ಬೆಂಗಳೂರಿನ ಬನಶಂಕರಿ ದೇಗುಲದಲ್ಲಿ ಕಾಣಿಕೆ ಎಣಿಕೆ; 1 ತಿಂಗಳಲ್ಲಿ 28 ಲಕ್ಷ ರೂ. ಸಂಗ್ರಹ!

ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ನಿನ್ನೆ ಹುಂಡಿ ತೆರೆದು ಕಾಣಿಕೆ ಲೆಕ್ಕ ಮಾಡಲಾಯಿತು. ಕೇವಲ ಒಂದು ತಿಂಗಳು ಐದು ದಿನಗಳ ಈ ಅವಧಿಯಲ್ಲಿ 28,38,554 ರೂ.ಗಳಷ್ಟು ಕಾಣಿಕೆ ಸಂಗ್ರಹವಾಗಿದೆ.

news18-kannada
Updated:October 29, 2020, 11:42 AM IST
ಬೆಂಗಳೂರಿನ ಬನಶಂಕರಿ ದೇಗುಲದಲ್ಲಿ ಕಾಣಿಕೆ ಎಣಿಕೆ; 1 ತಿಂಗಳಲ್ಲಿ 28 ಲಕ್ಷ ರೂ. ಸಂಗ್ರಹ!
ಬನಶಂಕರಿ
  • Share this:
ಬೆಂಗಳೂರು (ಅ. 29): ಸಂಕಟ ಬಂದಾಗ ವೆಂಕಟರಮಣ ಎನ್ನುವ ಮಾತಿದೆ. ಇದು ಕೋವಿಡ್ ಸಂದರ್ಭದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ ಎನಿಸುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಕೇವಲ ಒಂದು ತಿಂಗಳ ಅವಧಿಯಲ್ಲಿ ದೇವಾಲಯಗಳ ಹುಂಡಿಗಳು ಭಕ್ತರ ಕಾಣಿಕೆಯಿಂದ ತುಂಬಿಹೋಗಿವೆ. ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ನಿನ್ನೆ ಹುಂಡಿ ತೆರೆದು ಕಾಣಿಕೆ ಲೆಕ್ಕ ಮಾಡಲಾಯಿತು. ಆಡಳಿತಾಧಿಕಾರಿಗಳು, ಸಿಬ್ಬಂದಿ, ದೇವಾಲಯದ ಅಭಿವೃದ್ಧಿ ಮಂಡಳಿ, ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಎಲ್ಲರ ಉಪಸ್ಥಿತಿಯಲ್ಲಿ ಹುಂಡಿ ತೆರೆಯಲಾಯಿತು. ಆಶ್ಚರ್ಯ ಎನ್ನುವಂತೆ ಕೇವಲ ಒಂದು ತಿಂಗಳು ಐದು ದಿನಗಳ ಈ ಅವಧಿಯಲ್ಲಿ 28,38,554 ರೂ.ಗಳಷ್ಟು ಕಾಣಿಕೆ ಸಂಗ್ರಹವಾಗಿದೆ.

ಅನೇಕ ದಿನಗಳವರೆಗೆ ಭಕ್ತರಿಗೆ ದೇವಾಲಯದೊಳಗೆ ಪ್ರವೇಶ ಇರಲಿಲ್ಲ. ಇದ್ದರೂ ಕೆಲವೇ ಘಂಟೆಗಳವರೆಗೆ ಸಾಕಷ್ಟು ನಿಯಮಗಳ ಜೊತೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇದೆಲ್ಲದರ ನಡುವೆ ಇಷ್ಟು ಕಾಣಿಕೆ ಸಂಗ್ರಹವಾಗಿದ್ದು ಅಚ್ಚರಿ ಹುಟ್ಟಿಸಿದ್ದರ ಜೊತೆಗೆ ದೇವಿಯ ಮೇಲೆ ಜನರ ಭಕ್ತಿಯನ್ನು ತೋರಿಸಿದೆ. ಕಾಣಿಕೆ‌ ಹಣದ ಜೊತೆಯಲ್ಲಿ 102 ಗ್ರಾಂ ಚಿನ್ನ ಹಾಗೂ 550 ಗ್ರಾಂ. ಬೆಳ್ಳಿ ಕೂಡ ಹುಂಡಿಯಲ್ಲಿ ಸಂಗ್ರಹವಾಗಿತ್ತು.


ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಒಂದೇ ತಿಂಗಳ ಅವಧಿಯಲ್ಲಿ 28 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. ಕೇವಲ ಬನಶಂಕರಿ ದೇವಾಲಯ ಮಾತ್ರವಲ್ಲದೇ ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ಕೋವಿಡ್ ಕಾಲದಲ್ಲೂ ನಿರೀಕ್ಷೆಗೂ ಹೆಚ್ಚಿನ ಕಾಣಿಕೆ ಸಂಗ್ರಹವಾಗಿದೆ ಎಂದು ಮುಜರಾಯಿ ಇಲಾಖೆ ಮೂಲಗಳು ತಿಳಿಸಿವೆ.
Published by: Sushma Chakre
First published: October 29, 2020, 11:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading