Venus Planet - ಶುಕ್ರ ಗ್ರಹ ನನ್ನ ಆಸ್ತಿ ಎನ್ನುತ್ತಿದೆ ರಷ್ಯಾ

ನರಕಸದೃಷ ವಾತಾವರಣ ಇರುವ ಶುಕ್ರ ಗ್ರಹದ ಮೇಲೆ ನೌಕೆಯನ್ನು ಇಳಿಸಿದ ಜಗತ್ತಿನ ಏಕೈಕ ದೇಶವಾದ ರಷ್ಯಾ ಈಗ ಆ ಗ್ರಹದ ಮೇಲೆ ಹಕ್ಕು ಸ್ಥಾಪನೆ ಮಾಡಲು ಹೊರಟಿದಂತಿದೆ.

news18
Updated:September 19, 2020, 3:55 PM IST
Venus Planet - ಶುಕ್ರ ಗ್ರಹ ನನ್ನ ಆಸ್ತಿ ಎನ್ನುತ್ತಿದೆ ರಷ್ಯಾ
ಸಾಂದರ್ಭಿಕ ಚಿತ್ರ
  • News18
  • Last Updated: September 19, 2020, 3:55 PM IST
  • Share this:
ನವದೆಹಲಿ: ಭೂಮಿಯ ಅವಳಿ ಎಂದೇ ಕರೆಯಲಾಗುವ ವೀನಸ್ ಅಥವಾ ಶುಕ್ರ ಗ್ರಹ ಇತ್ತೀಚೆಗೆ ಸುದ್ದಿಯಲ್ಲಿದೆ. ಈ ಗ್ರಹದ ಮೇಲಿರುವ ಮೋಡಗಳಲ್ಲಿ ಜೀವದ ಸುಳಿವು ಸಿಕ್ಕಿದೆ ಎಂದು ಸಂಶೋಧಕರು ಮಾಹಿತಿ ಹೊರಗೆಡವಿದ ಬಳಿಕ ಇದರ ಮೇಲಿನ ಕುತೂಹಲ ಬಹುಪಟ್ಟು ಹೆಚ್ಚಾಗಿದೆ. ಇದರ ಬೆನ್ನಲ್ಲೇ ಈ ಗ್ರಹದ ಮೇಲೆ ಅರ್ಧಶತಮಾನದಷ್ಟು ಹಿಂದೆಯೇ ಕಾಲಿಟ್ಟಿದ್ದ ರಷ್ಯಾ ದೇಶ ಈಗ ಈ ಗ್ರಹದ ಮೇಲೆ ಹಕ್ಕು ಸ್ಥಾಪನೆ ಮಾಡಿದೆ. ರಷ್ಯಾದ ಮಾಸ್ಕೋ ನಗರದಲ್ಲಿ ನಡೆದ ಔದ್ಯಮಿಕ ಪ್ರದರ್ಶನ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ, ರಷ್ಯಾದ ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ ಡಿಮಿಟ್ರಿ ರೋಗೋಜಿನ್ ಅವರು ವೀನಸ್ ಅನ್ನು ರಷ್ಯನ್ ಗ್ರಹ ಎಂದೇ ಸಂಬೋಧಿಸಿದ್ದಾರೆ.

“ವೀನಸ್ ನೆಲದ ಮೇಲೆ ಯಶಸ್ವಿಯಾಗಿ ಅಡಿ ಇಟ್ಟ ಮೊದಲ ಹಾಗೂ ಏಕೈಕ ದೇಶ ನಮ್ಮದು… ರಷ್ಯಾದ ಗಗನನೌಕೆಯು ಆ ಗ್ರಹದ ಬಗ್ಗೆ ಮಾಹಿತಿ ಕಲೆಹಾಕಿತ್ತು. ಅಲ್ಲಿ ನರಕದಂಥ ವಾತಾವರಣ ಇದೆ” ಎಂದು ರಷ್ಯನ್ ಸ್ಪೇಸ್ ಏಜೆನ್ಸಿ ಮುಖ್ಯಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: Alien Life on Venus - ಶುಕ್ರ ಗ್ರಹದಲ್ಲಿ ಜೀವದ ಸುಳಿವು ಪತ್ತೆ; ವಿಜ್ಞಾನಿಗಳಲ್ಲಿ ಗರಿಗೆದರಿದ ಕುತೂಹಲ

ಮಂಗಳ ಗ್ರಹಕ್ಕೂ ಮುನ್ನವೇ ಮನುಷ್ಯ ಶುಕ್ರ ಗ್ರಹದಲ್ಲಿ ಅನ್ವೇಷಣೆ ಆರಂಭಿಸಿದ್ದ. 60ರಿಂದ 80ರ ದಶಕಗಳವರೆಗೆ ಭೂಮಿಯಿಂದ ಅನೇಕ ಬಾರಿ ನೌಕೆಗಳನ್ನ ವೀನಸ್​ಗೆ ಕಳುಹಿಸಲಾಗಿತ್ತು. ಅದರಲ್ಲಿ ಮೊದಲಿಗರು ಆಗಿನ ಸೋವಿಯತ್ ರಷ್ಯಾದವರು. ಅಮೆರಿಕದೊಂದಿಗಿನ ಶೀತಲ ಸಮರ ತಾರಕದಲ್ಲಿದ್ದ ವೇಳೆ ತಾಂತ್ರಿಕವಾಗಿ ಬಹಳ ಮುಂದಿದ್ದ ರಷ್ಯಾ ಹಲವು ಬಾರಿ ತನ್ನ ನೌಕೆಯನ್ನ ವೀನಸ್ ನೆಲಕ್ಕೆ ಇಳಿಸಿ ಸೈ ಎನಿಸಿಕೊಂಡಿತು. ಜಗತ್ತಿನ ಯಾವ ದೇಶ ಕೂಡ ನರಕಸದೃಷ ಶುಕ್ರ ಗ್ರಹದ ನೆಲದ ಮೇಲೆ ಕಾಲಿಟ್ಟಿಲ್ಲ.

ವಿಷಕಾರಿ ಅನಿಲ ಹಾಗೂ ಸುಟ್ಟುಕರಕಲಾಗುವಷ್ಟು ಸುಡು ಬಿಸಿಲು ಹೊಂದಿರುವ ವೀನಸ್​ನ ವಾತಾವರಣದಲ್ಲಿ ಜೀವ ಇರಲು ಸಾಧ್ಯವೇ ಇಲ್ಲ ಎಂದು ನಂಬಲಾಗಿದೆ. ಆದರೆ, ಮೊನ್ನೆಮೊನ್ನೆಯಷ್ಟೇ ಕೆಲ ಸಂಶೋಧಕರ ಕಣ್ಣಿಗೆ ಶುಕ್ರನ ಮೋಡಗಳಲ್ಲಿ ಫಾಸ್​ಫೈನ್ ಅನಿಲದ ಅಂಶಗಳು ಪತ್ತೆಯಾಗಿವೆ. ಇವು ಬ್ಯಾಕ್ಟೀರಿಯಾ ಮೂಲಕ ಜೈವಿಕವಾಗಿ ಉತ್ಪತ್ತಿಯಾಗಿರುವ ಅನಿಲ ಎಂದು ಕೆಲ ವಿಜ್ಞಾನಿಗಳು ನಂಬಿಕೊಂಡಿದ್ದಾರೆ. ಶುಕ್ರನ ವಾತಾವರಣದಲ್ಲಿ ಪತ್ತೆಯಾದ ರಾಸಾಯನಿಕವನ್ನ ಜೀವದ ಸುಳಿವು ಎಂದು ಪರಿಗಣಿಸಲು ಸಾಧ್ಯವಾಗದು. ಆ ಗ್ರಹದ ನೆಲ ಮತ್ತು ವಾತಾವರಣದೊಳಗೆ ಹೋಗಿ ಖುದ್ದಾಗಿ ಸಂಪರ್ಕ ಸಾಧಿಸಿ ಅಧ್ಯಯನ ಮಾಡುವುದರಿಂದ ಮಾತ್ರ ವೈಜ್ಞಾನಿಕ ಮಾಹಿತಿ ಕಲೆಹಾಕಬಹುದು ಎಂದು ರಷ್ಯಾದ ಖಗೋಲ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ: Shukrayaan-1: ನರಕದಂಥ ಗ್ರಹದಲ್ಲಿ ಜೀವದ ಸುಳಿವು; ಎಲ್ಲರ ಚಿತ್ತ ಭಾರತದ ಶುಕ್ರಯಾನದತ್ತ

ಇನ್ನು, ವೀನಸ್ ಪ್ಲಾನೆಟ್ ಮೇಲೆ ರಷ್ಯಾ ಹಕ್ಕು ಸಾಧಿಸಿರುವುದು ಕೇವಲ ಆತ್ಮಾಭಿಮಾನದ ಪ್ರದರ್ಶನವಾ ಅಥವಾ ನಿಜವಾಗಿಯೂ ಹಕ್ಕು ಸ್ಥಾಪನೆ ಮಾಡಲು ಯತ್ನಿಸುತ್ತಿದೆಯಾ ಎಂದು ಗೊತ್ತಿಲ್ಲ. ಇನ್ನು, ಭಾರತದ ಇಸ್ರೋ ಸಂಸ್ಥೆ ಕೂಡ ವೀನಸ್ ಗ್ರಹವನ್ನು ಅಧ್ಯಯನ ಮಾಡಲು ಶುಕ್ರಯಾನ್-1 ನೌಕೆಯನ್ನು ಕಳುಹಿಸುತ್ತಿದೆ. ಇದಾದರೆ ಶುಕ್ರನಲ್ಲಿಗೆ ನೌಕೆ ಕಳುಹಿಸಿದ ಐದನೇ ದೇಶವಾಗಲಿದೆ ಭಾರತ. ಈ ಮುಂಚೆ ರಷ್ಯಾ, ಅಮೆರಿಕ, ಯೂರೋಪ್ ಮತ್ತು ಜಪಾನ್ ದೇಶಗಳು ಶುಕ್ರನ ಬಳಿ ಹೋಗಿವೆ. ಆದರೆ, ಅದರ ನೆಲದ ಮೇಲೆ ನೌಕೆಯನ್ನು ಸುರಕ್ಷಿತವಾಗಿ ಇಳಿಸಿದ ಏಕೈಕ ದೇಶ ಎಂಬ ಹೆಗ್ಗಳಿಕೆ ರಷ್ಯಾದ್ದು.ಇದನ್ನೂ ಓದಿ: ಸಾವಿರಾರು ಚೀನೀಯರಲ್ಲಿ ಪುರುಷತ್ವ ನಾಶಮಾಡಬಲ್ಲ ಬ್ಯಾಕ್ಟೀರಿಯಾ ಸೋಂಕು ಪತ್ತೆ
Published by: Vijayasarthy SN
First published: September 19, 2020, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading