LPL: ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ತಂಡ ಖರೀದಿಸಿದ ನಟ ಸಲ್ಮಾನ್ ಖಾನ್ ಫ್ಯಾಮಿಲಿ

ಗ್ಯಾಲೆ ಗ್ಲಾಡಿಯೇಟರ್ಸ್ ಸ್ಥಳೀಯ ಐಕಾನ್ ಆಗಿ ಲಸಿತ್ ಮಾಲಿಂಗನನ್ನು ಹೊಂದಿದ್ದರೆ, ಶಾಹಿದ್ ಅಫ್ರಿದಿ ಮತ್ತು ಕಾಲಿನ್ ಇಂಗ್ರಾಮ್ ಇಬ್ಬರು ವಿದೇಶಿ ಆಟಗಾರರು ಸಹಿ ಹಾಕಿದ್ದಾರೆ. ತಂಡದ ತರಬೇತುದಾರಾಗಿ ಮೊಯಿನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ.

news18-kannada
Updated:October 21, 2020, 4:11 PM IST
LPL: ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ತಂಡ ಖರೀದಿಸಿದ ನಟ ಸಲ್ಮಾನ್ ಖಾನ್ ಫ್ಯಾಮಿಲಿ
salman khan
  • Share this:
ಕ್ರಿಕೆಟ್​ಗೂ ಬಾಲಿವುಡ್​ಗೂ ನಂಟಿರುವುದು ಗೊತ್ತಿರುವ ವಿಷಯವೇ. ಈಗಾಗಲೇ ಬಾಲಿವುಡ್​ ಸ್ಟಾರ್​ಗಳಾದ ಶಾರುಖ್ ಖಾನ್, ಪ್ರೀತಿ ಜಿಂಟಾ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ತಂಡಗಳ ಮಾಲೀಕರಾಗಿದ್ದಾರೆ. ಹಾಗೆಯೇ ಸಲ್ಮಾನ್ ಖಾನ್ ಕೂಡ ಐಪಿಎಲ್ ತಂಡ ಖರೀದಿಸಲಿದ್ದಾರೆ ಎಂಬ ಸುದ್ದಿಗಳು ಕೆಲ ವರ್ಷಗಳ ಹಿಂದೆ ಭಾರೀ ಸದ್ದು ಮಾಡಿತ್ತು. ಇದಾಗ್ಯೂ ಸಲ್ಮಾನ್ ಖಾನ್ ಫ್ಯಾಮಿಲಿ ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ನಲ್ಲಿ ಬಾಲಿವುಡ್ ಹೀರೋಸ್ ಹಾಗೂ ಯುಎಇಯ ಟಿ 10 ಲೀಗ್​ನಲ್ಲಿ ತಂಡಕ್ಕೆ ಬಂಡವಾಳ ಹೂಡಿದ್ದರು. ಇದೀಗ ಅಂತರಾಷ್ಟ್ರೀಯ ಮಟ್ಟದ ಲೀಗ್​ಗೆ ಸಲ್ಲು ಕುಟುಂಬ ಎಂಟ್ರಿ ಕೊಟ್ಟಿದೆ. ಇದೇ ಮೊದಲ ಬಾರಿ ಶ್ರೀಲಂಕಾದಲ್ಲಿ ನಡೆಯಲಿರುವ ಲಂಕಾ ಪ್ರೀಮಿಯರ್ ಲೀಗ್​ನ ಕ್ಯಾಂಡಿ ಟಸ್ಕರ್ಸ್ ತಂಡವನ್ನು ಸಲ್ಮಾನ್ ಕುಟುಂಬ ಖರೀದಿಸಿದೆ ಎಂದು ವರದಿಯಾಗಿದೆ.

ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಸೊಹೈಲ್ ಮತ್ತು ತಂದೆ, ಪ್ರಸಿದ್ಧ ಚಿತ್ರಕಥೆಗಾರ ಸಲೀಮ್ ಖಾನ್ ಒಡೆತನದಲ್ಲಿ ಲಂಕಾ ಪ್ರೀಮಿಯರ್ ಲೀಗ್ ತಂಡಕ್ಕೆ ಬಂಡವಾಳ ಹೂಡಿದ್ದಾರೆ. ನೆರೆ ರಾಷ್ಟ್ರದ ಲೀಗ್​ನ ತಂಡವನ್ನು ಖರೀದಿಸಿರುವ ಬಗ್ಗೆ ಖುದ್ದು ಸೊಹೈಲ್ ಖಾನ್ ಸಹ ಸ್ಪಷ್ಟಪಡಿಸಿದ್ದಾರೆ.

ಕ್ಯಾಂಡಿ ಟಸ್ಕರ್ಸ್ ತಂಡದಲ್ಲಿ ಕ್ರಿಸ್ ಗೇಲ್, ಲಿಯಾಮ್ ಪ್ಲಂಕೆಟ್ ಮತ್ತು ಸ್ಥಳೀಯ ಕುಶಾಲ್ ಪೆರೆರಾ ಅವರಂತಹ ಪ್ರಮುಖ ಆಟಗಾರರಿದ್ದು, ಪಾಕಿಸ್ತಾನದ ವೇಗದ ಬೌಲರ್ ವಹಾಬ್ ರಿಯಾಜ್ ಕೂಡ ಕ್ಯಾಂಡಿ ಟಸ್ಕರ್ಸ್ ತಂಡದ ಭಾಗವಾಗಲಿದ್ದಾರೆ.

ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಎಲ್‌ಪಿಎಲ್ ಸಂಘಟಕರು ಇನ್ನೂ ಐದು ಫ್ರ್ಯಾಂಚೈಸ್ ಮಾಲೀಕರನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಗ್ಯಾಲೆ ಫ್ರ್ಯಾಂಚೈಸ್ ಪಾಕಿಸ್ತಾನದ ಸೂಪರ್ ಲೀಗ್ ಫ್ರ್ಯಾಂಚೈಸ್ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮಾಲೀಕತ್ವದಲ್ಲಿದೆ ಎಂದು ವರದಿಯಾಗಿದೆ. ಇತರೆ ಮೂರು ತಂಡಗಳು ಸಹ ಭಾರತೀಯ ಮಾಲೀಕರನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಕ್ರಿಸ್ ಗೇಲ್, ಆಂಡ್ರೆ ರಸೆಲ್, ಫಾಫ್ ಡು ಪ್ಲೆಸಿಸ್, ಡೇವಿಡ್ ಮಿಲ್ಲರ್, ಕಾರ್ಲೋಸ್ ಬ್ರಾಥ್‌ವೈಟ್, ಶಾಹಿದ್ ಅಫ್ರಿದಿ ಸೇರಿದಂತೆ 438 ಕ್ರಿಕೆಟಿಗರು ಎಲ್‌ಪಿಎಲ್ ಪ್ಲೇಯರ್ ಡ್ರಾಫ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್‌ಪಿಎಲ್ 2020 ನವೆಂಬರ್ 21 ರಿಂದ ಪ್ರಾರಂಭವಾಗಲಿದೆ.

ಕೊಲಂಬೊ ಕಿಂಗ್ಸ್ ಸೋಮವಾರ ಲಂಕಾ ಪ್ರೀಮಿಯರ್ ಲೀಗ್ ಪ್ಲೇಯರ್ಸ್ ಡ್ರಾಫ್ಟ್‌ನಲ್ಲಿ ಏಂಜೆಲೊ ಮ್ಯಾಥ್ಯೂಸ್, ಫಾಫ್ ಡು ಪ್ಲೆಸಿಸ್ ಮತ್ತು ಆಂಡ್ರೆ ರಸೆಲ್ ಅವರನ್ನು ಆಯ್ಕೆ ಮಾಡಿದೆ. ಮ್ಯಾಥ್ಯೂಸ್ ತಂಡದಲ್ಲಿ ‘ಸ್ಥಳೀಯ ಐಕಾನ್’ ಆಗಿದ್ದರೆ, ಡು ಪ್ಲೆಸಿಸ್ ಮತ್ತು ರಸೆಲ್ ಇಬ್ಬರು ವಿದೇಶಿ ಸ್ಟಾರ್ ಆಟಗಾರರು.

ಗ್ಯಾಲೆ ಗ್ಲಾಡಿಯೇಟರ್ಸ್ ಸ್ಥಳೀಯ ಐಕಾನ್ ಆಗಿ ಲಸಿತ್ ಮಾಲಿಂಗನನ್ನು ಹೊಂದಿದ್ದರೆ, ಶಾಹಿದ್ ಅಫ್ರಿದಿ ಮತ್ತು ಕಾಲಿನ್ ಇಂಗ್ರಾಮ್ ಇಬ್ಬರು ವಿದೇಶಿ ಆಟಗಾರರು ಸಹಿ ಹಾಕಿದ್ದಾರೆ. ತಂಡದ ತರಬೇತುದಾರಾಗಿ ಮೊಯಿನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ.ದಶುಲ್ಲಾ ಹಾಕ್ಸ್‌ನ ಸ್ಥಳೀಯ ಐಕಾನ್ ದಾಶುನ್ ಶಂಕಾ ಆಗಿದ್ದರೆ, ಡೇವಿಡ್ ಮಿಲ್ಲರ್ ಮತ್ತು ಕಾರ್ಲೋಸ್ ಬ್ರಾಥ್‌ವೈಟ್ ವಿದೇಶಿ ಆಟಗಾರರಾಗಿ ಸಹಿ ಹಾಕಿದ್ದಾರೆ. ಹಾಕ್ಸ್ ತಂಡದ ತರಬೇತುದಾರ ಜಾನ್ ಲೆವಿಸ್.

ಜಾಫ್ನಾ ಸ್ಟಾಲಿಯನ್ಸ್ ಸ್ಥಳೀಯ ಐಕಾನ್ ಆಗಿ ತಿಸೆರಾ ಪೆರೆರಾ ಮತ್ತು ವಿದೇಶಿ ಆಟಗಾರರಾಗಿ ಡೇವಿಡ್ ಮಲನ್ ಮತ್ತು ವಾನಿಂದು ಹಸರಂಗ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನು ಈ ಲೀಗ್​ನಲ್ಲಿ ಇಬ್ಬರು ಭಾರತೀಯ ಕ್ರಿಕೆಟಿಗರಾಗಿ ಮನ್ವಿಂದರ್ ಬಿಸ್ಲಾ ಮತ್ತು ಮನ್ಪ್ರೀತ್ ಗೋನಿ ಅವರ ಹೆಸರು ಕಾಣಿಸಿಕೊಂಡಿದ್ದು, ಇಬ್ಬರು ಕೊಲಂಬೊ ಕಿಂಗ್ಸ್ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ.

ಲಂಕಾ ಪ್ರೀಮಿಯರ್ ಲೀಗ್ ಯಾವಾಗ ಪ್ರಾರಂಭವಾಗುತ್ತದೆ ?
ನವೆಂಬರ್ 21 ರಿಂದ ಡಿಸೆಂಬರ್ 13 ರವರೆಗೆ ಎರಡು ಸ್ಥಳಗಳಲ್ಲಿ ನಡೆಯಲಿದೆ. ಕ್ಯಾಂಡಿಯ ಪಲ್ಲಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಮತ್ತು ಹಂಬಂಟೋಟದ ಮಹಿಂದಾ ರಾಜಪಕ್ಸೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ 5 ತಂಡಗಳು 23 ಪಂದ್ಯಗಳಲ್ಲಿ ಸ್ಪರ್ಧಿಸಲಿವೆ.
POINTS TABLE:

SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
Published by: zahir
First published: October 21, 2020, 4:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading