HOME » NEWS » State » ARRESTRAPISTRAMESH TREND ON TWITTER SESR

ಟ್ವೀಟರ್​ನಲ್ಲಿ ಟ್ರೆಂಡ್​ ಆದ #ArrestRapistRamesh

ರಮೇಶ್​ ಬಂಧನಕ್ಕೆ ಒತ್ತಾಯಿಸಿ ಟ್ವೀಟರ್​ನಲ್ಲಿ #ArrestRapistRamesh ಟ್ರೆಂಡ್​ ಸೃಷ್ಟಿಯಾಗಿದೆ.

news18-kannada
Updated:March 27, 2021, 4:25 PM IST
ಟ್ವೀಟರ್​ನಲ್ಲಿ ಟ್ರೆಂಡ್​ ಆದ #ArrestRapistRamesh
ರಮೇಶ್​ ಜಾರಕಿಹೊಳಿ
  • Share this:
ಮಾಜಿ ಸಚಿವ ರಮೇಶ್​ ಜಾರಕಿಹೊಳಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಸಿಡಿ ಸಂತ್ರಸ್ತ ಯುವತಿ ಪರ ವಕೀಲ ಜಗದೀಶ್​ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿರುವ ಕಬ್ಬನ್​ ಪಾರ್ಕ್​ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. ಪೊಲೀಸರ ದಂಡ ಸಂಹಿತೆಯ 506, 354(ಎ), 376ಸಿ, ಅತ್ಯಾಚಾರ ಪ್ರಕರಣದ ಅಡಿ 504, 417 ಹಾಗೂ 67ಎ ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಎಫ್​ಐಆರ್​ ದಾಖಲಸಿದರೂ ಸಚಿವರನ್ನು ಇನ್ನು ಬಂಧಿಸಿಲ್ಲ. ಈ ಸಿಡಿ ಪ್ರಕರಣದಲ್ಲಿ ರಾಜ್ಯ ಸರ್ಕಾರ ಯಾವುದೇ ನಿರ್ಣಾಯಕ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಲ್ಲದೇ, ಸಂತ್ರಸ್ತೆ ತಮಗೆ ಜೀವ ಭಯ ಇರುವುದಾಗಿ ಗಂಭೀರ ಆರೋಪ ಮಾಡಿದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಕೂಡಲೇ ರಮೇಶ್​ ಜಾರಕಿಹೊಳಿ ಅವರನ್ನು ಬಂಧಿಸಬೇಕು ಎಂದು ಒತ್ತಾಯ ಕೇಳಿಬಂದಿದೆ. ಅಲ್ಲದೇ, ರಮೇಶ್​ ಬಂಧನಕ್ಕೆ ಒತ್ತಾಯಿಸಿ ಟ್ವೀಟರ್​ನಲ್ಲಿ #ArrestRapistRamesh ಟ್ರೆಂಡ್​ ಸೃಷ್ಟಿಯಾಗಿದೆ.

ಟ್ವೀಟರ್​ನಲ್ಲಿ #ArrestRapistRamesh ಟ್ರೆಂಡ್​ ಆಗಿದ್ದು, ಸುಮಾರು 5000 ಕ್ಕೂ ಹೆಚ್ಚು ಟ್ವೀಟ್​ಗಳು ಈ ಹ್ಯಾಷ್​ಟ್ಯಾಗ್​ ಅಡಿ ಟ್ವೀಟ್​ ಆಗಿದೆ. ಇನ್ನು ಕಾಂಗ್ರೆಸ್​ ಕೂಡ ಈ ಕುರಿತು ಟ್ವೀಟ್​ ಮಾಡಿದ್ದು, ದೂರು ದಾಖಲಾಗಿದ್ದುಮ ಎಫ್​ಐಆರ್​​ ಹಾಕಲಾಗಿದೆ. ಆದರೂ ಯಾಕೆ ಅತ್ಯಚಾರವೆಸಗಿದ ರಮೇಶ್​ ಜಾರಕಿಹೊಳಿ ಅವರನ್ನು ಬಂಧಿಸಿಲ್ಲ ಎಂದು ಪ್ರಶ್ನಿಸಿದೆ. ಅಲ್ಲದೇ, ಮಾಜಿ ಸಚಿವರೆಂದ ಮಾತ್ರಕ್ಕೆ ಕಾನೂನಿಗಿಂತ ದೊಡ್ಡವರೇ ಎಂದು ಕೇಳಿದೆ.ಯುವತಿ‌ಯ ದೂರು ಎಫ್ ಐ ಆರ್ ಆಗುತ್ತಿದ್ದಂತೆ ಆಕೆ ಕುಟುಂಬಸ್ಥರೊಂದಿಗೆ ಮಾತನಾಡಿರುವ ಆಡಿಯೋ ಬಿಡುಗಡೆಯಾಗಿದ್ದು, ಸಂಚಲನ ಮೂಡಿಸಿದೆ. ಅಲ್ಲದೇ ಈ ಮೊದಲೇ ರಮೇಶ್​ ಜಾರಕಿಹೊಳಿ ತಮ್ಮ ಬಳಿ ಪ್ರಬಲ ಅಸ್ತ್ರವಿದ್ದು, ಅದನ್ನು ಬಿಟ್ಟರೆ ಮುಗಿಯಿತು ಎಂದಿದ್ದರು. ಈ ಹಿನ್ನಲೆ ನಾಳೆ ರಮೇಶ್​ ಜಾರಕಿಹೊಳಿ ಏನು ಮಾಡುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಮತ್ತೊಂದು ಆಡಿಯೋ ಅಥವಾ ವಿಡಿಯೋ ಬಿಡುಗಡೆ ಮಾಡಲು ಸಿದ್ಧತೆ ನಡೆಸಿರುವ ಸಾಧ್ಯತೆ ಇದ್ದು, ಈ ಸಿಡಿ ಪ್ರಕರಣ ಮತ್ತಷ್ಟು ಹೊಸ ತಿರುವು ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ
Published by: Seema R
First published: March 27, 2021, 4:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories