ಮಾಜಿ ಡಿಸಿಎಂ ಪರಮೇಶ್ವರ್ ಅಣ್ಣನ ಮಗಳೆಂದು ನಾಟಕ; ಲೋನ್ ಕೊಡಿಸುವುದಾಗಿ ಹಲವರಿಗೆ ವಂಚಿಸಿದ ಯುವತಿ

ಕಾರಿನ ಬಾಡಿಗೆ ಹಣ ಕೇಳಿದ್ದಕ್ಕೆ ಚಾಲಕನನ್ನು ಪ್ರೀತಿಸುವ ನಾಟಕವಾಡಿದ್ದಾಳೆ. ನಿನ್ನನ್ನು ಪ್ರೀತಿಸುತ್ತಿದ್ದೇನೆ, ಮದುವೆಯಾಗು ಅಂತ ನಾಟಕ ಶುರು ಮಾಡಿದ್ದಾಳೆ. ಪಲ್ಲವಿಯ ಡ್ರಾಮಾವನ್ನು ಚಾಲಕ ಯೋಗೇಶ್​ ಕಾರು ಮಾಲೀಕ ಜರ್ನಾಧನ್ ಗೆ ತಿಳಿಸಿದ್ದಾನೆ. ಬಳಿಕ ಯೋಗೇಶ್ ಮತ್ತು ಜನಾರ್ಧನ್​​ ಪಲ್ಲವಿಯನ್ನು ಸದಾಶಿವನಗರದ ಡಾ.ಜಿ ಪರಮೇಶ್ವರ್ ನಿವಾಸಕ್ಕೆ ಕರೆದೊಯ್ದಿದ್ದಾರೆ.

news18-kannada
Updated:October 31, 2020, 8:28 AM IST
ಮಾಜಿ ಡಿಸಿಎಂ ಪರಮೇಶ್ವರ್ ಅಣ್ಣನ ಮಗಳೆಂದು ನಾಟಕ; ಲೋನ್ ಕೊಡಿಸುವುದಾಗಿ ಹಲವರಿಗೆ ವಂಚಿಸಿದ ಯುವತಿ
ಆರೋಪಿತೆ ಪಲ್ಲವಿ
  • Share this:
ಬೆಂಗಳೂರು(ಅ.31): ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅಣ್ಣನ ಮಗಳೆಂದು ಹಲವಾರು ಮಂದಿಗೆ ವಂಚಿಸುತ್ತಿದ್ದ ಯುವತಿಯನ್ನು ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಯುವತಿ ಪಲ್ಲವಿ ಎಂಬಾಕೆ ಪ್ರಧಾನಮಂತ್ರಿ ಯೋಜನೆಯಡಿ ಸಾಲ ಕೊಡಿಸುವುದಾಗಿ ಜನರಿಂದ ಹಣ ಪಡೆದು ಮೋಸ ಮಾಡಿದ್ದಳು ಎಂಬ ವಿಷಯ ಬೆಳಕಿಗೆ ಬಂದಿದೆ. ನಿರುದ್ಯೋಗಿಗಳು, ವಿದ್ಯಾವಂತ ಯುವಕರು, ಬಡ ಚಾಲಕರೇ ಈಕೆಯ ಟಾರ್ಗೆಟ್​ ಆಗಿದ್ದು, ಲೋನ್​ ಕೊಡಿಸುವುದಾಗಿ ಸುಮಾರು 10ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.  ಕೆಂಗೇರಿ ಪೊಲೀಸರು ಆರೋಪಿತೆ ಪಲ್ಲವಿ ಎಂಬಾಕೆಯನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಬಂಧಿತ ಯುವತಿ ತಾನು ಸಮಾಜಸೇವಕಿ, ನಿರುದ್ಯೋಗಿ ಯುವಕರಿಗೆ ಬ್ಯಾಂಕಿನಿಂದ ಸಾಲ ಕೊಡಿಸುತ್ತೇನೆ ಎಂದು  ಅನೇಕರನ್ನು ನಂಬಿಸಿದ್ದಳು ಎನ್ನಲಾಗಿದೆ.

ಈಕೆ ಲೋನ್ ಕೊಡಿಸುವ ನೆಪದಲ್ಲಿ ಮೈಸೂರಿನ ಯೋಗೇಶ್ ಎಂಬುವವರ ಕಾರನ್ನು ಬಾಡಿಗೆಗೆ ಪಡೆದು, ಸುಮಾರು 40 ಸಾವಿರ ಕಿಲೋ ಮೀಟರ್ ಸುತ್ತಾಡಿಸಿ 4 ಲಕ್ಷಕ್ಕೂ ಹೆಚ್ಚು ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದಾಳೆ. ಮೇ 30ನೇ ತಾರೀಖಿನಿಂದ ಅಕ್ಟೋಬರ್ 22ರವರೆಗೆ ಕಾರು ಬಾಡಿಗೆ ಪಡೆದು ತುಮಕೂರು, ರಾಮನಗರ, ಮೈಸೂರು ಮತ್ತು ಬೆಂಗಳೂರು ನಡುವೆ ಸುತ್ತಾಡಿದ್ದಳು. ಕಿ.ಮೀ ಗೆ 10 ರೂ ನಂತೆ ಕಾರು ಬಾಡಿಗೆ ಪಡೆದು, 6 ತಿಂಗಳಲ್ಲಿ 40 ಸಾವಿರ ಕಿ.ಮೀ ಕಾರಿನಲ್ಲಿ ಓಡಾಡಿದ್ದಳು. ಒಟ್ಟು 4.30 ಲಕ್ಷ ಕಾರಿನ ಬಾಡಿಗೆಯಾಗಿತ್ತು. ಒಮ್ಮೆ ಪಲ್ಲವಿ ಕಾರಿನ ಟಯರ್ ಬದಲಾಯಿಸಲು 13 ಸಾವಿರ, ಸರ್ವಿಸ್ ಗೆ 8 ಸಾವಿರ ಸೇರಿ 21 ಸಾವಿರ ನೀಡಿದ್ದಳು. ಇನ್ನೂ ನಾಲ್ಕು ಲಕ್ಷ ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದಳು. ಪದೇ ಪದೇ ಬಾಡಿಗೆ ಹಣ ಕೇಳುತ್ತಿದ್ದ ಚಾಲಕನಿಗೆ,  ಮೈಸೂರಿನಲ್ಲಿ, ಹುಣಸೂರಿನಲ್ಲಿ ಕೆಲವರು ಹಣ ಕೊಡಬೇಕು. ಅವರು ಕೊಟ್ಟ ಕೂಡಲೇ ಕೊಡುವೆ ಎಂದು ನಂಬಿಸಿದ್ದಳು. ಮೂರ್ನಾಲ್ಕು ಬಾರಿ ಸುಳ್ಳು ಹೇಳಿ ಕ್ಯಾಬ್ ನಲ್ಲಿ ಸುತ್ತಾಡಿದ್ದಳು ಎಂದೂ ಸಹ ತಿಳಿದು ಬಂದಿದೆ.

ಬ್ರಹ್ಮೋಸ್ ಕ್ಷಿಪಣಿ ಯಶಸ್ವಿ ಪ್ರಯೋಗ; ಕರಾರುವಾಕ್ ದಾಳಿಯಿಂದ ಗಮನ ಸೆಳೆದ ಮಿಸೈಲ್

ಕಾರಿನ ಬಾಡಿಗೆ ಹಣ ಕೇಳಿದ್ದಕ್ಕೆ ಚಾಲಕನನ್ನು ಪ್ರೀತಿಸುವ ನಾಟಕವಾಡಿದ್ದಾಳೆ. ನಿನ್ನನ್ನು ಪ್ರೀತಿಸುತ್ತಿದ್ದೇನೆ, ಮದುವೆಯಾಗು ಅಂತ ನಾಟಕ ಶುರು ಮಾಡಿದ್ದಾಳೆ. ಪಲ್ಲವಿಯ ಡ್ರಾಮಾವನ್ನು ಚಾಲಕ ಯೋಗೇಶ್​ ಕಾರು ಮಾಲೀಕ ಜರ್ನಾಧನ್ ಗೆ ತಿಳಿಸಿದ್ದಾನೆ. ಬಳಿಕ ಯೋಗೇಶ್ ಮತ್ತು ಜನಾರ್ಧನ್​​ ಪಲ್ಲವಿಯನ್ನು ಸದಾಶಿವನಗರದ ಡಾ.ಜಿ ಪರಮೇಶ್ವರ್ ನಿವಾಸಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಮಾಜಿ ಡಿಸಿಎಂ ಜಿ. ಪರಮೇಶ್ವರ್​ ಪತ್ನಿ, ಪಲ್ಲವಿ ನಮ್ಮ ಸಂಬಂಧಿಕಳಲ್ಲ. ಯಾವುದಕ್ಕೂ ನಮ್ಮ ಯಜಮಾನರ ಗಮನಕ್ಕೆ ತನ್ನಿ ಎಂದು ಹೇಳಿದ್ದಾರೆ.

ನಂತರ ಚಾಲಕ ಯೋಗೇಶ್​​ ತುಮಕೂರಲ್ಲಿ ಜಿ.ಪರಮೇಶ್ವರ್ ಅವರನ್ನ ಭೇಟಿ ಮಾಡಿದ್ದಾನೆ. ಈ ವೇಳೆ ಪಲ್ಲವಿ ಯಾರೆಂಬುದೇ ಗೊತ್ತಿಲ್ಲ, ನೀವು ಕೂಡಲೇ ಪೊಲೀಸರಿಗೆ ದೂರು ನೀಡಿ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ಆರೋಪಿತೆ ಮತ್ತೊಂದು ನಾಟಕವಾಡಿದ್ದಾಳೆ. ಆಕೆಯನ್ನು ಬೆಂಗಳೂರಿಗೆ ಕರೆತರುವ ವೇಳೆ, ತನ್ನನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಆಕೆಯ ನಾಟಕವರಿತ ಕೆಂಗೇರಿ ಪೊಲೀಸರು, ಯೋಗೇಶ್​ಗೆ ಕರೆ ಮಾಡಿ ಕೂಡಲೇ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆತರುವಂತೆ ಸೂಚಿಸಿದ್ದಾರೆ.ಬಳಿಕ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಮಹಿಳೆಯ ವಿಚಾರಣೆ ನಡೆಸಿದ್ದಾರೆ. ಈ  ವೇಳೆ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಸದ್ಯ ಜ್ಞಾನಭಾರತಿ ಠಾಣೆ ಪೊಲೀಸರು ಆರೋಪಿತೆ ಪಲ್ಲವಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
Published by: Latha CG
First published: October 31, 2020, 8:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading