ಬೆಂಗಳೂರಿನ ವ್ಯಕ್ತಿಯ ಅನುಮಾನಾಸ್ಪದ ಸಾವು; ಒಂದು ವಾರದ ಬಳಿಕ ಗುಂಡಿಯಿಂದ ಶವ ತೆಗೆದು ಮರಣೋತ್ತರ ಪರೀಕ್ಷೆ

Bengaluru Crime: ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿಯೂ ತನ್ನ ಐದನೇ ವರ್ಷದಲ್ಲಿಯೇ  ಕೈಗೆ ಪೆಟ್ಟಾಗಿದ್ದ ಕಾರಣ ಆತನ ಎಡಗೈ ಅಂದಿನಿಂದಲೂ ನಿಷ್ಕ್ರಿಯಗೊಂಡಿತ್ತು. ಹಾಗಾಗಿ, ಆತ ತನ್ನ ಒಂದು ಕೈಯಿಂದ ಹೇಗೆ ನೇಣಿಗೆ ಶರಣಾದ ಎಂಬ ಅನುಮಾನ ಗ್ರಾಮಸ್ಥರಲ್ಲಿ ಮೂಡಿದೆ.

news18-kannada
Updated:August 2, 2020, 2:23 PM IST
ಬೆಂಗಳೂರಿನ ವ್ಯಕ್ತಿಯ ಅನುಮಾನಾಸ್ಪದ ಸಾವು; ಒಂದು ವಾರದ ಬಳಿಕ ಗುಂಡಿಯಿಂದ ಶವ ತೆಗೆದು ಮರಣೋತ್ತರ ಪರೀಕ್ಷೆ
ನೆಲಮಂಗಲದಲ್ಲಿ ಗುಂಡಿಯಿಂದ ಹೆಣ ಹೊರೆ ತೆಗೆಯುತ್ತಿರುವ ಜನರು
  • Share this:
ನೆಲಮಂಗಲ (ಆ. 2):  ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ವಾರದ ನಂತರ ಶವವನ್ನು ಗುಂಡಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕೆ.ಜಿ. ಜಾಜೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಕೆ.ಜಿ.ಜಾಜೂರು ಗ್ರಾಮದ ಸದಾನಂದ (41) ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಈತ ವ್ಯವಸಾಯ ಮಾಡುತ್ತಿದ್ದು, ಗ್ರಾಮ ಪಂಚಾಯಿತಿ ವಾಟರ್ ಮ್ಯಾನ್ ಕೆಲಸದ ಜೊತೆಗೆ ಕೂಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. 

ಜುಲೈ 25ರಂದು ಸಂಜೆ ಸುಮಾರು 4.30ಕ್ಕೆ  ಘಟನೆ ನಡೆದಿದ್ದು, ಮೃತನು ಮದ್ಯವ್ಯಸನಿಯಾಗಿದ್ದ. ಪ್ರತಿನಿತ್ಯ ಮನೆಗೆ ಮದ್ಯ ಸೇವಿಸಿ ಬರುತ್ತಿದ್ದ ಎನ್ನಲಾಗಿದೆ. ಜು.26 ರಂದು ಈತನ ದೊಡ್ಡ ಮಗಳನ್ನು ಸೀಮಂತ ಕಾರ್ಯಕ್ರಮಕ್ಕೆ ಕರೆತರಬೇಕಾದ ಹಿನ್ನೆಲೆಯಲ್ಲಿ ಜು. 25ರಂದು ಮನೆಗೆ ಬೇಕಾದ ಸಾಮಗ್ರಿಗಳನ್ನು ತಂದು ಕೊಟ್ಟು ಊರಲ್ಲಿ, ಹೊಲದ ಬಳಿ ಎಲ್ಲಾ ಸುತ್ತಾಡಿದ್ದಾನೆ. ನಂತರ ಮನೆಗೆ ಸಂಜೆ 4.30ರ ವೇಳೆಗೆ ಮನೆಗೆ ಬಂದಾಗ ಮನೆಯಲ್ಲಿ ಸಣ್ಣಪುಟ್ಟ ಗಲಾಟೆಯಾಗಿದ್ದು ಮನ ನೊಂದು ಮನೆಯ ರೂಮಿನಲ್ಲಿ ಮಪ್ಲರ್‌ ಅನ್ನು ಕಬ್ಬಿಣದ ರಾಡಿಗೆ ಸುತ್ತಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಪಂಜಾಬ್‌ ನಕಲಿ ಮದ್ಯ ದುರಂತ; 62ಕ್ಕೆ ಏರಿದ ಸಾವಿನ ಸಂಖ್ಯೆ, ಪೊಲೀಸ್‌ ದಾಳಿ ವಿಷ ಜಾಲದ 25 ಜನರ ಬಂಧನ

ನಂತರ ಮೃತನ ಮನೆಯವರು ಯಾರಿಗೂ ತಿಳಿಸದೆ ಮರಣೋತ್ತರ ಪರೀಕ್ಷೆ ನಡಸದೆ, ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸದೆ ಮೃತದೇಹವನ್ನು ಸಾವನ್ನಪ್ಪಿದ ರಾತ್ರಿ ಸುಮಾರು 7 ಗಂಟೆಯ ಸಮಯಕ್ಕೆ ಅಂತ್ಯಸಂಸ್ಕಾರ ಮಾಡಿರುವುದು ಗ್ರಾಮದ ಜನತೆಯ ಸಂಶಯಕ್ಕೆ ಕಾರಣವಾಗಿದೆ.

ಘಟನೆ ಆದ ಮರುದಿನ  ಗ್ರಾಮಸ್ಥರು ಈ ವಿಷಯವನ್ನು ದಾಬಸ್‌ಪೇಟೆ ಪೊಲೀಸರಿಗೆ ತಿಳಿಸಿದ್ದಾರೆ. ಆಗ ಪೊಲೀಸರು ಆತನ ಮನೆಯವರನ್ನು ವಿಚಾರಿಸಿದಾಗ ಕೊರೋನಾ ಹಿನ್ನೆಲೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರೆ ಮೃತದೇಹ ನೀಡುವುದು ತಡವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ದೂರು ನೀಡದೆ ಅಂತ್ಯ ಸಂಸ್ಕಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲೊಂದು ಮನಕಲಕುವ ಘಟನೆ; ಹಬ್ಬಕ್ಕೆಂದು ಊರಿಗೆ ಬಂದಿದ್ದ ಇಬ್ಬರು ಯುವತಿಯರು ತುಂಗೆಯ ಪಾಲು

ಇದರಿಂದ ಅನುಮಾನಗೊಂಡ ಪೊಲೀಸರು ತಹಸೀಲ್ದಾರ್‌ ಸಮ್ಮುಖದಲ್ಲಿ ಒಂದು ವಾರದ ಹಿಂದೆ ಹೂತುಹಾಕಿದ್ದ ಶವವನ್ನು ಹೊರತೆಗೆದಿದ್ದು, ವೈದ್ಯರು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಮತ್ತೆ ಅಂತ್ಯಸಂಸ್ಕಾರ ಮಾಡಿದ್ದಾರೆ.ಮೃತನ ಹೆಂಡತಿಗೆ ಬೇರೆ ಊರಿನ ಗ್ರಾಮದ ವ್ಯಕ್ತಿಯೊಬ್ಬನ ಜೊತೆ ಅಕ್ರಮ ಸಂಬಂಧವಿದ್ದು ಆ ವ್ಯಕ್ತಿ ಜು. 25ರಂದು ಈಕೆಯ ಮನೆಗೆ ಬಂದಿದ್ದನಂತೆ. ಇಬ್ಬರು ಮಾತನಾಡುವಾಗ ಮೃತ ಸದಾನಂದ ಮನೆಗೆ ಹೋಗಿದ್ದಾನೆ. ಆಗ ಆತನ ಹೆಂಡತಿ, ವ್ಯಕ್ತಿಯ ಜೊತೆ ಜಗಳವಾಡಿದ್ದು ಮಾತಿಗೆ ಮಾತು ಬೆಳೆದು ಇಬ್ಬರು ಸೇರಿ ಕೊಲೆ ಮಾಡಿದ್ದಾರೆ. ನಂತರ ಇಬ್ಬರೂ ಸೇರಿ ಆತನನ್ನು ನೇಣಿಗೇರಿಸಿದ್ದಾರೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಅನುಮಾನ ಮೂಡಿಸಿದ ಪ್ಯಾಂಟ್ :

ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡುವಾಗ ಮೃತದೇಹದ ಮೇಲೆ ಸ್ವಲ್ವವೂ ಬಟ್ಟೆ ಬಿಡದಂತೆ ಕಳಚಿ ಅಂತ್ಯಸಂಸ್ಕಾರ ಮಾಡುತ್ತಾರೆ. ಆದರೆ ಈತನನ್ನು ಪ್ಯಾಂಟ್ ಸಮೇತವೇ ಅಂತ್ಯಸಂಸ್ಕಾರ ಮಾಡಿದ್ದು ಇದು ಕೊಲೆಯೋ ಅತ್ಯಹತ್ಯೆಯೋ ಎಂಬ ಅನುಮಾನ ಮೂಡಿಸಿದ್ದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿಯೂ ತನ್ನ ಐದನೇ ವರ್ಷದಲ್ಲಿಯೇ  ಕೈಗೆ ಪೆಟ್ಟಾಗಿದ್ದ ಕಾರಣ ಆತನ ಎಡಗೈ ಅಂದಿನಿಂದಲೂ ನಿಷ್ಕ್ರಿಯಗೊಂಡಿತ್ತು. ಹಾಗಾಗಿ, ಆತ ತನ್ನ ಒಂದು ಕೈಯಿಂದ ಹೇಗೆ ನೇಣಿಗೆ ಶರಣಾದ ಎಂಬ ಅನುಮಾನ ಗ್ರಾಮಸ್ಥರಲ್ಲಿ ಮೂಡಿದೆ.

ಒಟ್ಟಾರೆ ವಾಟರ್ ಮ್ಯಾನ್ ಸಾವಿನ ಸುತ್ತಾ ಅನುಮಾನಗಳ ಹುತ್ತ ಬೆಳೆದು ನಿಂತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸರ ತನಿಖೆಯ ನಂತರ ಘಟನೆಯ ಸತ್ಯಾಸತ್ಯತೆ ಹೊರಬೀಳಬೇಕಿದೆ.
Published by: Sushma Chakre
First published: August 2, 2020, 2:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading