Bangalore Rain: ಮಳೆ ಹಾನಿ ಪ್ರದೇಶಕ್ಕೆ ಸಚಿವ ಆರ್​.ಅಶೋಕ್ ಭೇಟಿ; ರಾಜಕಾಲುವೆ ಒತ್ತುವರಿ ಮಾಡಿದರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಬೆಂಗಳೂರು ದಕ್ಷಿಣ ಹಾಗೂ ಆರ್.ಆರ್ ನಗರ ವಲಯದಲ್ಲೇ ಹೆಚ್ಚು ಮಳೆಯಾಗಿದೆ. ಕೆಲ ಪ್ರದೇಶಗಳಲ್ಲಿ 100 ಮಿ.ಮೀ. ಗೂ ಹೆಚ್ಚು ಮಳೆ ಸುರಿದಿದೆ. 

news18-kannada
Updated:October 24, 2020, 12:03 PM IST
Bangalore Rain: ಮಳೆ ಹಾನಿ ಪ್ರದೇಶಕ್ಕೆ ಸಚಿವ ಆರ್​.ಅಶೋಕ್ ಭೇಟಿ; ರಾಜಕಾಲುವೆ ಒತ್ತುವರಿ ಮಾಡಿದರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ
ಸಚಿವ ಆರ್. ಅಶೋಕ್
  • Share this:
ಬೆಂಗಳೂರು(ಅ.24): ಬೆಂಗಳೂರಿನಲ್ಲಿ ಮಳೆ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ.  ಮಳೆ ಅವಾಂತರಕ್ಕೆ ಸಾವಿರಾರು ಜನ ಮನೆ ಕಳೆದುಕೊಂಡಿದ್ದಾರೆ.  ಮಳೆಯಿಂದ ಹಾನಿ ಆಗಿರುವ ಪ್ರದೇಶಕ್ಕೆ ಪರಿಹಾರ ನೀಡುವಂತೆ ಕಂದಾಯ ಸಚಿವ ಆರ್​. ಅಶೋಕ್​​ ಸಿಎಂ ಬಿ.ಎಸ್. ಯಡಿಯೂರಪ್ಪನವರ ಬಳಿ ಮನವಿ ಮಾಡಿದ್ದಾರೆ. ಅದೇ ರೀತಿ ಆರ್​.ಅಶೋಕ್ ಮನವಿಗೆ ಸ್ಪಂದಿಸಿರುವ ಸಿಎಂ ಬಿಎಸ್​ವೈ ಪರಿಹಾರ ಘೋಷಿಸಲು ನಿರ್ಧರಿಸಿದ್ದಾರೆ.  ಸಚಿವ ಆರ್​.ಅಶೋಕ್ ಕ್ಷೇತ್ರದಲ್ಲೇ ಹೆಚ್ಚು ಮಳೆಯಿಂದ ಹಾನಿಯಾಗಿದೆ. ಹೊಸಕೆರೆಹಳ್ಳಿ, ದತ್ತಾತ್ರೇಯ ನಗರದಲ್ಲಿ ಹೆಚ್ಚು ಹಾನಿಯಾಗಿದ್ದು, ಈ ಮಳೆ ಹಾನಿ ಪ್ರದೇಶಕ್ಕೆ ಆರ್​.ಅಶೋಕ್ ಭೇಟಿ ನೀಡಲು ಮುಂದಾಗಿದ್ದಾರೆ.  ಸಚಿವ ಆರ್.ಅಶೋಕ್ ರಾಜಕಾಲುವೆ ಪರಿಶೀಲನೆಗೆ ಅಧಿಕಾರಿಗಳ ಜೊತೆ ತೆರಳಿದ್ದಾರೆ. ನೀರಿನ ಪ್ರಮಾಣ ಹೆಚ್ಚಾಗಿ ದತ್ತಾತ್ರೇಯ ನಗರಕ್ಕೆ ನೀರು ನುಗ್ಗಿದ ಬಗ್ಗೆ ಅಧಿಕಾರಿಗಳಿಂದ ಸಚಿವರು ವಿವರಣೆ‌‌ ಪಡೆದಿದ್ದಾರೆ.

ಬಳಿಕ ಮಾತನಾಡಿದ ಸಚಿವ ಆರ್. ಅಶೋಕ್, ರಾಜಕಾಲುವೆ ಒತ್ತುವರಿ ಮಾಡಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಈಗ ಏನು ಅವಾಂತರ ಆಗಿದೆ ಎನ್ನುವುದನ್ನು ಪರಿಶೀಲನೆ ಮಾಡಲಾಗಿದೆ. ರಾತ್ರಿ ಬಂದು ಎಲ್ಲರ ಮನೆಗೆ ಭೇಟಿ ಕೊಟ್ಟಿದ್ದೇನೆ.  ಏನು ನಷ್ಟವಾಗಿದೆಯೋ ಅದಕ್ಕೆ ಪರಿಹಾರ ಕೊಡಲಾಗುತ್ತದೆ.  ಅದಕ್ಕಾಗಿಯೇ ಬಿಬಿಎಂಪಿ ಅಧಿಕಾರಿಗಳ ತಂಡ ಮಾಡಿ ಚರ್ಚಿಸಲಾಗಿದೆ ಎಂದು ಹೇಳಿದರು.

ಮಧ್ಯಾಹ್ನ 12.30ಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಖಂಡಿತವಾಗಿ ಸಿಎಂ ಪರಿಹಾರ ಕೊಡಲಿದ್ದಾರೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ. ಮತ್ತೆ ಈ ರೀತಿ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಆರ್​.ಅಶೋಕ್ ಹೇಳಿದರು.

Bangalore Rain: ವರುಣನ ಆರ್ಭಟಕ್ಕೆ ಬೆಂಗಳೂರು ತತ್ತರ; ಇಂದು ಕೂಡ ಭಾರೀ ಮಳೆಯಾಗಲಿದೆ ಎಚ್ಚರ!

ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವ ವಿಚಾರವಾಗಿ, ಸಿಎಂ ಯಡಿಯೂರಪ್ಪ ಮಧ್ಯಾಹ್ನ ಬಿಬಿಎಂಪಿ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಲಿದ್ದಾರೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಬಗ್ಗೆ, ಸಂತ್ರಸ್ತರಿಗೆ ನೆರವು ಒದಗಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಸೂಕ್ತ ಪರಿಹಾರ ಘೋಷಣೆ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡವರಿಗೆ, ಮನೆ ಕಳೆದುಕೊಂಡವರಿಗೆ ಪರಿಹಾರ ಹಾಗೂ ಆಹಾರ ಪದಾರ್ಥಗಳ ವಿತರಣೆ ಬಗ್ಗೆ ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತದೆ.

ಬೆಂಗಳೂರಲ್ಲಿ ನಿನ್ನೆ ಸುರಿದಿದ್ದು ಎರಡು ಗಂಟೆ ಮಳೆಯಾದರೂ, ಮಳೆ ಸುರಿದ ಪ್ರಮಾಣ ಜಾಸ್ತಿ. ಸಿಲಿಕಾನ್ ಸಿಟಿ ಬೆಂಗಳೂರಿನ ಏರಿಯಾಗಳಲ್ಲಿ ಎಷ್ಟೆಷ್ಟು ಮಳೆಯಾಗಿದೆ ಎಂಬುದನ್ನು ಕೇಳಿದರೆ ಅಚ್ಚರಿಯಾಗುತ್ತದೆ. ಬೆಂಗಳೂರು ದಕ್ಷಿಣ ಹಾಗೂ ಆರ್.ಆರ್ ನಗರ ವಲಯದಲ್ಲೇ ಹೆಚ್ಚು ಮಳೆಯಾಗಿದೆ. ಕೆಲ ಪ್ರದೇಶಗಳಲ್ಲಿ 100 ಮಿ.ಮೀ. ಗೂ ಹೆಚ್ಚು ಮಳೆ ಸುರಿದಿದೆ.
ಆರ್.ಆರ್ ನಗರದಲ್ಲಿ 109 ಮಿ.ಮೀ. ಮಳೆ, ಹೆಮ್ಮಿಗೆಪುರದಲ್ಲಿ 107 ಮಿ.ಮೀ ಮಳೆ,  ಕೆಂಗೇರಿಯಲ್ಲಿ 109 ಮಿ.ಮೀ. ಮಳೆ, ಉಲ್ಲಾಳದಲ್ಲಿ 105 ಮಿ.ಮೀ ಮಳೆ, ವಿದ್ಯಾಪೀಠದಲ್ಲಿ 97 ಮಿ.ಮೀ ಮಳೆ, ಹೊಸಕೆರೆಹಳ್ಳಿಯಲ್ಲಿ 96.5 ಮಿ.ಮೀ ಮಳೆ, ಉತ್ತರಹಳ್ಳಿಯಲ್ಲಿ 90 ಮಿ.ಮೀ ಮಳೆ, ಕೋಣನಕುಂಟೆಯಲ್ಲಿ 85 ಮಿ.ಮೀ ಮಳೆ,   ಬಸವನಗುಡಿ, ಗವಿಗಂಗಾಧರೇಶ್ವರ ದೇವಸ್ಥಾನದ ಬಳಿ 81.5 ಮಿ.ಮೀ ಮಳೆ,  ಶಾಖಾಂಬರಿ ನಗರದಲ್ಲಿ 81 ಮಿ.ಮೀ ಮಳೆ, ಕುಮಾರಸ್ವಾಮಿ ಲೇಔಟ್ 81 ಮಿ.ಮೀ. ಮಳೆ, ಜಯನಗರದಲ್ಲಿ 72 ಮಿ.ಮೀ ಮಳೆಯಾಗಿದೆ.
Published by: Latha CG
First published: October 24, 2020, 12:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading