ಬಾಗಲಕೋಟೆಯಲ್ಲಿ ಭಾರೀ ಮಳೆಗೆ ಬಾಯ್ತೆರೆದ ಭೂಮಿ; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಜಲಗೇರಿ ಗ್ರಾಮದಲ್ಲಿ ಮಳೆಯಿಂದಾಗಿ ಏಕಾಏಕಿಯಾಗಿ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿ ಮಾವಿನಮರ, ಬೇವಿನ ಮರಗಳು ಜಲಸಮಾಧಿಯಾಗಿವೆ.

news18-kannada
Updated:October 20, 2020, 7:54 AM IST
ಬಾಗಲಕೋಟೆಯಲ್ಲಿ ಭಾರೀ ಮಳೆಗೆ ಬಾಯ್ತೆರೆದ ಭೂಮಿ; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
ಬಾಗಲಕೋಟೆಯಲ್ಲಿ ಮಳೆಯಿಂದ ತೋಟಗಳಲ್ಲಿ ತುಂಬಿದ ನೀರು
  • Share this:
ಬಾಗಲಕೋಟೆ (ಅ. 20): ಉತ್ತರ ಕರ್ನಾಟಕದಲ್ಲಿ ಪ್ರವಾಹದ ಆರ್ಭಟಕ್ಕೆ ಅಕ್ಷರಶಃ ಜನರು ನಲುಗಿ ಹೋಗಿದ್ದಾರೆ. ಆಸ್ತಿಪಾಸ್ತಿ, ಬೆಳೆ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಇನ್ನೊಂದೆಡೆ ಬಾಗಲಕೋಟೆಯಲ್ಲಿ ಮಹಾ ಮಳೆಗೆ ಭೂ ಕುಸಿತವಾಗಿ ಗ್ರಾಮವೊಂದರಲ್ಲಿ ಆತಂಕ ಮುಂದುವರೆದಿದೆ. ಭೂ ಕುಸಿತ ತಡೆಗಟ್ಟಿ, ಪರಿಹಾರ ಕೊಡಿ ಎಂದು ರೈತನೋರ್ವ ಕಣ್ಣೀರು ಹಾಕಿರುವ ಮನಕಲಕುವ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಜಲಗೇರಿ ಗ್ರಾಮದಲ್ಲಿ ಅ. 18ರಂದು ಮಧ್ಯಾಹ್ನ ಏಕಾಏಕಿಯಾಗಿ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿ ಮಾವಿನಮರ, ಬೇವಿನ ಮರಗಳು ಜಲಸಮಾಧಿಯಾಗಿವೆ. ವರ್ಷದ ಹಿಂದೆ ಸಣ್ಣ ಪ್ರಮಾಣದಲ್ಲಿ ಉಂಟಾದ ಭೂ ಕುಸಿತ, ವಾರದ ಹಿಂದೆ ಸುರಿದ ಮಳೆಗೆ ಕೆರೆ ತುಂಬಿ, ಕಾಲುವೆ ನೀರು ಹರಿದು ಕಂದಕ ಸೇರಿದೆ.

ಮಳೆ ನೀರು ಒಳ ಹೊಕ್ಕ ಪರಿಣಾಮ ಏಕಾಏಕಿ ಮಾವಿನ ಮರ, ಬೇವಿನಮರ ಕುಸಿದು ಆಳಕ್ಕೆ ಇಳಿದಿವೆ. ಯಾವಾಗ ಜಲಗೇರಿ  ಗ್ರಾಮದ ರೈತರಾದ ಹುಸೇನ ಸಾಬ, ಹಾಗೂ ಮೈಬೂ ಸಾಬ, ಡೋಂಗ್ರಿ ಸಾಬ ಹುಲ್ಲಿಕೇರಿ ಎಂಬುವವರ ಜಮೀನಿನಲ್ಲಿ ಬೃಹತ್ ಪ್ರಮಾಣದ ಮರಗಳು ಜಲಸಮಾಧಿ ಆದವೋ ಆಗ ಗ್ರಾಮದಲ್ಲಿ ಮತ್ತಷ್ಟು ಆತಂಕ ಮುಂದುವರೆದಿದೆ. ಭೂಕುಸಿತವಾಗಿರುವ ಜಮೀನು ಗ್ರಾಮಕ್ಕೆ ಹೊಂದಿಕೊಂಡಿಯೇ ಇದ್ದು, ಇನ್ನಷ್ಟು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಜೊತೆಗೆ ಭೂಕುಸಿತದಿಂದ ಗ್ರಾಮದ ರೈತರು, ಗ್ರಾಮದಲ್ಲಿ ಭಯಾನಕ ಸ್ಥಿತಿ ನಿರ್ಮಾಣವಾಗಿದೆ. ಜಮೀನಿನಲ್ಲಿ ಭೂ ಕುಸಿತವಾಗಿರುವುದರಿಂದ ಬೆಳೆ, ಮರ, ಮುಳುಗಿದ್ದು, ಭೂಕುಸಿತ ಇನ್ನೂ ವ್ಯಾಪಿಸುತ್ತಿದೆ.  ನಮ್ಮ ಜಮೀನಿನೊಳಗೆ ಕಾಲುವೆ ನೀರು ಬರದಂತೆ ತಡೆದು, ಭೂಕುಸಿತ ತಡೆಗಟ್ಟಬೇಕು, ಜೊತೆಗೆ ಪರಿಹಾರ ಕೊಡಬೇಕೆಂದು ನ್ಯೂಸ್ 18ನೊಂದಿಗೆ  ರೈತ ಹುಸೇನ ಸಾಬ  ಕಣ್ಣೀರು ಹಾಕಿ, ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಭೀಮಾ ನದಿಯಿಂದ ಬಿಟ್ಟ 8 ಲಕ್ಷ ಕ್ಯೂಸೆಕ್ ನೀರು ಎಲ್ಲಿ ಹೋಯಿತು? ಮಹಾರಾಷ್ಟ್ರ ತಪ್ಪು ಲೆಕ್ಕ ಕೊಟ್ಟಿತಾ?

ಒಂದು ವರ್ಷದ ಹಿಂದಷ್ಟೇ ಮಳೆಯಿಂದ ಇದೇ ಜಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತವಾಗಿ ಕಂದಕ ಬಿದ್ದಿತ್ತು. ಆಗ ರೈತರು ಭೂಕುಸಿತ ತಡೆಯಬೇಕೆಂದು ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದರು. ಆದರೆ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರೇ ಹೊರತು ಆ ಬಗ್ಗೆ ಕ್ರಮ ಕೈಗೊಂಡಿಲ್ಲ. ಇದೀಗ ವಾರದ ಹಿಂದಷ್ಟೇ ಮಹಾ ಮಳೆ ಸುರಿದಿದೆ. ಅದರ ಪರಿಣಾಮವಾಗಿ ಕೆರೆಯ ನೀರು ಕಂದಕದೊಳಗೆ ಸೇರಿ, ಅಂದಾಜು 100 ಅಡಿ ಅಗಲ ಭೂಕುಸಿತವಾಗಿ, 100 ಅಡಿ  ಆಳದಲ್ಲಿ ಮಾವಿನಮರ, ಬೇವಿನ ಮರ ನೆಲದಲ್ಲೇ ಸಮಾಧಿಯಾಗಿವೆ. ಬೃಹತ್ ಪ್ರಮಾಣದಲ್ಲಿ ಭೂಮಿ ಬಾಯಿ ತೆರೆದು ಇಂದು ನೀರು ಆವರಿಸಿದೆ. ಕ್ರಮೇಣವಾಗಿ ಇನ್ನೂ ಭೂಮಿ ಬಿರುಕು ಬಿಡುತ್ತಿದ್ದು, ಭೂ ಕುಸಿತ ವ್ಯಾಪಿಸುತ್ತಿದೆ. ಜೊತೆಗೆ ಇನ್ನಷ್ಟು ಮರಗಳು ಭೂಕುಸಿತಕ್ಕೊಳಗಾಗುವ ಆತಂಕ ಎದುರಾಗಿದೆ.

Karnataka Rains: Bagalkot Agriculture Lands Destroyed after Heavy Rain Lashes in North Karnataka.

ಹೊಲದಲ್ಲಿದ್ದ ಬೆಳೆಯೂ ಭೂ ಕುಸಿತಕ್ಕೆ ಹಾನಿಯಾಗಿದೆ. ಕಳೆದ 6 ತಿಂಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಭೂ ಕುಸಿತವಾಗಿದ್ದ ಸ್ಥಳಕ್ಕೆ ಭೇಟಿ ನೀಡಿದ್ದೆ. ಈ ವೇಳೆ  ಭೂಮಿಯೊಳಗೆ ಸುಣ್ಣದ ಕಲ್ಲು ಇರುವುದರಿಂದ ನೀರಿನಾಂಶ ಹೆಚ್ಚಾದರೆ ಈ ರೀತಿ ಭೂ  ಕುಸಿತವಾಗುತ್ತದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿತ್ತು.ಇದೀಗ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತವಾಗಿರುವುದು ಕಂಡು ಬಂದಿದೆ. ಜಿಲ್ಲಾ ಭೂಗರ್ಭ ಶಾಸ್ತ್ರಜ್ಞರಿಗೆ ಮಾಹಿತಿ ತಿಳಿಸಲಾಗಿದ್ದು, ಸ್ಥಳಕ್ಕೆ  ಭೇಟಿ ನೀಡಿ ವರದಿ ಕೊಡಲಿದ್ದಾರೆ. ಅದರಂತೆ ಜಿಲ್ಲಾಡಳಿತದ ಗಮನಕ್ಕೆ ತಂದು, ಭೂ ಕುಸಿತವಾಗಿರುವ ಸ್ಥಳ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ನ್ಯೂಸ್ 18ಗೆ ಬಾದಾಮಿ ತಹಶೀಲ್ದಾರ್ ಎಸ್ ಎಸ್ ಇಂಗಳೆ ತಿಳಿಸಿದ್ದಾರೆ.
ಒಟ್ಟಿನಲ್ಲಿ ಮಹಾ ಮಳೆ ಸೃಷ್ಟಿಸಿದ ಅವಾಂತರಕ್ಕೆ ಜನರು ಹೈರಾಣಾಗಿದ್ದು, ಜಲಗೇರಿ ಗ್ರಾಮದಲ್ಲಿ ಉಂಟಾಗಿರುವ ಭೂ ಕುಸಿತ ನೋಡಲು ಗ್ರಾಮಸ್ಥರು ತಂಡೋಪತಂಡವಾಗಿ ಬರುತ್ತಿದ್ದಾರೆ. ಇನ್ನಾದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಲ್ಲಿನ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.
Published by: Sushma Chakre
First published: October 20, 2020, 7:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading