮಗು ಸಾವನ್ನಪ್ಪಿದೆ. ಕೊಪ್ಪಳ ಮೂಲದವರಾದ ಪೋಷಕರು ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲೇ ಶೆಡ್​ನಲ್ಲಿ ವಾಸವಾಗಿದ್ದರು. ಮಗುವಿನ ತಂದೆ ಬಿಜಿಎಸ್ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: Black Panther: ಕಬಿನಿ ಹಿನ್ನೀರಿನಲ್ಲಿ ಮತ್ತೆ ಪ್ರತ್ಯಕ್ಷನಾದ ಭಗೀರ; ಸಫಾರಿಯಲ್ಲಿ ಕರಿಚಿರತೆ ದರ್ಶನ

ಕೆಂಗೇರಿಯ ಕೋಡಿಪಾಳ್ಯದಲ್ಲಿ ರಮೇಶ್ ಎಂಬಾತನಿಂದ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಕಟ್ಟಡಕ್ಕೆ ಲಿಫ್ಟ್​ ಅಳವಡಿಸಲು 6 ಅಡಿ ಹೊಂಡ ತೋಡಲಾಗಿತ್ತು. ಆ ಗುಂಡಿಯಲ್ಲಿ ಮಳೆಯಿಂದ ನೀರು ತುಂಬಿಕೊಂಡಿತ್ತು. ಆ ಗುಂಡಿಗೆ ಅಡ್ಡಲಾಗಿ ಏನೂ ಇಟ್ಟಿರಲಿಲ್ಲ. ಅದರ ಸುತ್ತಲೂ ಆಟವಾಡುವ ಸಮಯದಲ್ಲಿ 2 ವರ್ಷದ ಮಗು ವಿನೋದ್​ ಕುಮಾರ್ ಗುಂಡಿಗೆ ಬಿದ್ದಿದ್ದ.

ವಿಷಯ ಗೊತ್ತಾದ ಕೂಡಲೆ ಮಗುವಿನ ಪೋಷಕರು ಮಗುವನ್ನು ಎತ್ತಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ನೀರಿನಲ್ಲಿ ಮುಳುಗಿದ್ದರಿಂದ ಮಗುವಿನ ಜೀವ ಹೋಗಿತ್ತು. ಕಟ್ಟಡ ನಿರ್ಮಿಸುತ್ತಿದ್ದ ರಮೇಶ್ ವಿರುದ್ಧವೂ ಕೇಸ್ ದಾಖಲಿಸಿಕೊಳ್ಳಲಾಗಿದೆ.
Published by: Sushma Chakre
First published: October 30, 2020, 3:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading