Bangalore Crime: ಬೆಂಗಳೂರು ಮಹಿಳೆ ಹೆಸರಲ್ಲಿ ನಕಲಿ ವಾಟ್ಸಾಪ್ ಖಾತೆ ತೆರೆದು ಹಣಕ್ಕೆ ಡಿಮ್ಯಾಂಡ್

ಆರೋಪಿ ಕೊರೊನಾ ಲಾಕ್ ಡೌನ್ ವೇಳೆ ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗಿದ್ದ. ಈ ವೇಳೆ ನಗರದ ಇಂದಿರಾನಗರ ಮೂಲದ ಕಂಪನಿಯೊಂದು ಕೆಲಸದ ಆಫರ್ ನೀಡಿದೆ. ನಗರದಲ್ಲಿ ಕೆಲಸಕ್ಕೆ ಸೇರಿಕೊಂಡ ಆಸಾಮಿ ಈ ವೇಳೆ ಹಲವು ಜನರ ಪೋನ್ ನಂಬರ್ ಮತ್ತು ಪೋಟೊ ಸಂಗ್ರಹಿಸಿದ್ದ.

news18-kannada
Updated:August 11, 2020, 1:30 PM IST
Bangalore Crime: ಬೆಂಗಳೂರು ಮಹಿಳೆ ಹೆಸರಲ್ಲಿ ನಕಲಿ ವಾಟ್ಸಾಪ್ ಖಾತೆ ತೆರೆದು ಹಣಕ್ಕೆ ಡಿಮ್ಯಾಂಡ್
ಆರೋಪಿ ಶಮೀರ್ ಕುಮಾರ್
  • Share this:
ಬೆಂಗಳೂರು (ಆ. 11): ನಕಲಿ ವಾಟ್ಸಾಪ್ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಡುತ್ತಿದ್ದ ಯುವಕನನ್ನು ಬೆಂಗಳೂರು ಪೂರ್ವ ವಿಭಾಗ ಸೆನ್ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ ಮೂಲದ ಶಮೀರ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿ ಶಮೀರ್ ಕುಮಾರ್ ಬೆಂಗಳೂರಿನ ಮಹಿಳೆಯೊಬ್ಬರ ಪೋಟೊ ಮತ್ತು ನಕಲಿ ಪೋನ್ ನಂಬರ್ ಬಳಸಿಕೊಂಡು ಅವರ ಸ್ನೇಹಿತರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದನಂತೆ. ಮಹಿಳೆ ಹೆಸರಲ್ಲಿ ತನ್ನ ತಾಯಿಗೆ ಅನಾರೋಗ್ಯ ಇದ್ದು ಹಣದ ಅವಶ್ಯಕತೆ ಇದೆ ಯಾರಾದರೂ ಸ್ವಲ್ಪ ಹಣ ಸಹಾಯ ಮಾಡಿ ಅಂತ ವಾಟ್ಸಪ್ ನಲ್ಲಿ ಮಹಿಳೆಯ ಸ್ನೇಹಿತರಿಗೆ ಮೆಸೇಜ್ ಕಳಿಸಿದ್ದನಂತೆ. ವಾಟ್ಸಪ್ ಮೆಸೇಜ್ ನೋಡಿದ ಮಹಿಳೆಯ‌ ಸ್ನೇಹಿತರೊಬ್ಬರು ನಕಲಿ ಅಕೌಂಟ್ ಗೆ 6 ಸಾವಿರ ರೂ. ಹಣ ಕಳಿಸಿದ್ದರಂತೆ.

ಬಳಿಕ ಹಣ ಸಂದಾಯವಾದ ಬಗ್ಗೆ ಮಹಿಳೆಗೆ ಕರೆ ಮಾಡಿ ವಿಚಾರಿಸಿದಾಗ ನಕಲಿ ಖಾತೆ ರಹಸ್ಯ ಬೆಳಕಿಗೆ ಬಂದಿದೆ. ಇದೇ ರೀತಿ ದೂರುದಾರ ಮಹಿಳೆಯ ಹಲವು ಸ್ನೇಹಿತರಿಗೆ ವಾಟ್ಸಪ್ ಮೆಸೇಜ್ ಕಳಿಸಿದ್ದು ಹಣಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ತನ್ನ ಪೋಟೊ ಬಳಸಿಕೊಂಡು ನಕಲಿ ವಾಟ್ಸಪ್ ಖಾತೆ ಇರುವುದು ಬೆಳಕಿಗೆ ಬರುತ್ತಿದ್ದಂತೆ ಮಹಿಳೆ ಪೂರ್ವ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೆನ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ ವೇಳೆ ಡಾರ್ಜಿಲಿಂಗ್‌ ಮೂಲದ ಶಮೀರ್ ಕುಮಾರ್ ಎಂಬಾತ ಈ ರೀತಿ ಕೃತ್ಯ ಎಸಗುತ್ತಿರುವುದು ಗೊತ್ತಾಗಿದೆ. ಕೂಡಲೇ ಸೆನ್ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಇದನ್ನೂ ಓದಿ: ಕಾಶಿ, ಮಥುರಾದ ಮಸೀದಿ ಧ್ವಂಸ ಮಾಡಿ ದೇವಸ್ಥಾನ ನಿರ್ಮಿಸಬೇಕು; ಸಚಿವ ಕೆ.ಎಸ್. ಈಶ್ವರಪ್ಪ ಪುನರುಚ್ಛಾರ

ಆರೋಪಿ ಕೊರೊನಾ ಲಾಕ್ ಡೌನ್ ವೇಳೆ ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗಿದ್ದ. ಕೆಲಸ ಇಲ್ಲದರಿಂದ ಜೀವನ ನಡೆಸಲು ಕಷ್ಟವಾಗಿ ಪರದಾಟ ಅನುಭವಿಸಿದ್ದ. ಈ ವೇಳೆ ನಗರದ ಇಂದಿರಾನಗರ ಮೂಲದ ಕಂಪನಿಯೊಂದು ಕೆಲಸದ ಆಫರ್ ನೀಡಿದೆ. ನಗರದಲ್ಲಿ ಕೆಲಸಕ್ಕೆ ಸೇರಿಕೊಂಡ ಆಸಾಮಿ ಈ ವೇಳೆ ಹಲವು ಜನರ ಪೋನ್ ನಂಬರ್ ಮತ್ತು ಪೋಟೊ ಸಂಗ್ರಹಿಸಿದ್ದ. ಆ ಬಳಿಕ ಅವರ ಹೆಸರಲ್ಲಿ ನಕಲಿ ವಾಟ್ಸಪ್ ಖಾತೆ ತೆರೆದು ಅನಾರೋಗ್ಯ, ಕಷ್ಟ ಅಂತ ಹೇಳಿ ಹಣಕ್ಕೆ ಮನವಿ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಆರೋಪಿ ಶಮೀರ್ ಕುಮಾರ್ ನನ್ನ ಪೂರ್ವ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
Published by: Sushma Chakre
First published: August 11, 2020, 1:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading