ಕೊರೋನಾ ಸಂಕಷ್ಟದಲ್ಲಿ ಇನ್ನಷ್ಟು ಅಪಾಯ ಬೇಡ; ಬಿಹಾರ ಚುನಾವಣೆ ಮುಂದೂಡಿ: ಎಲ್​ಜೆಪಿ ಮನವಿ

ಅಕ್ಟೋಬರ್-ನವೆಂಬರ್​ನಲ್ಲಿ ಬಿಹಾರದಲ್ಲಿ ವಿಧಾನಸಭೆ ಚುನಾವಣೆಗಳನ್ನ ನಡೆಸಲು ನಿಶ್ಚಯಿಸಲಾಗಿದೆ. ಆದರೆ, ಕೊರೋನಾ ಅಪಾಯ ಇರುವುದರಿಂದ ಚುನಾವಣೆ ಮುಂದೂಡಿ ಎಂಬ ಒತ್ತಾಯ ಕೇಳಿಬರುತ್ತಿದೆ.

news18
Updated:August 1, 2020, 8:58 AM IST
ಕೊರೋನಾ ಸಂಕಷ್ಟದಲ್ಲಿ ಇನ್ನಷ್ಟು ಅಪಾಯ ಬೇಡ; ಬಿಹಾರ ಚುನಾವಣೆ ಮುಂದೂಡಿ: ಎಲ್​ಜೆಪಿ ಮನವಿ
ನಿತೀಶ್ ಕುಮಾರ್ ಮತ್ತು ಚಿರಾಗ್ ಪಾಸ್ವಾನ್
  • News18
  • Last Updated: August 1, 2020, 8:58 AM IST
  • Share this:
ಪಾಟ್ನಾ(ಆ. 01): ಬಿಹಾರದಲ್ಲಿ ಚುನಾವಣೆ ನಡೆಸುವ ವಿಚಾರದಲ್ಲಿ ಈಗ ಎನ್​ಡಿಎ ಮೈತ್ರಿಕೂಟದೊಳಗೆಯೇ ಅಭಿಪ್ರಾಯಭೇದ ಶುರುವಾಗಿದೆ. ನಿಗದಿಯಂತೆ ಅಕ್ಟೋಬರ್-ನವೆಂಬರ್​ನಲ್ಲಿ ಚುನಾವಣೆ ನಡೆಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಆಸಕ್ತರಾಗಿದ್ದಾರೆ. ಆದರೆ, ಮಿತ್ರಪಕ್ಷ ಎಲ್​ಜೆಪಿ ವಿರೋಧ ವ್ಯಕ್ತಪಡಿಸಿದೆ. ಕೊರೋನಾ ಮಹಾಮಾರಿ ಇರುವ ಹಿನ್ನೆಲೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆಗಳನ್ನು ಮುಂದೂಡುವಂತೆ ಲೋಕ ಜನಶಕ್ತಿ ಪಕ್ಷವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಕೊರೋನಾ ವೈರಸ್ ಪಿಡುಗು ತಾರಕಕ್ಕೇರಬಹುದು ಎಂದು ತಜ್ಞರು ಹೇಳುತ್ತಾರೆ. ಆ ಸಂದರ್ಭದಲ್ಲಿ ಸರ್ಕಾರದ ಗಮನ ಸಂಪೂರ್ಣವಾಗಿ ಕೋವಿಡ್-19 ನಿಯಂತ್ರಣಕ್ಕೆ ಕೇಂದ್ರೀಕೃತವಾಗಬೇಕು. ಸರ್ಕಾರದ ಸಂಪನ್ಮೂಲಗಳು ಚುನಾವಣಾ ಕಾರ್ಯಗಳ ಬದಲು ಕೋವಿಡ್-19 ಮತ್ತು ಪ್ರವಾಹ ಸಂಕಷ್ಟ ಎದುರಿಸಲು ಬಳಕೆಯಾಗಬೇಕು. ಆ ಸಂದರ್ಭದಲ್ಲಿ ಚುನಾವಣೆಗಳನ್ನ ನಡೆಸುವುದರಿಂದ ಜನಜೀವನವನ್ನು ಹೆಚ್ಚು ಅಪಾಯಕ್ಕೆ ಸಿಲುಕಿಸಿದಂತಾಗುತ್ತದೆ ಎಂದು ಎಲ್​ಜೆಪಿ ಪಕ್ಷ ಆತಂಕ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ತಿಜೋರಿ ತುಂಬಿಕೊಳ್ಳಲು ನಾಗರಿಕರ ಚಿನ್ನಕ್ಕೆ ತೆರಿಗೆ ಮತ್ತು ದಂಡ ವಿಧಿಸುವ ಚಿಂತನೆ

ದೇಶಾದ್ಯಂತ ಈಗಾಗಲೇ 35 ಸಾವಿರಕ್ಕೂ ಹೆಚ್ಚು ಜನರು ಹಾಗೂ ಬಿಹಾರದಲ್ಲಿ 280ಕ್ಕೂ ಹೆಚ್ಚು ಜನರು ಕೋವಿಡ್-19ನಿಂದ ಮೃತಪಟ್ಟಿದ್ದಾರೆ. ಇಂಥ ಅಪಾಯದ ಸಂದರ್ಭದಲ್ಲಿ ಚುನಾವಣೆ ನಡೆಸುವುದರಿಂದ ಇನ್ನಷ್ಟು ಜನರನ್ನು ಸಾವಿನ ದವಡೆಗೆ ಬೇಕಂತಲೇ ನೂಕಿದಂತಾಗುತ್ತದೆ. ಹಾಗೆಯೇ, ಬಿಹಾರದ ಬಹುಭಾಗ ಈಗ ಪ್ರವಾಹ ಸಂಕಷ್ಟದಲ್ಲಿದೆ. ಆಡಳಿತದ ಗಮನ ಸಂಪೂರ್ಣವಾಗಿ ಈ ಸಂಕಷ್ಟಗಳ ಪರಿಹಾರದತ್ತಲೇ ನೆಟ್ಟಿರಬೇಕು ಎಂದು ಎಲ್​ಜೆಪಿ ಅಭಿಪ್ರಾಯಪಟ್ಟಿದೆ.

ಚುನಾವಣಾ ಆಯೋಗ ಸದ್ಯ ಎಲ್ಲರ ಅಭಿಪ್ರಾಯಗಳನ್ನ ಕಲೆಹಾಕುತ್ತಿದೆ. ಬಿಜೆಪಿ ಪಕ್ಷ ಚುನಾವಣಾ ಆಯೋಗದ ಯಾವುದೇ ನಿರ್ಧಾರವನ್ನೂ ಸ್ವಾಗತಿಸುವುದಾಗಿ ಸ್ಪಷ್ಟಪಡಿಸಿದೆ. ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಪಕ್ಷದ ನಿತೀಶ್ ಕುಮಾರ್ ಅವರು ಅಕ್ಟೋಬರ್-ನವೆಂಬರ್​ನಲ್ಲಿ ಚುನಾವಣೆ ನಡೆಸಬೇಕೆಂಬ ಇಚ್ಛೆಯಲ್ಲಿದ್ದಾರೆ. ಅದಕ್ಕಾಗಿ ಸಂಘಟನೆಯ ಕಾರ್ಯದಲ್ಲೂ ಅವರು ತೊಡಗಿಸಿಕೊಂಡಿದ್ಧಾರೆ.

ಇದನ್ನೂ ಓದಿ: ಪಂಜಾಬ್​​ನಲ್ಲಿ ನಕಲಿ ಮದ್ಯ ಸೇವಿಸಿ 32 ಜನರ ಸಾವು; ತನಿಖೆಗೆ ಆದೇಶಿಸಿದ ಸಿಎಂ ಅಮರೀಂದರ್ ಸಿಂಗ್

ಇನ್ನು ಬಿಹಾರದ ಪ್ರಮುಖ ವಿಪಕ್ಷವಾದ ಆರ್​ಜೆಡಿ ಚುನಾವಣೆ ನಡೆಯಬಾರದೆಂಬ ಅಭಿಪ್ರಾಯ ನೀಡಿದೆ. ಕೋವಿಡ್ ಬಿಕ್ಕಟ್ಟು ಇರುವುದರಿಂದ ಚುನಾವಣೆಗಳನ್ನ ಮುಂದೂಡಬೇಕೆಂದು ಅದು ಒತ್ತಾಯಿಸಿದೆ.
Published by: Vijayasarthy SN
First published: August 1, 2020, 8:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading