HOME » NEWS » State » AMID COVID SWAMI NITHYANANDA BANNED TRAVELLERS FOR INDIANS HIS ISLAND KAILASA SESR

ಕೋವಿಡ್​ ಅಬ್ಬರ; ತನ್ನ ಕೈಲಾಸಕ್ಕೆ ಭಾರತೀಯ ಭಕ್ತರಿಗೆ ನಿರ್ಬಂಧ ವಿಧಿಸಿದ ಸ್ವಾಮಿ ನಿತ್ಯಾನಂದ

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಕೂಡ ತನ್ನ ದೇಶ ಕೈಲಾಸಕ್ಕೆ ಭಾರತದ ಭಕ್ತರಿಗೆ ನಿರ್ಬಂಧ ವಿಧಿಸಿದ್ದಾರೆ.

news18-kannada
Updated:April 21, 2021, 8:51 PM IST
ಕೋವಿಡ್​ ಅಬ್ಬರ; ತನ್ನ ಕೈಲಾಸಕ್ಕೆ ಭಾರತೀಯ ಭಕ್ತರಿಗೆ ನಿರ್ಬಂಧ ವಿಧಿಸಿದ ಸ್ವಾಮಿ ನಿತ್ಯಾನಂದ
ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ
  • Share this:
ನವದೆಹಲಿ (ಏ. 21): ಕಳೆದ ಬಾರಿ ಕೋವಿಡ್​ ನಿಯಂತ್ರಣವನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಭಾರತ ಎರಡನೇ ಅಲೆ ಕೊರೋನಾದಿಂದ ತತ್ತರಿಸಿದೆ. ಲಸಿಕೆಯ ಲಭ್ಯತೆ ನಡುವೆಯೂ ದೇಶದಲ್ಲಿ ದಾಖಲೆ ಪ್ರಮಾಣದ ಸೋಂಕು ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ. ದೇಶದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನಲೆ ಭಾರತವನ್ನ  ಕೆಂಪು ಪಟ್ಟಿಗೆ ಸೇರಿಸಲಾಗಿದೆ. ಬ್ರಿಟನ್​, ಅಮೆರಿಕ, ಹಾಂಕ್​ಕಾಂಗ್​ ಮತ್ತು ಸಿಂಗಾಪೂರ ದೇಶಗಳು ತಮ್ಮ ದೇಶದ ಜನರಿಗೆ ಭಾರತ ಪ್ರವಾಸವನ್ನು ಮುಂದೂಡುವಂತೆ ತಿಳಿಸಿದೆ. ಈಗ ಇದರ ಬೆನ್ನಲ್ಲೇ ಈಗ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಕೂಡ ತನ್ನ ದೇಶ ಕೈಲಾಸಕ್ಕೆ ಭಾರತದ ಭಕ್ತರಿಗೆ ನಿರ್ಬಂಧ ವಿಧಿಸಿದ್ದಾರೆ.

ಭಾರತ ಮಾತ್ರವಲ್ಲದೇ ಬ್ರೆಜಿಲ್​, ಯುರೋಪಿಯನ್ ಯೂನಿಯನ್​ ಮತ್ತು​ ಮಲೇಷ್ಯಾ ದೇಶದ ಭಕ್ತರಿಗೂ ಕೂಡ ಪ್ರವೇಶ ನಿರಾಕರಿಸಿದ್ದಾರೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ನಿತ್ಯಾನಂದ ಕೋವಿಡ್​ ಹೆಚ್ಚಳದ ಹಿನ್ನಲೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.


ನಿತ್ಯಾನಂದರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದು, ನಿತ್ಯಾನಂದನ ಕುರಿತು ಮೇಮ್​, ಜೋಕ್​ಗಳು ಟ್ವಿಟರ್​ನಲ್ಲಿ ಹರಿದಾಡುತ್ತಿವೆ.

ಲೈಂಗಿಕ ದೌರ್ಜನ್ಯದ ಆರೋಪ ಹೊಂದಿರುವ ನಿತ್ಯಾನಂದ ಸ್ವಾಮಿ 2019ರಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಈಕ್ವೆಡಾರ್​ನಲ್ಲಿ ಕೈಲಾಸ ಎಂಬ ತನ್ನದೇ ಆದ ದೇಶ ನಿರ್ಮಿಸಿದ್ದು, ಇಲ್ಲಿಗೆ ಸೀಮಿತ ಭಕ್ತರಿಗೆ ಮಾತ್ರ ಅವಕಾಶ ಎಂದು ಕಳೆದ ವರ್ಷ ಆಶ್ರಮದ ವೆಬ್​ಸೈಟ್​ ಬಿಡುಗಡೆ ಮಾಡಲಾಗಿತ್ತು. ನಿತ್ಯಾನಂದರ ಕೈಲಾಸದಲ್ಲಿ ಹಣದ ಹರಿವಿಗೆ ಕ್ರಿಪ್ಟೋಕರೆನ್ಸಿ ಅಥವಾ ಡಿಜಿಟಲ್ ರೂಪದ ಗೂಢ ಹಣ ಚಲಾವಣೆ ಪದ್ಧತಿಗೆ ಅವಕಾಶ ಕೊಡಲಾಗಿದೆ. ಹಿಂದೂ ಧಾರ್ಮಿಕ ಭಕ್ತರು ಕೈಲಾಸದಲ್ಲಿ ಹಣ ಹೂಡಿಕೆ ಮಾಡಬಹುದು. ಇಲ್ಲಿ ಹೂಡಿಕೆದಾರರಿಗೆ ಆಕರ್ಷಕ ಲಾಭ ಸಿಗುತ್ತದೆ ಎಂದು ಈ ವೆಬ್​ಸೈಟ್ ಹೇಳಿಕೊಂಡಿತು.
Published by: Seema R
First published: April 21, 2021, 8:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories