ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೊಸ ಅತಿಥಿ; ಹೆಣ್ಣುಮರಿಗೆ ಜನ್ಮ ನೀಡಿದ ಆನೆ

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆ ರೂಪಾ (12) ಮುದ್ದಾದ ಹೆಣ್ಣು ಮರಿಗೆ ಜನ್ಮ ನೀಡಿದೆ.  ರೂಪಾ ಆನೆಗೆ ಇದು ಎರಡನೇ ಮರಿಯಾಗಿದ್ದು, 2016ರಲ್ಲಿ ಹೆಣ್ಣು ಮರಿ ಗೌರಿಗೆ ರೂಪಾ ಜನ್ಮ ನೀಡಿತ್ತು.

news18-kannada
Updated:August 2, 2020, 5:39 PM IST
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೊಸ ಅತಿಥಿ; ಹೆಣ್ಣುಮರಿಗೆ ಜನ್ಮ ನೀಡಿದ ಆನೆ
ಸಾಂದರ್ಭಿಕ ಚಿತ್ರ
  • Share this:
ಆನೇಕಲ್:  ಕೊರೊನಾದಿಂದ ಪ್ರವಾಸಿಗರಿಲ್ಲದೆ ಬಣಗುಡುತ್ತಿದ್ದ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿ ಆಗಮನವಾಗಿದ್ದು, ಉದ್ಯಾನವನದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಲ್ಲಿ ಸಂತಸ ಮನೆ ಮಾಡಿದೆ.

ಸದಾ ಪ್ರವಾಸಿಗರಿಂದ ಗಿಜುಗುಡುತ್ತಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಕಳೆದ ಎರಡು ತಿಂಗಳಿಂದ ಕೊರೊನಾ, ಲಾಕ್ ಡೌನ್ ಹೀಗೆ ಹಲವು ಕಾರಣಗಳಿಗಾಗಿ ಪ್ರವಾಸಿಗರು ಉದ್ಯಾನವನಕ್ಕೆ ಅಧಿಕ ಸಂಖ್ಯೆಯಲ್ಲಿ ಆಗಮಿಸದೇ ಇಡೀ ವಾತವರಣ ಬಿಕೋ ಎನ್ನುತ್ತಿತ್ತು. ಇದರ ನಡುವೆ ಪ್ರವಾಸಿಗರಿಗೆ ಪ್ರಾಣಿ ಪ್ರಿಯರಿಗೆ ಸಂತಸದ ಸುದ್ದಿ ಹೊರಬಿದ್ದಿದೆ.

ಹೌದು, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿಯ ಆಗಮನವಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆ ರೂಪಾ (12) ಮುದ್ದಾದ ಹೆಣ್ಣು ಮರಿಗೆ ಜನ್ಮ ನೀಡಿದೆ.  ರೂಪಾ ಆನೆಗೆ ಇದು ಎರಡನೇ ಮರಿಯಾಗಿದ್ದು, 2016ರಲ್ಲಿ ಹೆಣ್ಣು ಮರಿ ಗೌರಿಗೆ ರೂಪಾ ಜನ್ಮ ನೀಡಿತ್ತು. ನಿನ್ನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸೀಗೆ ಕಟ್ಟೆ ಆನೆ ಬಿಡಾರದಲ್ಲಿ ಗಂಡು ಮರಿಗೆ ಜನ್ಮ ನೀಡಿದ ತಾಯಿ ರೂಪಾ ಮತ್ತು ಆರೋಗ್ಯವಾಗಿದ್ದು, ಉದ್ಯಾನವನದ ಮಾವುತರು ಮತ್ತು ಕಾವಾಡಿಗಳು ತಾಯಿ ಮತ್ತು ಮರಿ ಆರೈಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ವೆಂಟಿಲೇಟರ್​ಗಳ ರಫ್ತಿಗೆ ಮುಂದಾಗಿರುವ ಹೃದಯಹೀನ ಸರ್ಕಾರ; ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಟ್ವೀಟ್​ ದಾಳಿ

ಆನೆ ಮರಿಗೆ ಹಾಲು ಕೊರತೆಯಾಗಬಾರದು ಎಂದು ತಾಯಿ ಆನೆ ರೂಪಾಗೆ ವಿಶೇಷ ಆಹಾರ ನೀಡಲಾಗುತ್ತಿದೆ. ಹುರುಳಿ, ಬೆಲ್ಲ, ಬೆಳೆ ಕಾಳುಗಳು ಮತ್ತು ರಾಗಿ ಹಿಟ್ಟು ಮಿಶ್ರಿತ ಮುದ್ದೆ ನೀಡಲಾಗುತ್ತಿದೆ. ಸದ್ಯ ತಾಯಿ ಜೊತೆಯಲ್ಲಿಯೇ ಆನೆ ಮರಿ ಲವಲವಿಕೆಯಿಂದ ಇದ್ದು, ಆರೋಗ್ಯವು ಸಹ ಚೆನ್ನಾಗಿದೆ ಎಂದು ಉದ್ಯಾನವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಒಟ್ಟು ಸಾಕಾನೆಗಳ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ.
ಇತ್ತೀಚೆಗೆ ನೀರಾನೆ ಸಹ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಇದೀಗ ಆನೆ ಮರಿ ಉದ್ಯಾನವನದ ಪ್ರಾಣಿಗಳ ಜೊತೆ ಸೇರ್ಪಡೆಯಾಗಿದೆ. ಪ್ರಾಣಿಪ್ರಿಯರು ಮತ್ತು ಪ್ರವಾಸಿಗರು ಕೊರೊನಾ ಹರಡದಂತೆ  ಸೂಕ್ತ ಮುಂಜಾಗ್ರತೆಯೊಂದಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಗಮಿಸಿ ಪ್ರಾಣಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

(ವರದಿ: ಆದೂರು ಚಂದ್ರು)
Published by: Sushma Chakre
First published: August 2, 2020, 5:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading