HOME » NEWS » State » BANGALORE CRIME BENGALURU THIEVES ROBBERY IN SUPER MARKET DURING LOCKDOWN SCT

Bangalore Crime: ಲಾಕ್​ಡೌನ್​ನನ್ನೇ ಬಂಡವಾಳ ಮಾಡಿಕೊಂಡ ಕಳ್ಳರು; ಬೆಂಗಳೂರಿನಲ್ಲಿ ಸೂಪರ್ ಮಾರ್ಕೆಟ್ ದರೋಡೆ!

Bengaluru Crime News: ಬಂಡೆಪಾಳ್ಯದ ಬಿಗ್ ಬಾಸ್ಕೆಟ್ ಸೂಪರ್ ಮಾರ್ಕೆಟ್​ನಲ್ಲಿ ತರಕಾರಿ ಖರೀದಿಸುವ ನೆಪದಲ್ಲಿ ಹೋದ ದರೋಡೆ ಗ್ಯಾಂಗ್ ಕ್ಯಾಷಿಯರ್​ಗೆ ಚಾಕು ಇರಿದು ಕೌಂಟರ್​ನಲ್ಲಿದ್ದ 7 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ.

news18-kannada
Updated:August 4, 2020, 2:54 PM IST
Bangalore Crime: ಲಾಕ್​ಡೌನ್​ನನ್ನೇ ಬಂಡವಾಳ ಮಾಡಿಕೊಂಡ ಕಳ್ಳರು; ಬೆಂಗಳೂರಿನಲ್ಲಿ ಸೂಪರ್ ಮಾರ್ಕೆಟ್ ದರೋಡೆ!
ದರೋಡೆ ಮಾಡಲು ಬಂದಿದ್ದ ಕಳ್ಳರು
  • Share this:
ಬೆಂಗಳೂರು (ಆ. 4): ಕೊರೋನಾ ನಿಯಂತ್ರಣ ಮಾಡುವ ಸಲುವಾಗಿ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಒಂದು ವಾರದ ಮಟ್ಟಿಗೆ ಲಾಕ್​ಡೌನ್ ಜಾರಿ ಮಾಡಿತ್ತು‌. ಈ ವೇಳೆ ನಗರದಲ್ಲಿ ಕಟ್ಟುನಿಟ್ಟಾಗಿ ವಾಹನ ಸಂಚಾರ, ಅಂಗಡಿ ಮುಂಗಟ್ಟುಗಳ ವ್ಯಾಪಾರಕ್ಕೂ ಬ್ರೇಕ್ ಹಾಕಲಾಗಿತ್ತು. ಆದರೆ, ಲಾಕ್​ಡೌನ್ ಹೇರಿದ್ದನ್ನೇ ಬಂಡವಾಳ ಮಾಡಿಕೊಂಡ ಕೆಲವು ಕಿಡಿಗೇಡಿಗಳು ಸೂಪರ್ ಮಾರ್ಕೆಟ್ ಒಂದನ್ನು ದೋಚಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಬಂಡೆಪಾಳ್ಯದಲ್ಲಿ ಬೆಳಕಿಗೆ ಬಂದಿದೆ.

ಕೊರೋನಾ ಲಾಕ್​ಡೌನ್ ವೇಳೆ ಮಾಸ್ಕ್ ಹಾಗೂ ಹೆಲ್ಮೆಟ್ ಬಳಸುವುದು ಸಾಮಾನ್ಯವಾಗಿದೆ. ಸೋಂಕು ಹರಡುವಿಕೆ ತಡೆಯಲು ಮಾಸ್ಕ್ ಧರಿಸಿದರೆ ಈ ಗ್ಯಾಂಗ್ ಮಾತ್ರ ಮಾಸ್ಕ್ ಧರಿಸಿ ಕಳ್ಳತನ ಮಾಡಿದ್ದಾರೆ. ಬಂಡೆಪಾಳ್ಯದ ಬಿಗ್ ಬಾಸ್ಕೆಟ್ ಸೂಪರ್ ಮಾರ್ಕೆಟ್​ನಲ್ಲಿ ತರಕಾರಿ ಖರೀದಿಸುವ ನೆಪದಲ್ಲಿ ಹೋದ ದರೋಡೆ ಗ್ಯಾಂಗ್ ಕ್ಯಾಷಿಯರ್​ಗೆ ಚಾಕು ಇರಿದು ಕೌಂಟರ್​ನಲ್ಲಿದ್ದ 7 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: Drone Prathap: ಡ್ರೋನ್ ಪ್ರತಾಪ್ ಎರಡು ಬಾರಿ ಕ್ವಾರಂಟೈನ್ ನಿಯಮ ಉಲ್ಲಂಘನೆ; ಮತ್ತೊಂದು ಕೇಸ್ ದಾಖಲು

ಬೆಂಗಳೂರು ನಗರದಲ್ಲಿ ಜುಲೈ 14ರಿಂದ 22ರವರೆಗೆ ಒಂದು ವಾರ ಲಾಕ್​ಡೌನ್ ಹೇರಲಾಗಿತ್ತು. ಈ ವೇಳೆ ಅಗತ್ಯ ವಸ್ತುಗಳ ಅಂಗಡಿಗಳು ಹೊರತುಪಡಿಸಿ ಉಳಿದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು ಹಾಗೂ ರಸ್ತೆಗಳಲ್ಲಿ ವಾಹನ ಸಂಚಾರಕ್ಕೂ ಬ್ರೇಕ್ ಹಾಕಲಾಗಿತ್ತು. ಈ ವೇಳೆ ಮೂವರು ದುಷ್ಕರ್ಮಿಗಳು ತರಕಾರಿಗಳನ್ನು ಕೊಳ್ಳಲು ಸೂಪರ್ ಮಾರ್ಕೆಟ್​ಗೆ ಹೋಗಿದ್ದು, ರಸ್ತೆಯಲ್ಲಿ ಜನಸಂಚಾರ ಇಲ್ಲದ್ದನ್ನು ಗಮನಿಸಿ ದರೋಡೆ ನಡೆಸಿದ್ದಾರೆ.
Youtube Video

ದರೋಡೆ ವೇಳೆ ಮಾರ್ಕೆಟ್ ನಲ್ಲಿದ್ದ ಕ್ಯಾಷಿಯರ್ ಪವನ್ ಕೈ ಕಾಲುಗಳನ್ನ ಹಗ್ಗದಿಂದ ಕಟ್ಟಿ ಹಣದೊಂದಿಗೆ ಎಸ್ಕೇಪ್ ಆಗಿದ್ದಾರೆ. ಇನ್ನೂ ಈ ಬಗ್ಗೆ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸುತ್ತಲಿನ ಸಿಸಿಟಿವಿಗಳನ್ನ ಪರಿಶೀಲನೆ ನಡೆಸಿ ಮೂವರು ದರೋಡೆಕೋರರಿಗೆ ಬಲೆ ಬೀಸಿದ್ದಾರೆ.
Published by: Sushma Chakre
First published: August 4, 2020, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories