HOME » NEWS » National-international » STAY AWAY FROM PROBE BJP PRESIDENT JP NADDA PULLS UP MLA WHO DEFENDED AIDE OVER BALLIA FIRING INCIDENT MAK

ಬಲ್ಲಿಯ ಶೂಟೌಟ್​ ಪ್ರಕರಣ; ತನಿಖೆಯಿಂದ ದೂರವಿರುವಂತೆ ಬಿಜೆಪಿ ಶಾಸಕನಿಗೆ ಜೆಪಿ ನಡ್ಡಾ ಸೂಚನೆ

ಬಲ್ಲಿಯಾ ಜಿಲ್ಲೆಯ ಪಡಿತರ ಅಂಗಡಿಗಳ ಆಯ್ಕೆಗಾಗಿ ನಡೆದ ಸಭೆಯಲ್ಲಿ ನಡೆದ ವಿವಾದದ ಸಂದರ್ಭದಲ್ಲಿ ಧೀರೇಂದ್ರ ಸಿಂಗ್ ಸ್ಥಳೀಯ ಆಡಳಿತ ಅಧಿಕಾರಿಗಳ ಎದುರೇ ಜನಸಮೂಹದೆಡೆಗೆ ಗುಂಡು ಹಾರಿಸಿದ್ದ. ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.

news18-kannada
Updated:October 19, 2020, 12:55 PM IST
ಬಲ್ಲಿಯ ಶೂಟೌಟ್​ ಪ್ರಕರಣ; ತನಿಖೆಯಿಂದ ದೂರವಿರುವಂತೆ ಬಿಜೆಪಿ ಶಾಸಕನಿಗೆ ಜೆಪಿ ನಡ್ಡಾ ಸೂಚನೆ
ಜೆಪಿ ನಡ್ಡಾ.
  • Share this:
ನವ ದೆಹಲಿ (ಅಕ್ಟೋಬರ್​ 19); ಕಳೆದ ವಾರ ಉತ್ತರಪ್ರದೇಶದ ಬಲ್ಲಿಯಾ ಎಂಬಲ್ಲಿ ಸ್ಥಳೀಯ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರ ಆಪ್ತನಾದ ಧೀರೇಂದ್ರ ಸಿಂಗ್ ಎಂಬಾತ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದಿದ್ದ. ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆದರೆ, ಇದೇ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸುರೇಂದ್ರ ಸಿಂಗ್ ಆರೋಪಿಯ ಪರವಾಗಿ ಹೇಳಿಕೆ ನೀಡುವ ಮೂಲಕ ಇದೀಗ ಬಿಜೆಪಿ ಹೈಕಮಾಂಡ್​ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಇದೀಗ ಅವರಿಂದ ಲಿಖಿಯ ವಿವರಣೆ ಕೇಳಿದ್ದಾರೆ. ಅಲ್ಲದೆ, ಸ್ವತಃ ಸುರೇಂದ್ರ ಸಿಂಗ್ ಅವರ ವರ್ತನೆಗೆ ಜೆಪಿ ನಡ್ಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಈ ಸಂಬಂಧ ಬಿಜೆಪಿ ಶಾಸನಕನಿಗೆ ಸೂಚನೆ ನೀಡಿರುವ ಜೆಪಿ ನಡ್ಡಾ, "ಈ ಪ್ರಕರಣದ ತನಿಖೆಯಿಂದ ಅಂತ ಕಾಯ್ದುಕೊಳ್ಳಿ. ಅನಗತ್ಯವಾಗಿ ಹಸ್ತಕ್ಷೇಪ ಮಾಡಬೇಡಿ" ಎಂದು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಗುರುವಾರ ವ್ಯಕ್ತಿಯನ್ನು ಹತ್ಯೆ ಮಾಡಿದ ನಂತರ ಪರಾರಿಯಾಗಿದ್ದ ಧೀರೇಂದ್ರ ಸಿಂಗ್ ಅವರನ್ನು ಭಾನುವಾರ ಬಂಧಿಸಲಾಗಿದೆ.

ಬಲ್ಲಿಯಾ ಜಿಲ್ಲೆಯ ಪಡಿತರ ಅಂಗಡಿಗಳ ಆಯ್ಕೆಗಾಗಿ ನಡೆದ ಸಭೆಯಲ್ಲಿ ನಡೆದ ವಿವಾದದ ಸಂದರ್ಭದಲ್ಲಿ ಧೀರೇಂದ್ರ ಸಿಂಗ್ ಸ್ಥಳೀಯ ಆಡಳಿತ ಅಧಿಕಾರಿಗಳ ಎದುರೇ ಜನಸಮೂಹದೆಡೆಗೆ ಗುಂಡು ಹಾರಿಸಿದ್ದ. ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಶಾಸಕ ಸುರೇಂದ್ರ ಸಿಂಗ್, "ಏಕಪಕ್ಷೀಯ ಕ್ರಮ ತೆಗೆದುಕೊಳ್ಳದಂತೆ ನಾನು ಬಲಿಯಾ ಜಿಲ್ಲಾಡಳಿತಕ್ಕೆ ಮನವಿ ಮಾಡಲು ಬಯಸುತ್ತೇನೆ. ಧೀರೇಂದ್ರ ಸಿಂಗ್ ಗುಂಡು ಹಾರಿಸದಿದ್ದರೆ, ಅವರ ಕುಟುಂಬ ಸದಸ್ಯರು ಕೊಲ್ಲಲ್​ಪಡುತ್ತಿದ್ದರು. ಧೀರೇಂದ್ರ ಸಿಂಗ್ ತಮ್ಮ ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಏಕೆಂದರೆ ಅವರಿಗೆ ಬೇರೆ ಆಯ್ಕೆಗಳಿರಲಿಲ್ಲ. ಏನಾಗಿದೆಯೋ ಅದನ್ನು ಖಂಡಿಸಬೇಕು ಆದರೆ ಏಕಪಕ್ಷೀಯ ಕ್ರಮ ಮಾಡಬಾರದು. ಗುಂಡು ಹಾರಿಸಿದ ಜನರಿಗೆ ಶಿಕ್ಷೆಯಾಗಬೇಕು ಆದರೆ ಅದೇ ಸಮಯದಲ್ಲಿ ಇವರ ಮೇಲೆ ದಾಳಿ ಮಾಡಲು ಮುಂದಾದವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು " ಎಂದಿದ್ದರು.

ಮತ್ತೊಂದು ಬೆಳವಣಿಗೆಯಲ್ಲಿ, ಪ್ರಮುಖ ಆರೋಪಿ ಧೀರೇಂದ್ರ ಸಿಂಗ್ ಅವರನ್ನು ಸೋಮವಾರ ಸಿಜೆಎಂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು ಮತ್ತು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಸರ್ಕಾರಿ ಕೋಟಾ ಅಂಗಡಿಯೊಂದನ್ನು ಹಂಚಿಕೆ ಮಾಡಲು ಒತ್ತಾಯಿಸಿದ ಸಾರ್ವಜನಿಕ ಸಭೆಯಲ್ಲಿ ಇತ್ತೀಚೆಗೆ ಬಲಿಯಾದಲ್ಲಿ ಗುಂಡು ಹಾರಿಸಿದ ಯುವಕನ ಹತ್ಯೆಯಲ್ಲಿ ಸಿಂಗ್ ಪ್ರಮುಖ ಆರೋಪಿ. ಈ ಪ್ರಕರಣದಲ್ಲಿ ಈವರೆಗೆ 10 ಜನರನ್ನು ಬಂಧಿಸಲಾಗಿದೆ.

ಇದನ್ನೂ ಓದಿ : ಬಲ್ಲಿಯಾ ಶೂಟೌಟ್ ಪ್ರಕರಣ; ಪ್ರಮುಖ ಆರೋಪಿ ಧೀರೇಂದ್ರ ಸಿಂಗ್ ಬಂಧನ

ಬಲಿಯಾ ಶೂಟೌಟ್ ಘಟನೆಯ ಹಿಂದಿನ ಪ್ರಮುಖ ಆರೋಪಿ ಧೀರ್ಂದ್ರ ಸಿಂಗ್ ಅವರನ್ನು ಎಸ್‌ಟಿಎಫ್ ಭಾನುವಾರ ಲಖನೌದ ಜಾನೇಶ್ವರ ಮಿಶರ್ ಪಾರ್ಕ್ ಬಳಿ ಬಂಧಿಸಿದೆ. ಸಿಂಗ್ ಜೊತೆಗೆ ಸಂತೋಷ್ ಯಾದವ್ ಮತ್ತು ಅಮರ್ಜೀತ್ ಯಾದವ್ ಎಂಬ ಇಬ್ಬರು ಆರೋಪಿಗಳನ್ನು ಸಹ ಬಂಧಿಸಲಾಗಿದೆ. ಆದರೆ, ಪೊಲೀಸರು ಮುಖ್ಯ ಆರೋಪಿಗಳ ಪರವಾಗಿದ್ದಾರೆ ಎಂದು ಎಂದು ಮೃತ ಸಹೋದರ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಮೃತನ ಸಹೋದರ ತೇಜ್ ಪ್ರತಾಪ್, "ಘಟನೆ ನಡೆದ ಸ್ಥಳದಲ್ಲಿಯೇ 10 ಪೊಲೀಸರು ಇದ್ದರು, ಅವರು ಅಪರಾಧಿಗಳನ್ನು ಉಳಿಸಿ ನಮ್ಮನ್ನು ಥಳಿಸುತ್ತಿದ್ದರು. ಗುಂಡಿನ ದಾಳಿಯ ನಂತರ ಧೀರೇಂದ್ರ ಪ್ರತಾಪ್ ಸಿಂಗ್ ಪರಾರಿಯಾಗುತ್ತಿದ್ದಾಗ ಪೊಲೀಸರು ಆತನನ್ನು ಹಿಡಿದಿದ್ದರು. ಆದರೆ ನಂತರ ಬಿಟ್ಟು ಕಳಿಸಿ ಇದೀಗ ಮತ್ತೆ ಬಂಧಿಸಿದಂತೆ ನಾಟಕವಾಡುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.
Published by: MAshok Kumar
First published: October 19, 2020, 12:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading