Bangalore: ಮಟಮಟ ಮಧ್ಯಾಹ್ನ ಬೆಂಗಳೂರಿನ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು

ಮಾಗಡಿ ರಸ್ತೆಯ ಬಳಿ ವೆಸ್ಟ್​ ಆಫ್​ ಕಾರ್ಡ್​ ರೋಡ್​ನಲ್ಲಿ ಸಾಗುತ್ತಿದ್ದ ಕಾರಿನ ಇಂಜಿನ್ ಹಬೆಗೆ ಬೆಂಕಿ ಹೊತ್ತಿಕೊಂಡಿತ್ತು. ಇಂಜಿನ್​ನಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಕಾರು ನಿಲ್ಲಿಸಿದ ಚಾಲಕ ನೀರು ತರಲೆಂದು ಹೋಗಿದ್ದ. ಚಾಲಕ ವಾಪಾಸ್ ಬರುವುದರೊಳಗೆ ಕಾರಿಗೆ ಬೆಂಕಿ ಹೊತ್ತಿ ಉರಿದಿದೆ.

news18-kannada
Updated:August 8, 2020, 3:44 PM IST
Bangalore: ಮಟಮಟ ಮಧ್ಯಾಹ್ನ ಬೆಂಗಳೂರಿನ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು
ಬೆಂಗಳೂರಿನ ರಸ್ತೆಯಲ್ಲಿ ಕಾರಿಗೆ ಬೆಂಕಿ
  • Share this:
ಬೆಂಗಳೂರು (ಆ. 8): ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿತ್ತು. ಆದರೆ, ಇಂದು ಬೆಳಗ್ಗೆಯಿಂದ ಬಿಸಿಲು ಶುರುವಾಗಿದೆ. ಇಂದು ಮಧ್ಯಾಹ್ನ ಬೆಂಗಳೂರಿನ ಮಾಗಡಿ ರಸ್ತೆಯ ಬಳಿ ಹೋಗುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಚಾಲಕ ಕಾರನ್ನು ನಿಲ್ಲಿಸಿ ಕೆಳಗೆ ಇಳಿದಿದ್ದ. ಈ ವೇಳೆ ನೋಡನೋಡುತ್ತಿದ್ದಂತೆ ನಡುರಸ್ತೆಯಲ್ಲಿ ಕಾರು ಹೊತ್ತಿ ಉರಿದಿದೆ.

ಕಾರಿನಲ್ಲಿದ್ದ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಆದರೆ, ಕಾರು ಸಂಪೂರ್ಣ ಸುಟ್ಟುಹೋಗಿದೆ. ಮಾಗಡಿ ರಸ್ತೆಯ ಬಳಿ ವೆಸ್ಟ್​ ಆಫ್​ ಕಾರ್ಡ್​ ರೋಡ್​ನಲ್ಲಿ ಸಾಗುತ್ತಿದ್ದ ಕಾರಿನ ಇಂಜಿನ್ ಹಬೆಗೆ ಬೆಂಕಿ ಹೊತ್ತಿಕೊಂಡಿತ್ತು. ಇಂಜಿನ್​ನಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಕಾರು ನಿಲ್ಲಿಸಿದ ಚಾಲಕ ನೀರು ತರಲೆಂದು ಹೋಗಿದ್ದ. ಕಾರು ನಿಲ್ಲಿಸಿ ನೀರು ತರಲೆಂದು ತೆರಳಿದ್ದ ಚಾಲಕ ವಾಪಾಸ್ ಬರುವುದರೊಳಗೆ ಕಾರಿಗೆ ಬೆಂಕಿ ಹೊತ್ತಿ ಧಗಧಗನೆ ಉರಿದಿದೆ.

ಬೆಂಗಳೂರಿನ ರಸ್ತೆಯಲ್ಲಿ ಹೊತ್ತಿ ಉರಿದ ಕಾರಿನ ಬೆಂಕಿ ಆರಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ


ಇದನ್ನೂ ಓದಿ: ಮಗಳ ಕೊಲೆ ಆರೋಪದಲ್ಲಿ ಜೈಲು ಸೇರಿದ ಅಪ್ಪ; ಪ್ರಿಯಕರನ ಜೊತೆ ಯುವತಿ ಪತ್ತೆ!

ರಸ್ತೆ ಮಧ್ಯೆ ಕಾರು ಹೊತ್ತಿ ಉರಿಯುತ್ತಿರುವುದನ್ನು ನೋಡಿದವರು ಕೂಡಲೇ ಸಂಚಾರಿ ಪೊಲೀಸ್ ಮತ್ತು ಅಗ್ನಿ ಶಾಮಕ‌ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
Published by: Sushma Chakre
First published: August 8, 2020, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading