ಇಳಿ ವಯಸ್ಸಿನಲ್ಲಿ ಪ್ರಾಣದ ಹಂಗು ತೊರೆದು ಸೋಂಕಿತ ವ್ಯಕ್ತಿಗಳ ನೆರವಿಗೆ ನಿಂತ ವೃದ್ಧ

ಕಳೆದ ಐದು ತಿಂಗಳಿಂದ ನೂರಾರು ರೋಗಿಗಳನ್ನ ಕರೆದೊಯ್ದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಈ ಆಟೋ ಚಾಲಕ. ಈವರೆಗೆ 26 ಕೊರೋನಾ ಸೋಂಕಿತರು ಹಾಗೂ ನೂರಾರು ಇತರೆ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರಂತೆ.

news18-kannada
Updated:August 9, 2020, 4:08 PM IST
ಇಳಿ ವಯಸ್ಸಿನಲ್ಲಿ ಪ್ರಾಣದ ಹಂಗು ತೊರೆದು ಸೋಂಕಿತ ವ್ಯಕ್ತಿಗಳ ನೆರವಿಗೆ ನಿಂತ ವೃದ್ಧ
ಆಟೋ ಚಾಲಕ
  • Share this:
ಬೆಂಗಳೂರು(ಆ.09): ಕೊರೋನಾ ಮಾಹಾಮಾರಿ ಆರ್ಭಟದ ನಡುವೆಯೂ ವೃದ್ಧ ವ್ಯಕ್ತಿಯೊರ್ವ ಹಲವಾರು ಮಂದಿಗೆ ಸಹಾಯ ಹಸ್ತಚಾಚಿ ಮಾನವೀಯತೆ ಮೆರೆಯುತ್ತಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಇವರಿಗೆ 70 ವರ್ಷ. ವೃದ್ಧ ವ್ಯಕ್ತಿಗಳಿಗೆ ಕೊರೋನಾ ಸೋಂಕು ಹರಡದಂತೆ ತಡೆಯಬೇಕು ಎಂದು ಸರ್ಕಾರ ಮತ್ತು ಅಧಿಕಾರಿಗಳು ಸಾಕಷ್ಟು ಎಚ್ಚರಿಕೆ ಕ್ರಮಗಳು ಹಾಗೂ ಜಾಗೃತಿ ಮೂಡಿಸಿದ್ದಾರೆ. ಆದರೆ ಈ ಆಟೋ ಚಾಲಕ ಮಾತ್ರ ಕೊರೊನಾ ಮಾಹಾಮಾರಿ ವಿರುದ್ಧ ಹೋರಾಟ ನಡೆಸುತ್ತಿದ್ದು, ಇಳಿ ವಯಸ್ಸಿನಲ್ಲಿಯೂ ಹತ್ತಾರು ಮಂದಿಗೆ ತಮ್ಮ ಕೈಯಲ್ಲಾದ ಸಹಾಯ ಮಾಡಲು ಮುಂದಾಗಿದ್ದಾರೆ.

ನಗರದ ನೀಲಸಂದ್ರ ನಿವಾಸಿ ಅಬ್ದುಲ್ ಮಜೀದ್ ಸೌಧಾಗರ್ ಕೊರೋನಾ ಕಷ್ಟ ಕಾಲದಲ್ಲಿ ಬಡವರು ಮತ್ತು ಅಸಹಾಯಕ ಜನರ ನೆರವಿಗೆ ನಿಂತು ಹಗಲಿರುಳು ಶ್ರಮಿಸುತ್ತಿದ್ದಾರೆ. ಸ್ವಂತ ಆಟೋ ಇಟ್ಟುಕೊಂಡು ಅದರಲ್ಲಿ ಜೀವನ ನಡೆಸುತ್ತಿದ್ದ. ಆದರೆ ನಗರದಲ್ಲಿ ಮಾಹಾಮಾರಿ ಕೊರೋನಾ ಆರ್ಭಟ ಹೆಚ್ಚಾಗುತ್ತಿದ್ದಂತೆ ಹಲವು ಮಂದಿ ಸೋಂಕಿತರು ಆಸ್ಪತ್ರೆಗೆ ಹೋಗಲು ಆ್ಯಂಬುಲೆನ್ಸ್ ಸಿಗದೇ ಪರದಾಡುವಂತ ಸನ್ನಿವೇಶ ಕಂಡು ಬಂದಿತ್ತು. ಈ ವೇಳೆ ಮಜೀದ್ ಸೌಧಾಗರ್ ತನ್ನ ಆಟೋವನ್ನೇ ಆ್ಯಂಬುಲೆನ್ಸ್ ಮಾಡಿಕೊಂಡು ಸೋಂಕಿತರನ್ನ ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದಾರೆ.

ಬ್ರಹ್ಮಗಿರಿ ದುರಂತ: ಎರಡೇ ದಿನದಲ್ಲಿ ಕಾರ್ಯಾಚರಣೆ ಮುಗಿಸುವಂತೆ ಅಧಿಕಾರಿಗಳಿಗೆ ಸಚಿವ ಆರ್.​​​ ​ಅಶೋಕ್​​ ಸೂಚನೆ

ಹೌದು, ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬರ್ತಿಲ್ಲ. ಆಸ್ಪತ್ರೆ ಸಿಗ್ತಿಲ್ಲ, ಬೆಡ್ ಸಿಗ್ತಿಲ್ಲ ಅಂತ ಎಷ್ಟೋ ಮಂದಿ ಪರದಾಟ ನಡೆಸುತ್ತಿದ್ದಾಗ ಅವರ ನೆರವಿಗೆ ನಿಂತಿದ್ದು‌ ಈ ಮಜೀದ್ ಸೌಧಾಗರ್. ಆ್ಯಂಬುಲೆನ್ಸ್ ರೀತಿಯಲ್ಲಿ ತನ್ನ ಆಟೋದಲ್ಲೆ ನೂರಾರು ಜನರನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ರೋಗಿಗಳನ್ನ ಅಸ್ಪತ್ರೆಗೆ ಸೇರಿಸುವ ಸಲುವಾಗಿ ತನ್ನ ಆಟೋ ಮೀಸಲಿಟ್ಟಿದ್ದು ಕೊರೋನಾ ಸೋಂಕಿತರಲ್ಲದೆ ಇತರ ರೋಗಿಗಳನ್ನ ಅಸ್ಪತ್ರೆಗೆ ಸೇರಿಸೋದೆ ಇವರ ಕೆಲಸವಂತೆ.

ಕಳೆದ ಐದು ತಿಂಗಳಿಂದ ನೂರಾರು ರೋಗಿಗಳನ್ನ ಕರೆದೊಯ್ದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಈ ಆಟೋ ಚಾಲಕ. ಈವರೆಗೆ 26 ಕೊರೋನಾ ಸೋಂಕಿತರು ಹಾಗೂ ನೂರಾರು ಇತರೆ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರಂತೆ.

ಇನ್ನು, ಮಜೀದ್ ಸೌಧಾಗರ್ ಗೆ 70 ವರ್ಷ ವಯಸ್ಸಾಗಿದೆ. ಈ ವಯಸ್ಸಿನಲ್ಲಿ ಎಷ್ಟೋ ಜನ ಕೊರೋನಾ ಭೀತಿಯಿಂದ ಮನೆಯಿಂದ ಹೊರ ಬರಲು ಹೆದರುತ್ತಾರೆ. ಆದರೆ ಇವರು ಮಾತ್ರ ಕೊರೋನಾಗೆ ಆತಂಕ ಪಡುವ ಪ್ರಶ್ನೆಯೇ ಇಲ್ಲ ಅಂತಾರೆ. ಕೊರಓನಾ ಸೋಂಕಿತರು ಆಟೋಗೆ ಬಂದಲ್ಲಿ ಮೊದಲಿಗೆ ಸುರಕ್ಷತೆಗೆ ಒತ್ತು ಕೊಡ್ತಾರಂತೆ. ಮೊದಲು ತಾವು ಪಿಪಿಇ ಕಿಟ್ ಧರಿಸಿ ನಂತರ ಸೋಂಕಿತರಿಗೆ ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ಹಾಕಿ ಅಸ್ಪತ್ರೆಗೆ ಕರೆದೊಯ್ಯುತ್ತಾರೆ. ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸಿ ಬಳಿಕ ಆಟೋ ಸ್ಯಾನಿಟೈಸ್ ಮಾಡಿ ನಂತರ ಮನೆಗೆ ಹೋಗಿ ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಾರಂತೆ.

ಕಳೆದ ಐದು ತಿಂಗಳಿಂದ ಸೋಂಕಿತರ ಸಂಪರ್ಕ ಇದ್ದರೂ ಇದುವರೆಗೆ ಇವರ ಬಳಿಗೆ ಕೊರೋನಾ ಸುಳಿದಿಲ್ಲವಂತೆ. ಮಾಸ್ಕ್, ಸಾಮಾಜಿಕ ದೂರ, ಸ್ಯಾನಿಟೈಸ್ ಮತ್ತು ಪಿಪಿಇ ಕಿಟ್ ಬಳಕೆಯಿಂದ ಜಾಗೃತರಾಗಿದ್ದಾರೆ ಮಜೀದ್. ಸರ್ಕಾರದ ಮಾರ್ಗಸೂಚಿಗಳನ್ನ ಪ್ರತಿನಿತ್ಯ ಚಾಚು ತಪ್ಪದೆ ಪಾಲಿಸುತ್ತಾರಂತೆ.

ಈವರೆಗೆ ಒಮ್ಮೆಯೂ ಕೊರೋನಾ ಟೆಸ್ಟ್ ಮಾಡಿಸಿಲ್ವಂತೆ. ಬಡವರು, ಅಸಹಾಯಕರಿಗೆ ಕೈಲಾದ ಸಹಾಯ ಮಾಡಬೇಕು ಎನ್ನುವ ಛಲದಲ್ಲಿ ಪ್ರತಿದಿನ ಕೆಲಸ ಮಾಡ್ತಿದ್ದಾರಂತೆ. ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ಈ ರಿಯಲ್ ಕೊರೊನಾ ವಾರಿಯರ್ ಬೆನ್ನಿಗೆ ಬಿಬಿಎಂಪಿ ಮತ್ತು ಹಲವು ಸಂಘ ಸಂಸ್ಥೆಗಳು ನಿಂತು ಸಪೋರ್ಟ್ ಮಾಡ್ತಿವೆಯಂತೆ.
Published by: Latha CG
First published: August 9, 2020, 4:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading