ಕ್ರೀಡೆ

  • associate partner

IPL 2020: ಅತಿ ಹೆಚ್ಚು ಸಿಕ್ಸ್​ ಹೊಡೆದವರ ಸಾಲಿನಲ್ಲಿ ಮೊದಲಿಗರಾಗಿಯೇ ಉಳಿದ ಎಬಿ ಡಿವಿಲಿಯರ್ಸ್​

ಇನ್ನು ಅತಿ ಹೆಚ್ಚು ವಿಕೆಟ್​ ತೆಗೆದವರಿಗೆ ನೀಡುವ ಪರ್ಪಲ್ ಕ್ಯಾಪ್​ ಈ ಬಾರಿ ಡೆಲ್ಲಿ ಬೌಲರ್​ ರಬಾಡ ಬಳಿ ಇದೆ. 19 ವಿಕೆಟ್​ ಕೀಳುವ ಮೂಲಕ ಅವರು ಪರ್ಪಲ್​​ ಕ್ಯಾಪ್ ಹಾಕಿಕೊಂಡಿದ್ದಾರೆ.

news18-kannada
Updated:October 20, 2020, 7:57 AM IST
IPL 2020: ಅತಿ ಹೆಚ್ಚು ಸಿಕ್ಸ್​ ಹೊಡೆದವರ ಸಾಲಿನಲ್ಲಿ ಮೊದಲಿಗರಾಗಿಯೇ ಉಳಿದ ಎಬಿ ಡಿವಿಲಿಯರ್ಸ್​
ವಿರಾಟ್ ಕೊಹ್ಲಿ - ಎಬಿ ಡಿವಿಲಿಯರ್ಸ್.
  • Share this:
ಅಬುಧಾಬಿಯ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 37ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತನ್ನ ಪ್ಲೇ ಆಫ್ ಕನಸನ್ನ ಜೀವಂತವಾಗಿರಿಸಿದೆ. ಇತ್ತ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಹೀನಾಯ ಸೋಲುಕಂಡ ಧೋನಿ ಪಡೆ ಬಹುತೇಕ ಟೂರ್ನಿಯಿಂದಲೇ ಹೊರಬಿದ್ದಿದೆ. ಸಾಕಷ್ಟು ಅಡೆತಡೆಗಳನ್ನು ಎದುರಿಸಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭಿಸಲಾಗಿದೆ. ಪ್ರತಿ ವರ್ಷ ಭಾರತದಲ್ಲಿ ಐಪಿಎಲ್​ ನಡೆಯುತ್ತಿತ್ತು. ಆದರೆ, ಈ ಬಾರಿ ಐಪಿಎಲ್​ ಯುಎಇಗೆ ಶಿಫ್ಟ್​ ಆಗಿದೆ. ಸೆಪ್ಟೆಂಬರ್ 19ರಿಂದ ಹೊಡಿಬಡಿ ಆಟ ಅಭಿಮಾನಿಗಳನ್ನು ರಂಜಿಸುತ್ತಿದೆ.

ಅತಿ ಹೆಚ್ಚು ರನ್​ ಹೊಡೆಯುವವರಿಗೆ ನೀಡುವ ಆರೆಂಜ್​ ಕ್ಯಾಪ್ ಕಿಂಗ್ಸ್​ ಇಲವೆನ್ ಪಂಜಾಬ್​ ತಂಡದ ಆಟಗಾರ, ಕನ್ನಡಿಗ ಕೆಎಲ್​ ರಾಹುಲ್​​ ಬಳಿ ಇದೆ. 9 ಪಂದ್ಯಗಳಲ್ಲಿ ಅವರು 525 ರನ್​ ಕಲೆ ಹಾಕಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್​ ಕಲೆ ಹಾಕುವ ಮೂಲಕ ಆರೇಂಜ್​ ಕ್ಯಾಪ್​ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

ORANGE CAP:

ಇನ್ನು ಅತಿ ಹೆಚ್ಚು ವಿಕೆಟ್​ ತೆಗೆದವರಿಗೆ ನೀಡುವ ಪರ್ಪಲ್ ಕ್ಯಾಪ್​ ಈ ಬಾರಿ ಡೆಲ್ಲಿ ಬೌಲರ್​ ರಬಾಡ ಬಳಿ ಇದೆ. 19 ವಿಕೆಟ್​ ಕೀಳುವ ಮೂಲಕ ಅವರು ಪರ್ಪಲ್​​ ಕ್ಯಾಪ್ ಹಾಕಿಕೊಂಡಿದ್ದಾರೆ.

PURPLE CAP:

ಐಪಿಎಲ್​ ಎಂದಮೇಲೆ ಸಿಕ್ಸ್​​ನ ಸುರಿಮಳೆ ಸುರಿಯೋದು ಕಾಮನ್​. ಈ ರೀತಿ ಸಿಕ್ಸ್ ಸಿಡಿಸಿದವರ ಪಟ್ಟಿಯಲ್ಲಿ ರಾಜಸ್ಥಾನ್​​ ​ ತಂಡದ ಸಂಜು ಸ್ಯಾಮ್​ಸನ್​​​ ಮೊದಲ ಸ್ಥಾನಲ್ಲಿದ್ದಾರೆ. 8  ಪಂದ್ಯಗಳಲ್ಲಿ ಅವರು ಬರೋಬ್ಬರಿ 18 ಸಿಕ್ಸ್​ ಸಿಡಿಸಿದ್ದಾರೆ.

MOST SIXES: ಡೆಲ್ಲಿ ಕ್ಯಾಪಿಟಲ್ಸ್​ ಆಡಿದ 9 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಎರಡಲ್ಲಿ ಸೋತಿದೆ. ಈ ಮೂಲಕ 14 ಅಂಕ ಪಡೆದು ಅಂಕಪಟ್ಟಿಯಲ್ಲಿ ಮೇಲಿದೆ. ಅಲ್ಲದೆ, ಪ್ಲೇ ಆಫ್​ಗೆ ಏರುವುದು ಬಹುತೇಕ ಖಚಿತವಾಗಿದೆ. ಮುಂಬೈ ಇಂಡಿಯನ್ಸ್​​  ಆಡಿದ 9 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು ಮೂರನೇ ಸ್ಥಾನದಲ್ಲಿದೆ. ಆರ್​ಸಿಬಿ 9 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಈ ಮೂಲಕ ಮೂರನೇ ಸ್ಥಾನ ಅಲಂಕರಿಸಿದೆ.

POINTS TABLE:

ಕೋಲ್ಕತ್ತಾ 9 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿ ರಾಜಸ್ಥಾನ ಇದೆ. ಆರನೇ ಸ್ಥಾನದಲ್ಲಿ ಹೈದರಾಬಾದ್​, ಏಳನೇ ಸ್ಥಾನದಲ್ಲಿ ಪಂಜಾಭ್​ ಹಾಗೂ ಕೊನೆಯ ಸ್ಥಾನದಲ್ಲಿ ಚೆನ್ನೈ ಇದೆ.
Published by: Rajesh Duggumane
First published: October 20, 2020, 7:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading