HOME » NEWS » National-international » RAHUL GANDHI COMMENTING ON PETROL PRICE MAK

Rahul Gandhi: ಬಹಳ ದಿನಗಳ ನಂತರ ತೈಲ ಬೆಲೆ 18 ಪೈಸೆ ಇಳಿಕೆ: ಇಷ್ಟೊಂದು ಹಣ ಉಳಿಸಿ ಏನು ಮಾಡುತ್ತೀರಿ ಎಂದು ರಾಹುಲ್ ವ್ಯಂಗ್ಯ

ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್-ಡೀಸೆಲ್ ಬೆಲೆಯನ್ನು 17/18 ಪೈಸೆ ಇಳಿಸಿದೆ. ಆದರೆ, ಇಷ್ಟು ಪ್ರಮಾಣದ ಹಣ ಉಳಿಸಿ ನೀವು ಏನು ಮಾಡುತ್ತೀರಿ? ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

news18-kannada
Updated:March 28, 2021, 5:49 PM IST
Rahul Gandhi: ಬಹಳ ದಿನಗಳ ನಂತರ ತೈಲ ಬೆಲೆ 18 ಪೈಸೆ ಇಳಿಕೆ: ಇಷ್ಟೊಂದು ಹಣ ಉಳಿಸಿ ಏನು ಮಾಡುತ್ತೀರಿ ಎಂದು ರಾಹುಲ್ ವ್ಯಂಗ್ಯ
ರಾಹುಲ್ ಗಾಂಧಿ.
  • Share this:
ನವ ದೆಹಲಿ (ಮಾರ್ಚ್​ 28); ಕೊರೋನಾ ಲಾಕ್​ಡೌನ್​ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯನ್ನು ಸಾಕಷ್ಟು ಇಳಿಸಲಾಗಿತ್ತು. ಆದರೂ ಸಹ ಅಚ್ಚರಿಯ ರೀತಿಯಲ್ಲಿ ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಿಂದ ಸತತವಾಗಿ ತೈಲ ಬೆಲೆಯನ್ನು ಏರಿಸುತ್ತಲೇ ಇದೆ. ತೈಲದ ಕೇಂದ್ರ ತೆರಿಗೆಯನ್ನು ಗರಿಷ್ಠ ಮಟ್ಟದಲ್ಲಿ ಏರಿಸಿರುವ ಪರಿಣಾಮ ಪೆಟ್ರೋಲ್ ಬೆಲೆ ಇದೀಗ 100 ರೂ ಗಡಿ ದಾಟುವಂತಾಗಿದೆ. ಪರಿಣಾಮ ದಿನನಿತ್ಯದ ವಸ್ತುಗಳ ಬೆಲೆಯೂ ಏರುತ್ತಲೇ ಇದೆ.  ವಿರೋಧ ಪಕ್ಷಗಳ ಹಾಗೂ ಜನ ವಿರೋಧದ ನಡುವೆಯೂ ಕೇಂದ್ರ ಈವರೆಗೆ ಪೆಟ್ರೋಲ್ ಬೆಲೆಯನ್ನು ಇಳಿಸಿಲ್ಲ. ಆದರೆ, ಇಂದು ಕೇಂದ್ರ 18 ಪೈಸೆ ತೈಲ ಬೆಲೆಯನ್ನು ಇಳಿಸಿದೆ. ಆದರೆ, ಇದನ್ನು ವ್ಯಂಗ್ಯವಾಡಿರುವ ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, "ಕೇಂದ್ರ ಸರ್ಕಾರ ತೈಲದ ಬೆಲೆಯನ್ನು 18 ಪೈಸೆ ಇಳಿಸಿದೆ. ಆದರೆ, ಜನ ಸಾಮಾನ್ಯರು ಇಷ್ಟೊಂದು ಹಣವನ್ನು ಉಳಿತಾಯ ಮಾಡಿ ಏನು ಮಾಡಲಿದ್ದಾರೆ?" ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ."ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್-ಡೀಸೆಲ್ ಬೆಲೆಯನ್ನು 17/18 ಪೈಸೆ ಇಳಿಸಿದೆ. ಆದರೆ, ಇಷ್ಟು ಪ್ರಮಾಣದ ಹಣ ಉಳಿಸಿ ನೀವು ಏನು ಮಾಡುತ್ತೀರಿ?" ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ದೇಶದಲ್ಲಿ ತೈಲ ಬೆಲೆ ಒಂದೇ ಸಮನೆ ಏರುತ್ತಾ ಬಂದು ನೂರರ ಗಡಿಯಲ್ಲಿ ನಿಂತಿದೆ. ಇದರ ವಿರುದ್ಧ ದೇಶದಾದ್ಯಂತ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿ ಕೂಡ ಕಟುವಾಗಿ ಟೀಕಿಸಿದ್ದರು.

ಈ ವಾರದ ಆರಂಭದಲ್ಲಿ, ಬಿಜೆಪಿ ನೇತೃತ್ವದ ಸರ್ಕಾರದ ಆರ್ಥಿಕ ನೀತಿಗಳನ್ನು ದೂಷಿಸುತ್ತಾ, ಇದು ನಿರುದ್ಯೋಗ ಮತ್ತು ಬಡತನವನ್ನು ಹೆಚ್ಚಿಸಿದೆ ಎಂದು ಆರೋಪಿಸಿದ್ದರು.ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸೇರಿದಂತೆ 5 ರಾಜ್ಯಗಳಲ್ಲಿ ಒಟ್ಟು 824 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿವೆ.

ಇದನ್ನೂ ಓದಿ: Assembly Elections2021: ಬಿಜೆಪಿಯೊಂದಿಗೆ ಚುನಾವಣಾ ಆಯೋಗ ಶಾಮೀಲಾಗಿದೆಯೇ?; ಬಂಗಾಳದಲ್ಲಿ ಸದ್ದು ಮಾಡುತ್ತಿದೆ ಆಡಿಯೋ ಕ್ಲಿಪ್!

ಈ ರಾಜ್ಯಗಳಲ್ಲಿ ಮತದಾನವು ಮಾರ್ಚ್ 27 ರಂದು ಪ್ರಾರಂಭವಾಗಿ ಏಪ್ರಿಲ್ 29 ಕ್ಕೆ ಕೊನೆಗೊಳ್ಳುತ್ತದೆ. ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆಯ ಮತ ಎಣಿಕೆ ಮೇ 2 ರಂದು ನಡೆಯಲಿದೆ.
Youtube Video

ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿಯ 2.7 ಲಕ್ಷ ಮತಗಟ್ಟೆಗಳಲ್ಲಿ 18.68 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತವು ಶನಿವಾರ ಮುಕ್ತಾಯಗೊಂಡಿದೆ.
Published by: MAshok Kumar
First published: March 28, 2021, 5:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories