Bangalore Crime: ಹೆಂಡತಿಯನ್ನು ಕೊಂದು ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಲು ಯತ್ನಿಸಿದ ಗಂಡ

Bengaluru News: ದಿನನಿತ್ಯದ ಜಗಳದಿಂದ ಬೇಸತ್ತಿದ್ದ ನಾಗೇಶ್ ಪತ್ನಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದನಂತೆ. ಪತ್ನಿಯನ್ನ ಕೊಲೆ ಮಾಡಿದರೆ ತಾನು ತನ್ನ ಪ್ರೇಯಸಿಯೊಂದಿಗೆ ಜೀವನ ನಡೆಸಲು ಸಾಧ್ಯ ಎಂದು ಕೊಲೆಗೆ ಸಂಚು ರೂಪಿಸಿದ್ದಾನೆ.

news18-kannada
Updated:August 5, 2020, 3:23 PM IST
Bangalore Crime: ಹೆಂಡತಿಯನ್ನು ಕೊಂದು ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಲು ಯತ್ನಿಸಿದ ಗಂಡ
ಬಂಧಿತ ಆರೋಪಿ
  • Share this:
ಬೆಂಗಳೂರು(ಆ.05): ಹೆಂಡತಿಯನ್ನು ಕೊಲೆ ಮಾಡಿ ಸಿನಿಮೀಯ ರೀತಿಯಲ್ಲಿ ಕಥೆ ಕಟ್ಟಿದ ವ್ಯಕ್ತಿಯನ್ನ ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆಂದ್ರಪ್ರದೇಶದ ಚಿತ್ತೂರು ಮೂಲದ ನಾಗೇಶ್ ಬಂಧಿತ ಆರೋಪಿ. ಆರೋಪಿ ನಾಗೇಶ್ ಆಗಸ್ಟ್ 3 ರಂದು ಬೆಳಗಿನ ಜಾವ 5.30ರ ವೇಳೆ ತನ್ನ ಹೆಂಡತಿ ಸಂಧ್ಯಾ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಪತ್ನಿಯನ್ನ ಕೊಲೆಗೈದ ಬಳಿಕ ಪೊಲೀಸರ ತನಿಖೆಯಿಂದ ಪಾರಾಗಲು ಸಿನಿಮೀಯ ರೀತಿಯಲ್ಲಿ ಕಥೆ ಕಟ್ಟಿ ಖಾಕಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾಗಿದ್ದ ಎನ್ನಲಾಗಿದೆ. ಆರೋಪಿ ನಾಗೇಶ್ ಅನ್ಯ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು ಈ ವಿಷಯ ಹೆಂಡತಿಗೆ ಗೊತ್ತಾಗಿತ್ತು. ಗಂಡನ ಈ ವರ್ತನೆ ಬಗ್ಗೆ ಪತ್ನಿ ಸಂಧ್ಯಾ ಆಗಾಗ ಮನೆಯಲ್ಲಿ ಜಗಳವಾಡುತ್ತಿದ್ದಳು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ.

ದಿನನಿತ್ಯದ ಜಗಳದಿಂದ ಬೇಸತ್ತಿದ್ದ ನಾಗೇಶ್ ಪತ್ನಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದನಂತೆ. ಪತ್ನಿಯನ್ನ ಕೊಲೆ ಮಾಡಿದರೆ ತಾನು ತನ್ನ ಪ್ರೇಯಸಿಯೊಂದಿಗೆ ಜೀವನ ನಡೆಸಲು ಸಾಧ್ಯ ಎಂದು ಕೊಲೆಗೆ ಸಂಚು ರೂಪಿಸಿದ್ದಾನೆ. ಇದೇ 3 ರಂದು ಊರಿಗೆ ಹೋಗುವುದಾಗಿ ಹೇಳಿ ಎರಡು ಬಸ್ ಟಿಕೆಟ್ ಬುಕ್ ಮಾಡಿದ ಆರೋಪಿ ನಾಗೇಶ್, ತನ್ನ ತಾಯಿ ಜೊತೆ ಊರಿಗೆ ಹೊರಟಿದ್ದನಂತೆ.

Ram Mandir: ಜೈ ಶ್ರೀರಾಮ ಘೋಷಣೆ ಕೇವಲ ಅಯೋಧ್ಯೆಯಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ; ಪ್ರಧಾನಿ ಮೋದಿ

ಬಳಿಕ ತನ್ನ ತಾಯಿಯನ್ನ ಬಸ್ ನಲ್ಲಿ ಊರಿಗೆ ಕಳುಹಿಸಿ ಮಾರ್ಗ ಮಧ್ಯೆ ಬಸ್ ಇಳಿದು ವಾಪಸ್ ಮನೆಗೆ ಬಂದಿದ್ದಾನೆ. ದಿನವಿಡೀ ಸುತ್ತಾಡಿ ಬಳಿಕ ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ಹೋಗಿದ್ದಾನೆ. ಈ ವೇಳೆ ಮನೆಯಲ್ಲಿ ಪತ್ನಿ ಮಲಗಿರುವುದು ಕಂಡು ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಬಳಿಕ ಸಿನಿಮೀಯ ರೀತಿಯಲ್ಲಿ ಬಣ್ಣ ಕಟ್ಟಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗಿದೆ. ಹೆಂಡತಿ ಕೊಲೆ ಬಳಿಕ ಆಕೆಯ ಮೈಮೇಲಿನ ಬಟ್ಟೆ ಎಳೆದಾಡಿದ ಅಸಾಮಿ ನಂತರ ಆಕೆಯ ಪಕ್ಕದಲ್ಲಿ ಎರಡು ಪ್ಲಾಸ್ಟಿಕ್ ಗ್ಲಾಸ್ ಮತ್ತು ಖಾಲಿ ಮದ್ಯದ ಬಾಟಲ್ ಇಟ್ಟಿದ್ದನಂತೆ. ಇದರಿಂದ ಯಾರೋ ಅಪರಿಚಿತ ವ್ಯಕ್ತಿ ಮನೆಗೆ ಬಂದು ಕೊಲೆ ಮಾಡಿರುವ ರೀತಿ ಸನ್ನಿವೇಶ ಸೃಷ್ಟಿಸಿದ್ದನಂತೆ.

ಆದರೆ ಮಾರತ್ತಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ನಾಗೇಶನನ್ನು  ವಿಚಾರಣೆ ಮಾಡಿದ ವೇಳೆ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಸದ್ಯ ಮಾರತ್ತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ನಾಗೇಶನ ತೀವ್ರ ವಿಚಾರಣೆ ನಡೆಸಿದ್ದಾರೆ.
Published by: Latha CG
First published: August 5, 2020, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading