ಅತ್ಯಾಚಾರ ಆರೋಪ: ಬ್ರಿಟನ್ ದೇಶದ ಆಡಳಿತ ಪಕ್ಷದ ಸಂಸದನ ಬಂಧನ

ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸಂಸದ ಹಾಗೂ ಮಾಜಿ ಸಚಿವರೊಬ್ಬರು ತಮ್ಮ ಸಹಾಯಕಿಯ ಮೇಲೆ 4 ಬಾರಿ ಅತ್ಯಾಚಾರ, ಲೈಂಗಿಕ ಹಲ್ಲೆ ಎಸಗಿರುವ ಆರೋಪ ಎದುರಾಗಿದೆ. ಆರೋಪಿ ಸದ್ಯ ಎರಡು ವಾರ ಕಾಲ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

news18
Updated:August 2, 2020, 9:01 AM IST
ಅತ್ಯಾಚಾರ ಆರೋಪ: ಬ್ರಿಟನ್ ದೇಶದ ಆಡಳಿತ ಪಕ್ಷದ ಸಂಸದನ ಬಂಧನ
ಸಾಂದರ್ಭಿಕ ಚಿತ್ರ
  • News18
  • Last Updated: August 2, 2020, 9:01 AM IST
  • Share this:
ಲಂಡನ್: ಬ್ರಿಟನ್ ದೇಶದ ಆಡಳಿತಾರೂಢ ಕನ್ಸರ್​ವೇಟಿವ್ ಪಕ್ಷದ ಸಂಸದರೊಬ್ಬರನ್ನು ಅತ್ಯಾಚಾರ ಆರೋಪದ ಮೇಲೆ ಬಂಧನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಸಂಸದರು ತನ್ನ ಮೇಲೆ ಅತ್ಯಾಚಾರ, ಲೈಂಗಿಕ ಹಲ್ಲೆ, ಬೆದರಿಕೆ ಮಾಡಿದರು ಎಂದು ಆತನ ಸಂಸದೀಯ ಸಹಾಯಕಿ ಆರೋಪ ಮಾಡಿದ್ದರು. ಈ ಆಧಾರದ ಮೇಲೆ ಸಂಸದನ ಬಂಧನವಾಗಿದೆ. ಸದ್ಯ ಅವರು ಜಾಮೀನು ಪಡೆದು ಹೊರಬಂದಿದ್ದಾರೆ ಎಂದು ಮೆಟ್ರೋಪೊಲಿಟನ್ ಪೊಲೀಸ್ ಹೇಳಿಕೆ ನೀಡಿದೆ.

ಆದರೆ, ಮಾಜಿ ಸಚಿವರೂ ಆಗಿರುವ ಈ ಸಂಸದನ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಪೊಲೀಸ್ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಲೈಂಗಿಕ ಹಲ್ಲೆಯ ನಾಲ್ಕು ಘಟನೆಗಳು ನಡೆದಿವೆ ಎಂದು ಆಗಸ್ಟ್ 31ರಂದು ದೂರು ದಾಖಲಾದವು. ಅತ್ಯಾಚಾರ ಕೃತ್ಯ ಎಸಗಿರುವ ಶಂಕೆಯ ಮೇಲೆ 50ರ ವಯಸ್ಸಿನ ವ್ಯಕ್ತಿಯನ್ನು ಆ. 1ರಂದು ಬಂಧಿಸಲಾಗಿದೆ. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆಗಸ್ಟ್ ತಿಂಗಳ ಮಧ್ಯಭಾಗದವರೆಗೆ ಮಾತ್ರ ಈ ಜಾಮೀನು ಇದೆ.

ಇದನ್ನೂ ಓದಿ: ಪಂಜಾಬ್‌ ನಕಲಿ ಮದ್ಯ ದುರಂತ; 62ಕ್ಕೆ ಏರಿದ ಸಾವಿನ ಸಂಖ್ಯೆ, ಪೊಲೀಸ್‌ ದಾಳಿ ವಿಷ ಜಾಲದ 25 ಜನರ ಬಂಧನಬ್ರಿಟನ್ ದೇಶದ ಮಾಧ್ಯಮಗಳಲ್ಲಿ ನಿನ್ನೆ ಈ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಆಡಳಿತಾರೂಢ ಸರ್ಕಾರಕ್ಕೆ ಮುಜುಗರದ ಪರಿಸ್ಥಿತಿ ಎದುರಾಯಿತು. ಈ ಬಗ್ಗೆ ಹೇಳಿಕೆ ನೀಡಿರುವ ಕನ್ಸರ್​ವೇಟಿವ್ ಪಕ್ಷದ ವಕ್ತಾರರು, ಈ ಆರೋಪಗಳು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಸದ್ಯ ಈ ಪ್ರಕರಣವನ್ನು ಪೊಲೀಸರು ನಿಭಾಯಿಸುತ್ತಿರುವುದರಿಂದ ಏನನ್ನೂ ಪ್ರತಿಕ್ರಿಯಿಸುವುದು ಸಮಂಜಸವಲ್ಲ ಎಂದು ತಿಳಿಸಿದ್ಧಾರೆ.
Published by: Vijayasarthy SN
First published: August 2, 2020, 8:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading