Bangalore Crime: ಬಾರ್ ಬಳಿ ಕುಡಿದು ಯುವಕರ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

ಪ್ರಮುಖ ಆರೋಪಿ ಪ್ರೇಮ್ ಕುಮಾರ್ ಬಂಧನ ವೇಳೆ ಪೊಲೀಸ್ ಕಾನ್ಸ್​​ಟೇಬಲ್ ರಂಗನಾಥ ಮೇಲೆ ದಾಳಿ ಮಾಡಿದ್ದಾನೆ. ಆರೋಪಿ ದಾಳಿಯಿಂದ ಕಾನ್ಸ್​​ಟೇಬಲ್​​ ರಂಗನಾಥ ಅವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

news18-kannada
Updated:September 17, 2020, 1:20 PM IST
Bangalore Crime: ಬಾರ್ ಬಳಿ ಕುಡಿದು ಯುವಕರ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು
ಆರೋಪಿ ಪ್ರೇಮ್​ಕುಮಾರ್
  • Share this:
ಬೆಂಗಳೂರು(ಸೆ.17): ಬಾರ್ ನಲ್ಲಿ ಕುಡಿದು ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅಸಾಮಿಯನ್ನ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಪ್ರೇಮ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿ ಪ್ರೇಮ್ ಕುಮಾರ್ ಇತ್ತೀಚಿಗೆ ಡಿಜೆ ಹಳ್ಳಿಯ ವಿನುತಾ ಬಾರ್ ಬಳಿ ತನ್ನ ಸಹಚರರೊಂದಿಗೆ ಎಣ್ಣೆ ಹೊಡೆಯುತ್ತಿದ್ದನಂತೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ದೀಪಕ್ ಹಾಗೂ ಕಪಿಲ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾನೆ. ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ ಅಸಾಮಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹಲ್ಲೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಕಳೆದ ರಾತ್ರಿ ಆರೋಪಿಗಳಾದ ಶಿವು ಮತ್ತು ಪ್ರೇಮ್ ಕುಮಾರ್ ಡಿಜೆ ಹಳ್ಳಿ ಬಳಿಯ ಎಲ್ ಆರ್ ಬಂಡೆ ಬಳಿ ಅಡಗಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದು ಬಂಧನಕ್ಕೆ ಬಲೆ ಬೀಸಿದ್ದಾರೆ.

ಪೊಲೀಸರು ಆರೋಪಿಗಳ ರೌಂಡಪ್ ಮಾಡಿದ ವೇಳೆ ಶಿವು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಮತ್ತೊಬ್ಬ ಪ್ರಮುಖ ಆರೋಪಿ ಪ್ರೇಮ್ ಕುಮಾರ್ ಬಂಧನ ವೇಳೆ ಪೊಲೀಸ್ ಕಾನ್ಸ್​​ಟೇಬಲ್ ರಂಗನಾಥ ಮೇಲೆ ದಾಳಿ ಮಾಡಿದ್ದಾನೆ. ಆರೋಪಿ ದಾಳಿಯಿಂದ ಕಾನ್ಸ್​​ಟೇಬಲ್​​ ರಂಗನಾಥ ಅವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೈಸೂರಿನಲ್ಲೊಬ್ಬ ಆಧುನಿಕ ಶ್ರವಣಕುಮಾರ; ತಾಯಿ ಆಸೆ ಪೂರೈಸಲು ಹಳೇ ಸ್ಕೂಟರ್​​​​ನಲ್ಲೇ ತೀರ್ಥಯಾತ್ರೆ ಮಾಡಿಸಿದ ಮಗ

ಪೊಲೀಸರ ಮೇಲೆ ಆರೋಪಿ ಅಟ್ಯಾಕ್ ಮಾಡಿದ ವೇಳೆ ಸ್ಥಳದಲ್ಲೇ ಇದ್ದ ಪಿಎಸ್ಐ ನಾಗದೇವ್ ಆರೋಪಿ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಸದ್ಯ ಗಾಯಾಳು ಆರೋಪಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಇನ್ನು, ಆರೋಪಿಗಳು ವಿನುತಾ ಬಾರ್ ಬಳಿ ಗಲಾಟೆ ಮಾಡಿ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿ ಪ್ರೇಮ್ ಕುಮಾರ್ ಬಂಧನಕ್ಕೆ ಖೆಡ್ಡಾ ತೋಡಿದ್ದರು ಎನ್ನಲಾಗಿದೆ. ಸದ್ಯ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Published by: Latha CG
First published: September 17, 2020, 1:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading