ನಾಯಿಯ ಮೇಲೆ ಅತ್ಯಾಚಾರ ನಡೆಸಿ, ಗುಪ್ತಾಂಗಕ್ಕೆ ಕೋಲು ತುರುಕಿದ ಕಾಮುಕ!

Shocking News: ಮುಂಬೈನ ಗಲ್ಲೇರಿಯ ಶಾಪಿಂಗ್ ಕಾಂಪ್ಲೆಕ್ಸ್​ನಲ್ಲಿ ಹೆಣ್ಣು ನಾಯಿಯ ಮೇಲೆ ಯಾರೋ ಕಾಮುಕ ಅತ್ಯಾಚಾರ ನಡೆಸಿ, ನಾಯಿಯ ಗುಪ್ತಾಂಗಕ್ಕೆ 11 ಇಂಚಿನ ಕೋಲು ತುರುಕಿದ್ದಾನೆ.

Sushma Chakre | news18-kannada
Updated:October 26, 2020, 3:27 PM IST
ನಾಯಿಯ ಮೇಲೆ ಅತ್ಯಾಚಾರ ನಡೆಸಿ, ಗುಪ್ತಾಂಗಕ್ಕೆ ಕೋಲು ತುರುಕಿದ ಕಾಮುಕ!
ಕಾಮುಕನಿಂದ ಅತ್ಯಾಚಾರಕ್ಕೊಳಗಾದ ನಾಯಿ
  • Share this:
ಮುಂಬೈ (ಅ. 26): ಭಾರತದಲ್ಲಿ ಪ್ರತಿದಿನ ಒಂದಿಲ್ಲೊಂದು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಚಿಕ್ಕ ಮಗುವಿನಿಂದ ಹಿಡಿದು, ವೃದ್ಧೆಯರನ್ನೂ ತಮ್ಮ ಕಾಮತೃಷೆಗೆ ಬಳಸಿಕೊಳ್ಳುವುದು ನಡೆಯುತ್ತಲೇ ಇದೆ. ಆದರೆ, ಮುಂಬೈನಲ್ಲಿ ಹೀನಕೃತ್ಯವೊಂದು ನಡೆದಿದೆ. ಮಹಾರಾಷ್ಟ್ರದ ಮುಂಬೈನ ಗಲ್ಲೇರಿಯ ಶಾಪಿಂಗ್ ಕಾಂಪ್ಲೆಕ್ಸ್​ನಲ್ಲಿ ಹೆಣ್ಣು ನಾಯಿಯ ಮೇಲೆ  ಯಾರೋ ಕಾಮುಕ ಅತ್ಯಾಚಾರ ನಡೆಸಿದ್ದಾನೆ. ನಾಯಿಯ ಮೇಲೆ ಅತ್ಯಾಚಾರ ನಡೆಸಿದ್ದಷ್ಟೇ ಅಲ್ಲದೆ,  ನಾಯಿಯ ಗುಪ್ತಾಂಗಕ್ಕೆ 11 ಇಂಚಿನ ಕೋಲನ್ನು ತುರುಕಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ನಾಯಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಆ ನಾಯಿಯನ್ನು ಶ್ವಾನಪ್ರೇಮಿಯೊಬ್ಬರು ಅನಿಮಲ್ ಕೇರ್ ಸೆಂಟರ್​ಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ನೀಡಿದ್ದಾರೆ. ಆದರೂ ನಾಯಿಯ ಆರೋಗ್ಯ ಗಂಭೀರವಾಗಿದೆ.

ಈ ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಪ್ರಾಣಿಪ್ರಿಯರು ಪ್ರತಿದಿನ ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೆ. ಸ್ಥಳೀಯರಾದ ನೂರಿ ಎಂಬ ಮಹಿಳೆ ಅಕ್ಟೋಬರ್ 22ರಂದು ಶಾಪಿಂಗ್ ಕಾಂಪ್ಲೆಕ್ಸ್​ನ ಪಾರ್ಕಿಂಗ್​ನಲ್ಲಿ ಇರುವ ಹೆಣ್ಣು ನಾಯಿಗೆ ಊಟ ಕೊಡಲು ಬಂದಾಗ ಆ ನಾಯಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಮೈತುಂಬ ಗಾಯಗೊಂಡಿದ್ದ ಆ ನಾಯಿಯನ್ನು ಅನಿಮಲ್ ಕೇರ್ ಸೆಂಟರ್​ ಆಫ್​ ವರ್ಲ್ಡ್​ ಫಾರ್ ಆಲ್​ಗೆ ಕರೆದುಕೊಂಡು ಬಂದರು ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: ಭಾರತದ ಎಲ್ಲರಿಗೂ ಉಚಿತ ಕೊರೋನಾ ಲಸಿಕೆ; ಕೇಂದ್ರ ಸಚಿವ ಪ್ರತಾಪ್ ಸಾರಂಗಿ ಭರವಸೆ

ಮೊದಲು ಯಾವುದೋ ಇನ್ನೊಂದು ನಾಯಿ ಕಚ್ಚಿರಬಹುದು ಎಂದುಕೊಂಡಿದ್ದೆವು. ಆದರೆ, ಅದರ ಗುಪ್ತಾಂಗದಿಂದ ರಕ್ತಸ್ರಾವವಾಗುತ್ತಿತ್ತು. ವೈದ್ಯರು ಪರಿಶೀಲಿಸಿದಾಗ ನಾಯಿಯ ಗುಪ್ತಾಂಗದಲ್ಲಿ ಕೋಲು ತುರುಕಿರುವುದು ಗೊತ್ತಾಯಿತು. ಬಳಿಕ, 11 ಇಂಚಿನ ಕೋಲನ್ನು ನಾಯಿಯ ಗುಪ್ತಾಂಗದಿಂದ ಹೊರ ತೆಗೆಯಲಾಯಿತು. ಗಲ್ಲೇರಿಯ ಶಾಪಿಂಗ್ ಕಾಂಪ್ಲೆಕ್ಸ್​ನಲ್ಲಿ ಕೆಲಸ ಮಾಡುತ್ತಿರುವ ಅಥವಾ ಅಲ್ಲೇ ಸುತ್ತಮುತ್ತ ವಾಸಿಸುತ್ತಿರುವ ಯಾರೋ ಸೈಕೋ ನಾಯಿಯ ಮೇಲೆ ಅತ್ಯಾಚಾರ ಮಾಡಿರುವ ಸಾಧ್ಯತೆಯಿದೆ. ಈ ಬಗ್ಗೆ ದೂರು ದಾಖಲಿಸಲಾಗಿದೆ ಎಂದು ಬಾಂಬೆ ಅನಿಮಲ್ ರೈಟ್ಸ್​ ತಂಡದ ಹೋರಾಟಗಾರ ವಿಜಯ್ ಕಿಶೋರ್ ಹೇಳಿದ್ದಾರೆ.

ಗಲ್ಲೇರಿಯ ಶಾಪಿಂಗ್ ಕಾಂಪ್ಲೆಕ್ಸ್​ನ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿ, ಅಪರಾಧಿಯನ್ನು ಪತ್ತೆಹಚ್ಚುವ ಪ್ರಯತ್ನ ನಡೆದಿದೆ. ಮುಂಬೈನ ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಅಪರಿಚಿತ ವ್ಯಕ್ತಿಯ ಮೇಲೆ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಕೇಸ್ ದಾಖಲಿಸಿದ್ದಾರೆ.
Published by: Sushma Chakre
First published: October 26, 2020, 3:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading