ಆನ್​ಲೈನ್​ನಲ್ಲಿ ನಾಮಪತ್ರ; ವೃದ್ಧರು, ಕೋವಿಡ್ ರೋಗಿಗಳಿಗೆ ಪೋಸ್ಟಲ್ ವೋಟಿಂಗ್: ಚುನಾವಣೆಗೆ ಹೊಸ ಮಾರ್ಗಸೂಚಿ

ಬಿಹಾರದಲ್ಲಿ ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಸೋಂಕು ಹೆಚ್ಚು ಹರಡದಂತೆ ಮುನ್ನೆಚ್ಚರಿಕೆ ಅನುಸರಿಸಲಾಗಿದೆ.

news18
Updated:August 21, 2020, 6:23 PM IST
ಆನ್​ಲೈನ್​ನಲ್ಲಿ ನಾಮಪತ್ರ; ವೃದ್ಧರು, ಕೋವಿಡ್ ರೋಗಿಗಳಿಗೆ ಪೋಸ್ಟಲ್ ವೋಟಿಂಗ್: ಚುನಾವಣೆಗೆ ಹೊಸ ಮಾರ್ಗಸೂಚಿ
ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ
  • News18
  • Last Updated: August 21, 2020, 6:23 PM IST
  • Share this:
ನವದೆಹಲಿ(ಆ. 21): ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ನಡೆಯಲಿರುವ ಚುನಾವಣೆಗಳಿಗೆಂದು ಆಯೋಗ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾಮೂಲಿಯ ಕೋವಿಡ್ ಸಾಮಾಜಿಕ ನಿಯಮಗಳಾದ ಮಾಸ್ಕ್, ದೈಹಿಕ ಅಂತರ ಇತ್ಯಾದಿ ಜೊತೆ ಆನ್​ಲೈನ್​ನಲ್ಲಿ ನಾಮಪತ್ರ, ಕೋವಿಡ್ ರೋಗಿಗಳಿಗೆ ಅಂಚೆಮತ ಸೌಲಭ್ಯ ಇತ್ಯಾದಿ ಹೊಸ ಅಂಶಗಳನ್ನೂ ಸೇರಿಸಿ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ವಿವಿಧ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಅಭಿಪ್ರಾಯ ಸಂಗ್ರಹಿಸಿ ಈ ಮಾರ್ಗಸೂಚಿಗಳನ್ನ ರೂಪಿಸಲಾಗಿದೆ.

ಬಿಹಾರದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಇಂದು ಸಭೆ ನಡೆಸಿ ನಿರ್ಧಾರ ತೆಗೆದುಕೊಂಡಿದೆ. ಬಿಹಾರದಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದ್ದು ಸೆ. 20ರಷ್ಟರಲ್ಲಿ ಚುನಾವಣಾ ಆಯೋಗದಿಂದ ವೇಳಾಪಟ್ಟಿ ಪ್ರಕಟವಾಗಲಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಈ ವರ್ಷ ಗಣೇಶೋತ್ಸವಕ್ಕೆ ಅನುಮತಿ ಅಸಾಧ್ಯ: ಸುಪ್ರೀಂ ಕೋರ್ಟ್

ಚುನಾವಣಾ ಆಯೋಗ ಪ್ರಕಟಸಿರುವ ಹೊಸ ಮಾರ್ಗಸೂಚಿಯಲ್ಲಿ ಅಂಚೆ ಮತಗಳ ಸೌಲಭ್ಯವನ್ನು ಹೆಚ್ಚಿನ ಮಂದಿಗೆ ವಿಸ್ತರಿಸಲಾಗಿದೆ. ಚುನಾವಣಾ ಕರ್ತವ್ಯ ನಿಭಾಯಿಸುವ ಸಿಬ್ಬಂದಿಗೆ ಈ ಮುಂಚೆ ಪೋಸ್ಟಲ್ ಬ್ಯಾಲಟ್ ಸೌಲಭ್ಯ ಇರುತ್ತಿತ್ತು. ಈಗ ವಿಶೇಷ ಚೇತನದ ವ್ಯಕ್ತಿಗಳು, ಕೋವಿಡ್ ರೋಗಿಗಳು, 80 ವರ್ಷ ಮೇಲ್ಪಟ್ಟ ವೃದ್ಧರು, ಅಗತ್ಯ ಸೇವೆಯಲ್ಲಿರುವವರು ಇವರಿಗೆ ಅಂಚೆ ಮತ ಸೌಲಭ್ಯ ವಿಸ್ತರಿಸಲಾಗಿದೆ.ಇದೇ ಮೊದಲ ಬಾರಿಗೆ ಅಭ್ಯರ್ಥಿಗಳಿಗೆ ಆನ್​ಲೈನ್​ನಲ್ಲಿ ನಾಮಪತ್ರ ಭರ್ತಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಹಾಗೆಯೇ, ಅಭ್ಯರ್ಥಿಗಳು ಆನ್​ಲೈನ್​ನಲ್ಲೇ ಸೆಕ್ಯೂರಿಟಿ ಹಣವನ್ನು ಒದಗಿಸುವ ಅವಕಾಶ ನೀಡಲಾಗಿದೆ. ನಾಮಪತ್ರ ಸಲ್ಲಿಕೆಯ ವೇಳೆ ಅಭ್ಯರ್ಥಿ ಜೊತೆ ಬರಬಹುದಾದ ಜನರ ಸಂಖ್ಯೆಯನ್ನು ಸೀಮಿತಗೊಳಿಸಲಅಗಿದೆ. ಮನೆ ಮನೆ ಪ್ರಚಾರದಲ್ಲಿ ಅಭ್ಯರ್ಥಿ ಸೇರಿ 5ಕ್ಕಿಂತ ಹೆಚ್ಚು ಮಂದಿ ಓಡಾಡುವಂತಿಲ್ಲ. ಸಾರ್ವಜನಿಕ ಸಭೆ ಮತ್ತು ರೋಡ್ ಶೋಗಳಲ್ಲಿ ಸರ್ಕಾರ ವಿಧಿಸಿದ ನಿಯಮಗಳನ್ನ ಪಾಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಈ ಸಾಲಿನ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿದ ಕೇಂದ್ರ ಸರ್ಕಾರ; ಕ್ರಿಕೆಟರ್ ರೋಹಿತ್ ಶರ್ಮಾಗೆ ಒಲಿದ ಖೇಲ್ ರತ್ನಾವಿಶೇಷವೆಂದರೆ, ಚುನಾವಣಾ ಪ್ರಕ್ರಿಯೆಯ ವೇಳೆ ಮಾಸ್ಕ್, ಸ್ಯಾನಿಟೈಸರ್, ಕೈಗವಸು, ಪಿಪಿಇ ಕಿಟ್​ಗಳನ್ನ ಬಳಕೆ ಮಾಡಲಾಗುತ್ತದೆ. ಎಲ್ಲಾ ಮತದಾರರಿಗೂ ವೋಟರ್ ರಿಜಿಸ್ಟರ್​ನಲ್ಲಿ ಸಹಿ ಮಾಡಲು ಮತ್ತು ವೋಟಿಂಗ್ ಮೆಷಿನ್​ನಲ್ಲಿ ಬಟನ್ ಒತ್ತಲು ಕೈಗಳಿಗೆ ಗ್ಲೌಸ್ ನೀಡಲಾಗುತ್ತದೆ.
Published by: Vijayasarthy SN
First published: August 21, 2020, 6:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading