HOME » NEWS » State » BANGALORE IS NO1 CITY AT VENTURE CAPITAL MAK

ಸಿಲಿಕಾನ್ ಸಿಟಿಗೆ ಮತ್ತೊಂದು ಗರಿ : Venture Capital ನಲ್ಲಿ ಬೆಂಗಳೂರು No.1

ಲಂಡನ್ ನ ಪ್ರಖ್ಯಾತ ಹೂಡಿಕೆ ಹಾಗೂ ಟೆಕ್ಕಿ ಸಂಸ್ಥೆ ಡೀಲ್ ರೂಂ.ಕಾಂ ಎಂಬ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. Venture Capital ಗೆ ಜಗತ್ತಿನ ಅತ್ಯಂತ ಸೂಕ್ತ ಜಾಗ ಬೆಂಗಳೂರು ಎಂಬುವುದು ಆ ಸಂಸ್ಥೆಯ ಅಭಿಪ್ರಾಯ.

MAshok Kumar | news18-kannada
Updated:January 29, 2021, 7:15 PM IST
ಸಿಲಿಕಾನ್ ಸಿಟಿಗೆ ಮತ್ತೊಂದು ಗರಿ : Venture Capital ನಲ್ಲಿ ಬೆಂಗಳೂರು No.1
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಮತ್ತೊಂದು ಗರಿ ಸಂದಿದೆ. ಐಟಿ-ಬಿಟಿ ಸಿಟಿ ಬೆಂಗಳೂರು ಹೆಸರಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ನಮೂದಾಗಿದೆ. ಹೌದು, ಬೆಂಗಳೂರು ಸಾಹಸೋದ್ಯಮ ಬಂಡವಾಳ ಹೂಡಿಕೆಯಲ್ಲಿ ವಿಶ್ವದ ಇತರೆ ಮೆಟ್ರೋ ಪಾಲಿಟನ್ ನಗರಗಳನ್ನ ಹಿಂದಿಕ್ಕಿದೆ. ಈ ಮೂಲಕ Venture Capital ನಲ್ಲಿ ಬೆಂಗಳೂರು ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ಏರಿದೆ. ರಾಜ್ಯ ಅಲ್ಲ.. ದೇಶ ಅಲ್ಲ.. ಜಾಗತಿಕ ಮಟ್ಟದಲ್ಲೇ ಬೆಂಗಳೂರಿಗೆ ಅದರದ್ದೇ ಆದ ಘನತೆ ಗೌರವ ಇದೆ. ಟೆಕ್ನಾಲಜಿ ಆಗಲಿ, ಆರೋಗ್ಯ ಕ್ಷೇತ್ರವಾಗಲಿ. ಏನೇ ಆದರೂ ಬೆಂಗಳೂರು ತನ್ನದೇ ಆದ ಛಾಪು ಮೂಡಿಸಿಕೊಂಡಿದೆ. ಈಗ ಅಂಥದ್ದೇ ಮತ್ತೊಂದು ಗರಿಯನ್ನ ಬೆಂಗಳೂರು ಮುಡಿಗೇರಿಸಿಕೊಂಡಿದೆ. ಅದು ಬೇರೇನು ಅಲ್ಲ, ಸಾಹಸೋದ್ಯಮ ಬಂಡವಾಳ ಕ್ಷೇತ್ರದಲ್ಲಿ ಇಡೀ ಜಗತ್ತಿನಲ್ಲೇ ಅತ್ಯಂತ ಸೂಕ್ತ ನಗರ ಬೆಂಗಳೂರು ಎಂಬ ಹೆಗ್ಗಳಿಕೆ ನಗರಕ್ಕೆ ಸಿಕ್ಕಿದೆ. ಅಲ್ದೇ ಸಾಹಸೋದ್ಯಮ ಹೂಡಿಕೆಯಲ್ಲಿ ದೊಡ್ಡಣ್ಣ ಎನಿಸಿಕೊಂಡಿದ್ದ ಲಂಡನ್ ನಗರವನ್ನೂ ನಮ್ಮ ಬೆಂಗಳೂರು ಹಿಂದಿಕ್ಕಿದೆ. 

ಲಂಡನ್ ನ ಪ್ರಖ್ಯಾತ ಹೂಡಿಕೆ ಹಾಗೂ ಟೆಕ್ಕಿ ಸಂಸ್ಥೆ ಡೀಲ್ ರೂಂ.ಕಾಂ ಎಂಬ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. Venture Capital ಗೆ ಜಗತ್ತಿನ ಅತ್ಯಂತ ಸೂಕ್ತ ಜಾಗ ಬೆಂಗಳೂರು ಎಂಬುವುದು ಆ ಸಂಸ್ಥೆಯ ಅಭಿಪ್ರಾಯ. ಅದನ್ನು ಅಂಕಿ ಅಂಶಗಳ ಮೂಲಕ ಆ ಸಂಸ್ಥೆ ಸಾಬೀತು ಮಾಡಿದೆ. ಜಗತ್ತಿನ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಮೆಟ್ರೊ ಪಾಲಿಟನ್ ನಗರವನ್ನು ಆಧರಿಸಿ ಈ ಸರ್ವೇ ಮಾಡಲಾಗಿದೆ‌.

ಈ ಪೈಕಿ ಪಟ್ಟಿಯಲ್ಲಿ ನಮ್ಮ ಬೆಂಗಳೂರು ನಂಬರ್ 1 ಸ್ಥಾನದಲ್ಲಿ. 2016 ರಿಂದ 2020ರ ಐದು ವರ್ಷದ ಅವಧಿಯಲ್ಲಾದ ಬದಲಾವಣೆ ಹಾಗೂ ಅಭಿವೃದ್ಧಿಯನ್ನು ಪರಿಗಣಿಸಿ ಈ ಸರ್ವೇ ಮಾಡಲಾಗಿದೆ.

ಇದನ್ನೂ ಓದಿ: Blast in Delhi: ದೆಹಲಿಯ ಇಸ್ರೇಲ್​ ರಾಯಭಾರಿ ಕಚೇರಿ ಬಳಿ ಬಾಂಬ್​ ಸ್ಫೋಟಜಗತ್ತಿನ ಇತರೆ ಮೆಟ್ರೋ ಪಾಲಿಟನ್ ನಗರಕ್ಕಿಂತ 5 ಪಟ್ಟು ಹೆಚ್ಚು ಸಾಹಸೋದ್ಯಮ ಬಂಡವಾಳ ಹೂಡಿಕೆ ಬೆಂಗಳೂರಿನಲ್ಲಾಗಿದೆ. 2016ರಿಂದ 2020ರ 5 ವರ್ಷದ ಅವಧಿಯಲ್ಲಿ ಶೇ.5.4ರಷ್ಟು ದೊಡ್ಡದಾಗಿ ವಿಸ್ತರಿಸಿಕೊಂಡಿದೆ ಬೆಂಗಳೂರು. ಅತಿ ಹೆಚ್ಚು ಸ್ಟಾರ್ಟ್ ಅಪ್ ಗಳು ಹಾಗೂ ಅಂತರಾಷ್ಟ್ರೀಯ ಹೂಡಿಕೆ ಆಗಿರೋದೇ ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಆರ್ಥಿಕ ತಜ್ಞರು.
Youtube Video

ಮಹಾರಾಷ್ಟ್ರದ ಮುಂಬೈ ಕೂಡ ಟಾಪ್ 10 ಪಟ್ಟಿಯ ಆರನೇ ಸ್ಥಾನದಲ್ಲಿದೆ. ಮುಂಬೈನಲ್ಲಿ 1.7% ರಷ್ಟು ಸಾಹಸೋದ್ಯಮ ಬಂಡವಾಳ ಹೆಚ್ಚಾಗಿದೆ. ಇನ್ನು ಬೆಂಗಳೂರಿಗೆ ಹೋಲಿಸಿಕೊಂಡರೆ ಲಂಡನ್ ಗೆ ಇರೋದು 3%ರಷ್ಟು ಹೆಚ್ಚಳ ಮಾತ್ರ. ಜಗತ್ತಿನ ಇತರೆ ನಗರಗಳಿಗೆ ಹೋಲಿಸಿಕೊಂಡರೆ 7.2 ಬಿಲಿಯನ್ ಡಾಲರ್ ಅಂದರೆ 5 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದೆ ಬೆಂಗಳೂರು.(ವರದಿ- ಆಶಿಕ್ ಮುಲ್ಕಿ)
Published by: MAshok Kumar
First published: January 29, 2021, 7:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories