ಮೊಬೈಲ್ ಚಾರ್ಜರ್​ನಿಂದ ಗಂಡನ ಕೊಲೆ ಮಾಡಿದ ವಕೀಲೆಗೆ ಜೀವಾವಧಿ ಶಿಕ್ಷೆ

Murder News: ಕೊಲ್ಕತ್ತಾದ ಅಪಾರ್ಟ್​ಮೆಂಟ್​ನಲ್ಲಿ ರಜತ್, ಅನಿಂದಿತಾ ತಮ್ಮ ಮಗುವಿನೊಂದಿಗೆ ವಾಸವಾಗಿದ್ದರು. 2018ರ ನವೆಂಬರ್ 25ರಂದು ರಜತ್ ಡೇ ಮೃತದೇಹ ಬೆಡ್​ರೂಂನಲ್ಲಿ ಬಿದ್ದಿತ್ತು. ಅವರ ಮುಖ ನೀಲಿಗಟ್ಟಿತ್ತು, ಕುತ್ತಿಗೆಯಲ್ಲಿ ಆಳವಾದ ಗುರುತು ಇತ್ತು.

Sushma Chakre | news18-kannada
Updated:September 18, 2020, 11:29 AM IST
ಮೊಬೈಲ್ ಚಾರ್ಜರ್​ನಿಂದ ಗಂಡನ ಕೊಲೆ ಮಾಡಿದ ವಕೀಲೆಗೆ ಜೀವಾವಧಿ ಶಿಕ್ಷೆ
ಗಂಡ ರಜತ್​ನನ್ನು ಕೊಲೆ ಮಾಡಿದ ವಕೀಲೆ ಅನಿಂದಿತಾ ಪಾಲ್ ಡೇ
  • Share this:
ಕೊಲ್ಕತ್ತಾ (ಸೆ. 18): ಆತ ಕೊಲ್ಕತ್ತಾದ ವಕೀಲ. ಹತ್ತಾರು ಕ್ರಿಮಿನಲ್ ಕೇಸ್​ಗಳಲ್ಲಿ ಕಕ್ಷಿದಾರರ ಪರವಾಗಿ ವಾದ ಮಾಡಿದ್ದ ಆತ ತನ್ನ ಅಪಾರ್ಟ್​ಮೆಂಟ್​ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ. ಆ ಸಾವಿನ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಆ ಆರೋಪಿ ಬೇರಾರೂ ಅಲ್ಲ; ಆತನ ಹೆಂಡತಿ!. ಆತನ ಹೆಂಡತಿ ಕೂಡ ಕೊಲ್ಕತ್ತಾದ ಖ್ಯಾತ ವಕೀಲೆಯಾಗಿದ್ದು, ಯಾರಿಗೂ ಅನುಮಾನ ಬಾರದಂತೆ ತನ್ನ ಗಂಡನನ್ನು ಕೊಲೆ ಮಾಡಿ, ಅದೊಂದು ಆಕಸ್ಮಿಕ ಸಾವೆಂದು ಬಿಂಬಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದ್ದಳು. ಕೊನೆಗೂ ಆಕೆ ಪೊಲೀಸರ ಕೈಗೆ ಬಿದ್ದಿದ್ದಳು. ಗಂಡನನ್ನು ಕೊಲೆ ಮಾಡಿದ ಆಕೆಗೆ ಈಗ ಜೀವಾವಧಿ ಶಿಕ್ಷೆಯಾಗಿದೆ. ಅಂದಹಾಗೆ, ಆಕೆ ಮೊಬೈಲ್ ಚಾರ್ಜರ್ ಬಳಸಿ ತನ್ನ ಗಂಡನನ್ನು ಕೊಲೆ ಮಾಡಿದ್ದಾಳೆ ಎಂಬುದು ಅಚ್ಚರಿಯ ಮತ್ತು ವಿಚಿತ್ರ ಸಂಗತಿ!

ಪಶ್ಚಿಮ ಬಂಗಾಳದ ಕೊಲ್ಕತ್ತಾದ ನಿವಾಸಿಯಾಗಿರುವ 35 ವರ್ಷದ ವಕೀಲೆ ಅನಿಂದಿತಾ ಪಾಲ್ ಡೇ ಗಂಡ ರಜತ್ ಕುಮಾರ್ ಡೇ ಕೊಲ್ಕತ್ತಾ ಹೈಕೋರ್ಟ್​ನಲ್ಲಿ ವಕೀಲರಾಗಿದ್ದರು. 2018ರ ನವೆಂಬರ್ 25ರಂದು ರಜತ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಅನಿಂದಿತಾ ಡೇ ವಿರುದ್ಧ ಸಾಕ್ಷಿಗಳನ್ನು ನಾಶ ಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರಿಗೆ ಸಾಕಷ್ಟು ಅಚ್ಚರಿಯ ಸಂಗತಿಗಳು ಗೊತ್ತಾಗಿತ್ತು.

Lawyer Anindita Pal Dey sentenced to life imprisonment for murdering her husband with Mobile Charger.
ಗಂಡ ರಜತ್​ ಜೊತೆಗೆ ವಕೀಲೆ ಅನಿಂದಿತಾ ಪಾಲ್ ಡೇ


ಕೊಲ್ಕತ್ತಾದ ಅಪಾರ್ಟ್​ಮೆಂಟ್​ನಲ್ಲಿ ರಜತ್, ಅನಿಂದಿತಾ ತಮ್ಮ ಮಗುವಿನೊಂದಿಗೆ ವಾಸವಾಗಿದ್ದರು. 2018ರ ನವೆಂಬರ್ 25ರಂದು ರಜತ್ ಡೇ ಮೃತದೇಹ ಅವರ ಬೆಡ್​ರೂಂನಲ್ಲಿ ಬಿದ್ದಿತ್ತು. ಅವರ ಮುಖ ನೀಲಿಗಟ್ಟಿತ್ತು, ಕುತ್ತಿಗೆಯಲ್ಲಿ ಆಳವಾದ ಗುರುತು ಇತ್ತು. ತನ್ನ ಗಂಡ ಮಂಚದಿಂದ ಬಿದ್ದು, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅನಿಂದಿತಾ ಪಾಲ್ ಡೇ ಹೇಳಿದ್ದರು. ಆದರೆ, ಪೊಲೀಸರಿಗೆ ಇದು ಸಹಜ ಸಾವು ಎನಿಸಿರಲಿಲ್ಲ. ಇದಾದ ಬಳಿಕ ರಜತ್​ನ ತಂದೆ ತಮ್ಮ ಮಗನ ಸಾವಿನ ವಿಚಾರದಲ್ಲಿ ಸೊಸೆಯ ಮೇಲೆ ಅನುಮಾನವಿದೆ ಎಂದು ದೂರು ನೀಡಿದ್ದರು. ಇದಾದ ಬಳಿಕ ಅನಿಂದಿತಾಳನ್ನು ವಶಕ್ಕೆ ಪಡೆಯಲಾಗಿತ್ತು.

ಇದನ್ನೂ ಓದಿ: Bengaluru Accident: ಸಿಗ್ನಲ್​ನಲ್ಲಿ ಕಾರುಗಳ ನಡುವೆ ಅಪ್ಪಚ್ಚಿಯಾಯ್ತು ಬೈಕ್; ಅಮಾಯಕ ಸಾವು, ಕಾರು ಚಾಲಕ ಬಂಧನ

ಸಾವನ್ನಪ್ಪಿದ ರಜತ್​ ಹಾಗೂ ಆರೋಪಿ ಅನಿಂದಿತಾಳ ಮೊಬೈಲ್ ಕಾಲ್, ಗೂಗಲ್ ಸರ್ಚ್​ ಹಿಸ್ಟರಿ, ವಾಟ್ಸಾಪ್​ ಚಾಟ್​ಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದರು. ಅವರಿಗೆ ಈ ಕೇಸ್​ನಲ್ಲಿ ಬೇರಾವ ಸಾಕ್ಷಿಗಳೂ ಇರಲಿಲ್ಲ. ಆರೋಪಿ ಅನಿಂದಿತಾ ಯಾವ ರೀತಿ ಉಸಿರುಗಟ್ಟಿಸಿ ಕೊಲೆ ಮಾಡಬಹುದು ಎಂಬ ಬಗ್ಗೆ ಸಾಕಷ್ಟು ವೆಬ್​ಸೈಟ್​ಗಳಲ್ಲಿ ಸರ್ಚ್​ ಮಾಡಿದ್ದರು ಎಂಬುದು ತನಿಖೆ ವೇಳೆ ಬಯಲಾಗಿತ್ತು. ತನಿಖೆ ವೇಳೆ ಬಹಳ ನಾರ್ಮಲ್ ಆಗಿ ಎಲ್ಲ ವಿಚಾರಣೆಗೂ ಸಹಕರಿಸುತ್ತಿದ್ದ ಅನಿಂದಿತಾ ಈ ಕೊಲೆ ಮಾಡಿದ್ದಾಳೆ ಎಂದು ಆಕೆಯ ಕುಟುಂಬಸ್ಥರಿಗೆ ನಂಬಲು ಸಾಧ್ಯವಾಗಿರಲಿಲ್ಲ. ಆದರೆ, ಆಕೆಯ ಮೊಬೈಲ್​ನಲ್ಲಿ ಸಿಕ್ಕ ಸಾಕ್ಷಿಗಳೆಲ್ಲವೂ ಆಕೆಯನ್ನೇ ಬೆರಳು ಮಾಡಿ ತೋರಿಸುತ್ತಿದ್ದವು.
ಮೊಬೈಲ್ ಚಾರ್ಜರ್​ ವೈರ್​ನಿಂದ ಗಂಡನ ಕುತ್ತಿಗೆಗೆ ಸುತ್ತಿ ಅನಿಂದಿತಾ ಆತನನ್ನು ಕೊಲೆ ಮಾಡಿದ್ದಳು. ಈ ಪ್ರಕರಣದಲ್ಲಿ ಅನಿಂದಿತಾಗೆ ಪಶ್ಚಿಮ ಬಂಗಾಳದ ಬರಸತ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ ಮತ್ತು 10,000 ರೂಪಾಯಿ ದಂಡ ವಿಧಿಸಿದೆ. ಗಂಡ-ಹೆಂಡತಿಯ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಅನಿಂದಿತಾ 2018ರ ನವೆಂಬರ್ 24ರ ಮಧ್ಯರಾತ್ರಿ ಗಂಡನಿಗೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂಬುದು ಈಗ ಬಯಲಾಗಿದೆ. ಈ ಘಟನೆ ನಡೆದು 22 ತಿಂಗಳ ಬಳಿಕ ಈಗ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
Published by: Sushma Chakre
First published: September 18, 2020, 11:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading