ತಮಿಳುನಾಡು ಗಲಭೆಯಲ್ಲಿ ಬೋಟ್​, ಮನೆಗಳು ಬೆಂಕಿಗಾಹುತಿ; ಓರ್ವ ಸಾವು, 50 ಜನರ ಬಂಧನ

ತಮಿಳುನಾಡಿನಲ್ಲಿ ಎರಡು ರಾಜಕೀಯ ಗುಂಪುಗಳ ನಡುವಿನ ಗಲಭೆಯಲ್ಲಿ 25 ಬೋಟ್​ಗಳು, 50 ಮೀನುಗಾರಿಕೆಯ ನೆಟ್​ಗಳು, 25 ಬೈಕ್​ಗಳು, ನಾಲ್ಕು ಕಾರುಗಳು ಬೆಂಕಿಗೆ ಆಹುತಿಯಾಗಿವೆ. 10ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ತಗುಲಿ, ಕೆಲ ಭಾಗ ಸುಟ್ಟುಹೋಗಿದೆ.

Sushma Chakre | news18-kannada
Updated:August 2, 2020, 3:41 PM IST
ತಮಿಳುನಾಡು ಗಲಭೆಯಲ್ಲಿ ಬೋಟ್​, ಮನೆಗಳು ಬೆಂಕಿಗಾಹುತಿ; ಓರ್ವ ಸಾವು, 50 ಜನರ ಬಂಧನ
ತಮಿಳುನಾಡಿನಲ್ಲಿ ಹೊತ್ತಿ ಉರಿದ ಬೋಟ್​ಗಳು
  • Share this:
ಚೆನ್ನೈ (ಆ. 2): ತಮಿಳುನಾಡಿನ ಕುಡಲೋರ್ ಜಿಲ್ಲೆಯಲ್ಲಿ ಎರಡು ರಾಜಕೀಯ ಬಣಗಳ ನಡುವೆ ನಡೆದ ಸಂಘರ್ಷ ಹಿಂಸಾಚಾರಕ್ಕೆ ತಿರುಗಿದೆ. ಈ ಘಟನೆಯಲ್ಲಿ ಸಾಕಷ್ಟು ಮಂದಿ ಗಾಯಗೊಂಡಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ.

ದುಷ್ಕರ್ಮಿಗಳು ಗಲಾಟೆ ವೇಳೆ ಬೋಟ್​ಗಳಿಗೂ ಬೆಂಕಿ ಹಚ್ಚಿದ್ದರಿಂದ ವಾಹನಗಳು ಹಾಗೂ ಬೋಟ್​ಗಳು ಸುಟ್ಟು ಭಸ್ಮವಾಗಿವೆ. ಇದರ ಜೊತೆಗೆ ಕೆಲವು ಮನೆಗಳಿಗೂ ಬೆಂಕಿ ತಗುಲಿದೆ. ಕುಡಲೋರ್​ ಜಿಲ್ಲೆಯ ಸ್ಥಳೀಯ ರಾಜಕೀಯ ವಿರೋಧಿಗಳ ನಡುವೆ ನಡೆದ ಜಗಳಕ್ಕೆ ಊರಿಗೆ ಊರೇ ಹೊತ್ತಿ ಉರಿದಿದೆ. ಸ್ಥಳೀಯ ರಾಜಕೀಯ ನಾಯಕನ ತಮ್ಮ ಈ ಘಟನೆಯನ್ನು ಹತ್ಯೆಯಾಗಿದ್ದಾನೆ.

ಇದನ್ನೂ ಓದಿ: ವಿಶಾಖಪಟ್ಟಣದ ಹಡಗುದಾಣದಲ್ಲಿ ಕುಸಿದುಬಿದ್ದ ಕ್ರೇನ್; 11 ಮಂದಿ ಸಾವು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 50 ಮಂದಿಯನ್ನು ಬಂಧಿಸಿದ್ದಾರೆ. ಘರ್ಷಣೆ ವೇಳೆ ಲಾರಿಯಲ್ಲಿ ಬಂದ ದುಷ್ಕರ್ಮಿಗಳು ಬೋಟ್​ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇದರಿಂದ ಬೋಟ್ ಮಾತ್ರವಲ್ಲದೆ ಸಮೀಪದಲ್ಲಿದ್ದ ಬೈಕ್​ಗಳು ಕೂಡ ಹಾನಿಗೀಡಾಗಿವೆ. ಸದ್ಯದ ಮಾಹಿತಿ ಪ್ರಕಾರ 25 ಬೋಟ್​ಗಳು, 50 ಮೀನುಗಾರಿಕೆಯ ನೆಟ್​ಗಳು, 25 ಬೈಕ್​ಗಳು, ನಾಲ್ಕು ಕಾರುಗಳು ಬೆಂಕಿಗೆ ಆಹುತಿಯಾಗಿವೆ. 10ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ತಗುಲಿ, ಕೆಲ ಭಾಗ ಸುಟ್ಟುಹೋಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕದಳದ ವಾಹನಗಳು ಬೆಂಕಿಯನ್ನು ಆರಿಸಿವೆ. ಕೊಲೆ ಮತ್ತು ಗಲಭೆ ಆರೋಪದ ಮೇಲೆ 50 ಜನರನ್ನು ಬಂಧಿಸಲಾಗಿದೆ.
Published by: Sushma Chakre
First published: August 2, 2020, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading