‘ಮೋದಿ ಸರ್ಕಾರ ತಂದ ಕೃಷಿ ಸುಗ್ರೀವಾಜ್ಞೆಗಳು ರೈತ ವಿರೋಧಿ ನೀತಿಗೆ ಹಿಡಿದ ಕನ್ನಡಿ‘ - ಯುವ ಕಾಂಗ್ರೆಸ್​ ಅಧ್ಯಕ್ಷ ಬಿ.ವಿ ಶ್ರೀನಿವಾಸ್​

ಕೇಂದ್ರ ಸರ್ಕಾರ ತಂದಿರುವ ಸುಗ್ರೀವಾಜ್ಞೆಗಳ ಉದ್ದೇಶವು ದೊಡ್ಡ ಕೈಗಾರಿಕೋದ್ಯಮಿಗಳು ಮತ್ತು ವಿದೇಶಿ ಕಂಪನಿಗಳಿಗೆ ಕೃಷಿಯ ಹಕ್ಕನ್ನು ನೀಡುವುದಾಗಿದೆ‌. ಇಡೀ ದೇಶವು ಕರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವಾಗ ಮತ್ತು ಸಂಸತ್ತು ಮುಚ್ಚಿದಾಗ, ಸುಗ್ರೀವಾಜ್ಞೆಯ ಮೂಲಕ ಕೈಗಾರಿಕೋದ್ಯಮಿಗಳಿಗೆ ಹಾಗೂ ವಿದೇಶಿ ಕಂಪನಿಗಳಿಗೆ ಕೇಂದ್ರ ಸರ್ಕಾರ ನೆರವು ನೀಡಿದೆ ಎಂದರು ಬಿ.ವಿ ಶ್ರೀನಿವಾಸ್​.

news18-kannada
Updated:September 16, 2020, 6:24 AM IST
‘ಮೋದಿ ಸರ್ಕಾರ ತಂದ ಕೃಷಿ ಸುಗ್ರೀವಾಜ್ಞೆಗಳು ರೈತ ವಿರೋಧಿ ನೀತಿಗೆ ಹಿಡಿದ ಕನ್ನಡಿ‘ - ಯುವ ಕಾಂಗ್ರೆಸ್​ ಅಧ್ಯಕ್ಷ ಬಿ.ವಿ ಶ್ರೀನಿವಾಸ್​
ಯುವ ಕಾಂಗ್ರೆಸ್​ ಅಧ್ಯಕ್ಷ ಬಿ.ವಿ ಶ್ರೀನಿವಾಸ್​
  • Share this:
ನವದೆಹಲಿ(ಸೆ.16): ಕೇಂದ್ರ ಸರ್ಕಾರವು ತಂದಿರುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆಗಳನ್ನು  ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ರೈತ ವಿರೋಧಿ ನೀತಿಗೆ ಹಿಡಿದ ಕನ್ನಡಿಯಾಗಿದೆ. ಇದನ್ನು ಭಾರತೀಯ ಯುವ ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಹೇಳಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶ್ರೀನಿವಾಸ್, "ಮೋದಿ ಹೇಳುವುದು ಒಂದು ಮಾಡುವುದು ಇನ್ನೊಂದು. ಅವರ ಮನಸ್ಸು ಸೂಟ್-ಬೂಟ್ ಹೊಂದಿರುವ ಕೈಗಾರಿಕೋದ್ಯಮಿಗಳ ಪರವಾಗಿದೆ. ಅವರನ್ನು ಕೇಳಿ, ಅವರಿಗೆ ಅನುಕೂಲವಾಗುವ ರೀತಿಯಲ್ಲೇ ನಿರ್ಧಾರ ಕೈಗೊಳ್ಳುತ್ತಾರೆ. ಮೋದಿ ಸಾರ್ವಜನಿಕರ ದುಃಖವನ್ನು ಕೇಳಲು ಸಿದ್ಧರಿಲ್ಲ" ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೃಷಿ ಕ್ಷೇತ್ರ ಕಡುಕಷ್ಟದಲ್ಲಿದೆ. ರೈತರು ಹಲವು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಬೆಳೆಗಳಿಗೆ ನೀಡುವ ಬೆಂಬಲ ಬೆಲೆಯನ್ನು ಕೊನೆಗೊಳಿಸಲು ಕೃಷಿ ಕಾನೂನಿನಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ. ”ಕೊರೋನಾ ಅವಧಿಯಲ್ಲಿ ಕೃಷಿಗೆ ಸಂಬಂಧಿಸಿದ ಮೂರು ಸುಗ್ರೀವಾಜ್ಞೆಗಳನ್ನು ತಂದಿದ್ದು, ಮೂರು ಸುಗ್ರೀವಾಜ್ಞೆಗಳೂ ರೈತ ವಿರೋಧಿಯಾಗಿವೆ ಎಂದು ಅಸಮಾಧಾನ ತೋರಿದ್ದಾರೆ.

ಕೆಂದ್ರ ಸರ್ಕಾರ ತಂದಿರುವ ಸುಗ್ರೀವಾಜ್ಞೆಗಳು ರೈತರ ಪಾಲಿಗೆ ಅಪಾಯಕಾರಿಯಾಗಿವೆ. ಏಕೆಂದರೆ ಮುಂದಿನ ದಿನಗಳಲ್ಲಿ ರೈತರ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಗಳೂ (ಎಂಎಸ್‌ಪಿ) ಸಿಗಲಾರದಂತಹ ವ್ಯವಸ್ಥಿತ ತಂತ್ರ ಇವುಗಳಲ್ಲಿ ಅಡಕವಾಗಿದೆ.  'ಈ ಸುಗ್ರೀವಾಜ್ಞೆಗಳು ಅಸಾಂವಿಧಾನಿಕವಾಗಿವೆ. ಕೃಷಿ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ವಿಷಯವಾಗಿದ್ದು ಅದರಲ್ಲಿ ಹಸ್ತಕ್ಷೇಪ ಮಾಡಲು ಕೇಂದ್ರ ಸರ್ಕಾರಕ್ಕೆ ಯಾವುದೇ ಸಾಂವಿಧಾನಿಕ ಹಕ್ಕಿಲ್ಲ.  ಈ ರೀತಿಯ ಕಾನೂನು ಬದಲಾವಣೆಯನ್ನು ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಬೇಕಾಗಿದೆ. ಆದರೆ ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ವಿರುದ್ಧವಾಗಿ ಸುಗ್ರೀವಾಜ್ಞೆ ತಂದಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ತಂದಿರುವ ಸುಗ್ರೀವಾಜ್ಞೆಗಳ ಉದ್ದೇಶವು ದೊಡ್ಡ ಕೈಗಾರಿಕೋದ್ಯಮಿಗಳು ಮತ್ತು ವಿದೇಶಿ ಕಂಪನಿಗಳಿಗೆ ಕೃಷಿಯ ಹಕ್ಕನ್ನು ನೀಡುವುದಾಗಿದೆ‌. ಇಡೀ ದೇಶವು ಕರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವಾಗ ಮತ್ತು ಸಂಸತ್ತು ಮುಚ್ಚಿದಾಗ, ಸುಗ್ರೀವಾಜ್ಞೆಯ ಮೂಲಕ  ಕೈಗಾರಿಕೋದ್ಯಮಿಗಳಿಗೆ ಹಾಗೂ ವಿದೇಶಿ ಕಂಪನಿಗಳಿಗೆ ಕೇಂದ್ರ ಸರ್ಕಾರ ನೆರವು ನೀಡಿದೆ ಎಂದು ಹೇಳಿದ್ದಾರೆ.

ದೇಶಾದ್ಯಂತದ ರೈತ ಸಂಘಟನೆಗಳು ಈ ಸುಗ್ರೀವಾಜ್ಞೆಗಳನ್ನು ವಿರೋಧಿಸುತ್ತಿವೆ. ಆದರೆ ಕೇಂದ್ರ ಸರ್ಕಾರವು ಅವುಗಳನ್ನು ಕೇಳುವ ಬದಲು ರೈತರ ದನಿ ಅಡಗಿಸಲು ಪ್ರಯತ್ನಿಸುತ್ತಿದೆ. ಸಂವಿಧಾನದ 123ನೇ ವಿಧಿ ಅನ್ವಯದ ಸುಗ್ರೀವಾಜ್ಞೆಯು ತುರ್ತು ವ್ಯವಸ್ಥೆಯಾಗಿದ್ದು, ಕೃಷಿ ಮತ್ತು ರೈತರ ನಿರ್ಮೂಲನೆಗೆ ಕೇಂದ್ರ ಸರ್ಕಾರ ಬಹಿರಂಗವಾಗಿ ಬಳಸುತ್ತಿದೆ. ಈ ರೈತ ವಿರೋಧಿ ಸುಗ್ರೀವಾಜ್ಞೆಗಳನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳದಿದ್ದರೆ, ರೈತರ ಹಿತಾಸಕ್ತಿ ಕಾಪಾಡಲು ಭಾರತೀಯ ಯುವ ಕಾಂಗ್ರೆಸ್ ರಸ್ತೆಗಿಳಿಯಲಿದೆ ಎಂದು ಶ್ರೀನಿವಾಸ್ ಎಚ್ಚರಿಸಿದರು.

ಇದನ್ನೂ ಓದಿ: ಭಾರತ-ಚೀನಾ ಗಡಿ ಸಂಘರ್ಷ: ‘ಶಾಂತಿಗೆ ಬದ್ಧ, ಸಮರಕ್ಕೂ ಸಿದ್ಧ‘ ಎಂದ ಕೇಂದ್ರ ಸಚಿವ ರಾಜನಾಥ್​​ ಸಿಂಗ್​​ಗಮನಿಸಬೇಕಾದ ಅಂಶವೆಂದರೆ ಪಂಜಾಬ್, ರಾಜಸ್ಥಾನ ಮತ್ತು ಛತ್ತೀಸ್ಘಡದ ಮುಖ್ಯಮಂತ್ರಿಗಳು ರೈತ ವಿರೋಧಿ ಸುಗ್ರೀವಾಜ್ಞೆಗಳಿಗೆ ಸಂಬಂಧಿಸಿದಂತೆ ಪ್ರಧಾನಿಗೆ ಪತ್ರ ಬರೆದಿದ್ದಾರೆ ಎಂಬುದನ್ನು ಶ್ರೀನಿವಾಸ್ ಗಮನಕ್ಕೆ ತಂದಿದ್ದಾರೆ.
Published by: Ganesh Nachikethu
First published: September 16, 2020, 6:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading