Areca Nut Price - ಅಡಿಕೆಗೆ ಭಾರೀ ಬೇಡಿಕೆ; ಗಗನಕ್ಕೇರುತ್ತಿದೆ ಬೆಲೆ

Areca Nut Rate: ಲಾಕ್​ಡೌನ್ ಕಾರಣದಿಂದ ನೇಪಾಳ ಮತ್ತು ಬಾಂಗ್ಲಾದೇಶದ ಗಡಿಭಾಗ ಬಂದ್ ಆಗಿರುವುದರಿಂದ ಉತ್ತರ ಭಾರತಕ್ಕೆ ಅಡಿಕೆ ಪೂರೈಕೆಯಲ್ಲಿ ಕೊರತೆಯಾಗಿದೆ. ಈ ಕಾರಣಕ್ಕೆ ಅಡಿಕೆ ಬೆಲೆ ಏರಿದೆ.

news18-kannada
Updated:June 10, 2020, 6:55 PM IST
Areca Nut Price - ಅಡಿಕೆಗೆ ಭಾರೀ ಬೇಡಿಕೆ; ಗಗನಕ್ಕೇರುತ್ತಿದೆ ಬೆಲೆ
ಸಾಂದರ್ಭಿಕ ಚಿತ್ರ
  • Share this:
ಮಂಗಳೂರು: ಕರ್ನಾಟಕದಲ್ಲಿ ದೊರಕುವ ಚಾಲಿ ಮಾದರಿಯ ಅಡಿಕೆಗೆ ಈಗ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಅಡಿಕೆ ಬೆಲೆ ಹೊಸ ದಾಖಲೆಯ ಮಟ್ಟಕ್ಕೆ ಏರುತ್ತಿದೆ. ಲಾಕ್​ಡೌನ್​ಗೆ ಮುನ್ನ ಕಿಲೋಗೆ 250 ರೂಪಾಯಿ ಇದ್ದ ಅಡಿಕೆ ಬೆಲೆ ಈಗ 300 ರೂಪಾಯಿ ಮುಟ್ಟಿದೆ. ಇದೂವರೆಗಿನ ಹೊಸ ದಾಖಲೆ ಇದಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ ಚಂದ್ರ ಹೇಳಿದ್ದಾರೆ.

ಕೊರೋನಾ ವೈರಸ್ ಸೋಂಕಿನ ಕಾರಣದಿಂದ ನೇಪಾಳ ಮತ್ತು ಬಾಂಗ್ಲಾದೇಶದ ಗಡಿಭಾಗ ಬಂದ್ ಆಗಿರುವ ಕಾರಣ ಉತ್ತರ ಭಾರತದಲ್ಲಿ ಅಡಿಕೆಗೆ ದೊಡ್ಡ ಬೇಡಿಕೆ ಸೃಷ್ಟಿಯಾಗಿದೆ ಎನ್ನಲಾಗಿದೆ. ಈಗ ಮಂಗಳೂರಿಂದಲೇ ಅಡಿಕೆಯ ಪೂರೈಕೆಯಾಗುತ್ತಿದೆ. ಉತ್ತರ ಪ್ರದೇಶ ಮತ್ತು ಗುಜರಾತ್​ನಲ್ಲಿ ಪಾನ್, ಸುಪಾರಿ ಇತ್ಯಾದಿ ಹೆಚ್ಚಾಗಿ ಬಳಕೆಯಾಗುವುದರಿಂದ ಅಡಿಕೆಗೆ ಅವರೆಡು ರಾಜ್ಯಗಳು ಬಹುದೊಡ್ಡ ಮಾರುಕಟ್ಟೆ ಎನಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಈಗಾಗಲೇ ಬಹಳಷ್ಟು ಅಡಿಕೆ ಆ ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದು ಸತೀಶ್ ಚಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಮೈತ್ರಿ ಆಗುತ್ತಾ? ರಾಜಕೀಯದಲ್ಲಿ ಏನಾದರೂ ಆಗಬಹುದು ಎಂದ ಕುಮಾರಸ್ವಾಮಿಇದನ್ನೂ ಓದಿ: ಮಂಡ್ಯದ ಮೈಷುಗರ್ ಕಾರ್ಖಾನೆಗೆ ಸಕ್ಕರೆ ಸಚಿವರ ಭೇಟಿ, ಪರಿಶೀಲನೆ; ಕಾರ್ಖಾನೆ ಮರು ಆರಂಭಕ್ಕೆ ಒಲವು

ಇದನ್ನೂ ಓದಿ: ಕಾರವಾರದಲ್ಲಿ 21 ಲಕ್ಷ ಮೌಲ್ಯದ 6,900 ಲೀಟರ್​ ಅಕ್ರಮ ಮದ್ಯ ನಾಶಪಡಿಸಿದ ಅಧಿಕಾರಿಗಳು

ಕರ್ನಾಟಕದ ಕರಾವಳಿ ಪ್ರದೇಶಗಳಾದ ಮಂಗಳೂರು, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡು ಭಾಗಗಳಾದ ಶಿವಮೊಗ್ಗದಲ್ಲಿ ಹೆಚ್ಚಾಗಿ ಅಡಿಕೆ ಬೆಳೆಯುತ್ತಾರೆ.
First published: June 10, 2020, 6:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading