HOME » NEWS » Sports » CRICKET SHIKHAR DHAWAN SHOWS A GLIMPSE OF TEAM INDIAS NEW JERSEY ZP

Team India: 1992 ರ ಲುಕ್​ನಲ್ಲಿ ಟೀಮ್ ಇಂಡಿಯಾ: ಹೊಸ ಜರ್ಸಿಯಲ್ಲಿ ಕಣಕ್ಕಿಳಿಯುವುದು ಕನ್ಫರ್ಮ್..!

ಟೀಮ್ ಇಂಡಿಯಾದ ನೂತನ ಜರ್ಸಿ 1992ರ ವಿಶ್ವಕಪ್​ ಜರ್ಸಿಯ ವಿನ್ಯಾಸವನ್ನು ಹೊಂದಿದೆ. ಈ ವಿಶ್ವಕಪ್​ನಲ್ಲಿ ಎಲ್ಲಾ ಕ್ರಿಕೆಟ್ ತಂಡಗಳು ಒಂದೇ ವಿನ್ಯಾಸದ ವಿವಿಧ ಬಣ್ಣಗಳ ಜರ್ಸಿ ಧರಿಸಿತ್ತು.

news18-kannada
Updated:November 24, 2020, 8:11 PM IST
Team India: 1992 ರ ಲುಕ್​ನಲ್ಲಿ ಟೀಮ್ ಇಂಡಿಯಾ: ಹೊಸ ಜರ್ಸಿಯಲ್ಲಿ ಕಣಕ್ಕಿಳಿಯುವುದು ಕನ್ಫರ್ಮ್..!
Team India New Jersey
  • Share this:
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಸರಣಿಗೆ ದಿನಗಣನೆ ಶುರುವಾಗಿದೆ. ನವೆಂಬರ್ 27 ರಂದು ಮೊದಲ ಏಕದಿನ ನಡೆಯಲಿದ್ದು, ಈ ಪಂದ್ಯದಲ್ಲಿ ರೆಟ್ರೊ ಸ್ಟೈಲ್ ಜರ್ಸಿಯೊಂದಿಗೆ ಟೀಮ್ ಇಂಡಿಯಾ ಆಟಗಾರರು ಕಣಕ್ಕಿಳಿಯುವುದು ಖಚಿತವಾಗಿದೆ. ಹೌದು, ಕೆಲ ದಿನಗಳ ಹಿಂದೆಯಷ್ಟೇ ಟೀಮ್ ಇಂಡಿಯಾದ ಜೆರ್ಸಿ ಬದಲಾಗಲಿದೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಅದು ಕೂಡ 1992 ರ ವಿಶ್ವಕಪ್ ವೇಳೆ ಭಾರತದ ಆಟಗಾರರು ಧರಿಸಿದ್ದ ಜರ್ಸಿ ಅವತಾರದಲ್ಲಿ ಎಂದು ಹೇಳಲಾಗಿತ್ತು.

ಇದೀಗ ಭಾರತ ತಂಡದ ನೂತನ ಜರ್ಸಿಯನ್ನು ಟೀಮ್ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಬಹಿರಂಗಪಡಿಸಿದ್ದಾರೆ. ಟ್ವಿಟರ್​ನಲ್ಲಿ ಹೊಸ ಜರ್ಸಿ ಧರಿಸಿದ ಫೋಟೋ ಹಂಚಿಕೊಂಡಿರುವ ಧವನ್, ಹೊಸ ಜರ್ಸಿ, ಹೊಸ ಪ್ರೇರಣೆ, ಮುನ್ನುಗ್ಗಲು ಸಿದ್ಧ ಎಂದು ಬರೆದುಕೊಂಡಿದ್ದಾರೆ.

ಟೀಮ್ ಇಂಡಿಯಾದ ನೂತನ ಜರ್ಸಿ 1992ರ ವಿಶ್ವಕಪ್​ ಜರ್ಸಿಯ ವಿನ್ಯಾಸವನ್ನು ಹೊಂದಿದೆ. ಈ ವಿಶ್ವಕಪ್​ನಲ್ಲಿ ಎಲ್ಲಾ ಕ್ರಿಕೆಟ್ ತಂಡಗಳು ಒಂದೇ ವಿನ್ಯಾಸದ ವಿವಿಧ ಬಣ್ಣಗಳ ಜರ್ಸಿ ಧರಿಸಿತ್ತು. ಅಂದು ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್ ಕಂಗೊಳಿಸಿದ್ದ ಕಡು ನೀಲಿ ಬಣ್ಣದ ಜರ್ಸಿ ಲುಕ್​ನಲ್ಲಿ ಇದೀಗ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶಿಖರ್ ಧವನ್ ಸೇರಿದಂತೆ ಯುವ ಪಡೆ ಮಿಂಚಲು ಸಿದ್ಧವಾಗಿದೆ. ಇನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡವೂ ಕಡು ಹಸಿರಿನಿಂದ ಕೂಡಿರುವ ವಿಭಿನ್ನ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ.

ಇದನ್ನೂ ಓದಿ: IPL 2021: RCB ಖರೀದಿಸಲು ಕಣ್ಣಿಟ್ಟಿರುವ ಐವರು ಆಟಗಾರರು ಇವರೇ..!
Published by: zahir
First published: November 24, 2020, 8:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading