HOME » NEWS » National-international » TWO OLDIES FIGHTING LIKE CHILDREN WHILE PLAYING CAROM BOARD RHHSN

Viral Video: ವೃದ್ಧರ ಮುಗ್ಧ ಹೊಡೆದಾಟ; ಕೇರಂ ಆಡುವಾಗ ಚಿಕ್ಕಮಕ್ಕಳಂತೆ ಜಗಳ ಮಾಡಿಕೊಂಡ ಮುದುಕರು!

ಒದೆ ನೀಡಿದ ವೃದ್ಧ ಪೆಚ್ಚು ಮೊರೆ ಹಾಕಿಕೊಂಡು ವಾಚನ್ನು ಮರುಜೋಡಿಸುವಾಗಲೂ ಒದೆ ತಿಂದ ಮುದುಕನ ನಗು ಮುಂದುವರೆಯುತ್ತದೆ. ಇವರಿಬ್ಬರ ಆಟ ಬಾಲ್ಯದಲ್ಲಿ ಚಿಕ್ಕಮಕ್ಕಳ ಮಾಡುವಂತೆ ಇರುವುದಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ಜೊತೆಗೆ ವೈರಲ್ ಕೂಡ ಆಗುತ್ತಿದೆ.

news18-kannada
Updated:June 1, 2021, 9:53 PM IST
Viral Video: ವೃದ್ಧರ ಮುಗ್ಧ ಹೊಡೆದಾಟ; ಕೇರಂ ಆಡುವಾಗ ಚಿಕ್ಕಮಕ್ಕಳಂತೆ ಜಗಳ ಮಾಡಿಕೊಂಡ ಮುದುಕರು!
ವೃದ್ಧರು ಕೇರಂ ಆಡುತ್ತಿರುವುದು.
  • Share this:
ವಯಸ್ಸಾದವರು ಹೆಚ್ಚಾಗಿ ಮಕ್ಕಳಂತೆ ಆಗುತ್ತಾರೆ ಮತ್ತು ಅವರಂತೆ ವರ್ತಿಸುತ್ತಾರೆ ಎಂಬುದನ್ನು ನಾವು ಕೇಳಿದ್ದೇನೆ, ನೋಡಿದ್ದೇನೆ. 60 ವರ್ಷಕ್ಕೆ ಅರುಳು ಮರಳು ಎಂಬಂತೆ ಅವರ ವರ್ತನೆ ಇರುತ್ತದೆ. ಅದು ಒಂದು ರೀತಿ ಮಕ್ಕಳಂತೆ, ಕೆಲವೊಮ್ಮೆ ಮುಗ್ಧವಾಗಿರುತ್ತದೆ, ಇನ್ನು ಕೆಲವೊಮ್ಮೆ ಸಿಟ್ಟುಬರಿಸುವಂತೆಯೂ ಇರುತ್ತದೆ. ಅದರಂತೆ ಇಲ್ಲೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇಬ್ಬರು ವೃದ್ಧರು ತಮ್ಮ ವಯಸ್ಸಿನ್ನು ಮರೆತು ಥೇಟ್ ಚಿಕ್ಕಮಕ್ಕಳಂತೆ ಆಡಿರುವುದು ಎಲ್ಲರ ಸಖತ್ ಥ್ರೀಲ್ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಅಂತಹ ಒಂದು ವೀಡಿಯೊದಲ್ಲಿ, ಇಬ್ಬರು ವೃದ್ಧರು ಕ್ಯಾರಮ್ ಬೋರ್ಡ್ ಆಡುತ್ತಿದ್ದಾರೆ. ಮತ್ತು ಹಠಾತ್ತನೆ ಜಗಳವಾಡುತ್ತಾರೆ. ಮತ್ತು ಮಕ್ಕಳು ಮಾಡುವಂತೆ ಪರಸ್ಪರ ಹೊಡೆದಾಡುತ್ತಾರೆ. ಈ ವಿಡಿಯೋವನ್ನು  ಶೋಭಾನ ಗುರ್ಜರ್ ಎಂಬ ಟ್ವಿಟರ್ ಬಳಕೆದಾರರು ಟ್ವಿಟ್ಟರ್​ನಲ್ಲಿ "ಕೆಹ್ಟೆ ಹೈ ಬಚ್ಪನ್ ಪರ್ ಪಚ್ಪಾನ್ ಇಕ್ ಸೀ ಹೋಟೆ ಹೈನ್ (ಬಾಲ್ಯವು 55 ನೇ ವಯಸ್ಸಿಗೆ ಹೋಲುತ್ತದೆ ಎಂದು ಹೇಳಲಾಗುತ್ತದೆ)" ಎಂಬ ಶೀರ್ಷಿಕೆಯೊಂದಿಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ನಂತರ ಇಬ್ಬರು ವೃದ್ಧರ ಈ ವಿಡಿಯೋ ವೈರಲ್ ಆಗಿದೆ.

ಇದನ್ನು ಓದಿ: ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ ಮಾಡಿಕೊಂಡು 20 ವರ್ಷಗಳಿಂದ ಕಷ್ಟದ ಜೀವನ ಸಾಗಿಸುತ್ತಿರುವ ವೃದ್ದೆಯ ಮನಕಲಕುವ ಕಥೆ!ಇಬ್ಬರು ವೃದ್ಧರು ಕೇರಮ್ ಬೋರ್ಡ್ ಆಟ ಆಡುತ್ತಿದ್ದಾರೆ. ಅದರಲ್ಲಿ ಓರ್ವ ವೃದ್ಧ ಏನೋ ಖ್ಯಾತೆ ತೆಗೆದು ಕೇರಂ ಪಾನ್​ಗಳನ್ನು ಕೈಯಿಂದ ಚೆಲ್ಲಾಪಿಲ್ಲಿಯಾಗುವಂತೆ ದೂಡುತ್ತಾರೆ. ಇದರಿಂದ ಕುಪಿತಗೊಳ್ಳುವ ಮತ್ತೋರ್ವ ವೃದ್ಧ ಎದ್ದು ಮತ್ತೊಬ್ಬರ ಬೆನ್ನಿಗೆ ಗುದ್ದು ನೀಡುತ್ತಾರೆ. ಏಟು ಹೊಡೆಯುವಾಗ ಅವರ ಕೈಗೆ ಕಟ್ಟಿದ್ದ ವಾಚು ಕಳಚಿ ಕೆಳಗೆ ಬಿದ್ದು ಒಡೆದು ಹೋಗುತ್ತದೆ. ಇದನ್ನು ನೋಡಿದ ಒದೆ ತಿಂದ ವೃದ್ಧ ಗೋಳ್ ಎಂದು ನಗುತ್ತಾರೆ. ಒದೆ ನೀಡಿದ ವೃದ್ಧ ಪೆಚ್ಚು ಮೊರೆ ಹಾಕಿಕೊಂಡು ವಾಚನ್ನು ಮರುಜೋಡಿಸುವಾಗಲೂ ಒದೆ ತಿಂದ ಮುದುಕನ ನಗು ಮುಂದುವರೆಯುತ್ತದೆ. ಇವರಿಬ್ಬರ ಆಟ ಬಾಲ್ಯದಲ್ಲಿ ಚಿಕ್ಕಮಕ್ಕಳ ಮಾಡುವಂತೆ ಇರುವುದಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ಜೊತೆಗೆ ವೈರಲ್ ಕೂಡ ಆಗುತ್ತಿದೆ.
Published by: HR Ramesh
First published: June 1, 2021, 9:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories