news18-kannada Updated:March 25, 2021, 12:33 PM IST
ಗಿಳಿ
ನಿಮ್ಮ ಹೃದಯವನ್ನು ಮೆಲ್ಟ್ ಮಾಡುವ ಅನೇಕ ವಿಡಿಯೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದೇ ರೀತಿ, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಒಂದು ಸುಂದರವಾದ ಬಿಳಿ ಗಿಳಿಯು ಮೊದಲ ಬಾರಿಗೆ ಭೇಟಿಯಾದ ನಾಯಿಮರಿಗೆ 'ಐ ಲವ್ ಯೂ' ಎಂದು ಹೇಳುವುದನ್ನು ನಾವು ಕೇಳಬಹುದು. ಈ ಸಣ್ಣ ವಿಡಿಯೋ ಕ್ಲಿಪ್ನಲ್ಲಿ ಕಪ್ಪು ನಾಯಿಮರಿಯೊಂದನ್ನು ಮಹಿಳೆ ಎತ್ತಿಕೊಂಡಿದ್ದು, ಒಡತಿಯ ಮಡಿಲಲ್ಲಿ ಆರಾಮವಾಗಿ ಮಲಗಿರುವುದನ್ನು ನೋಡಬಹುದಾಗಿದೆ.
ತನ್ನ ಸಾಕುಪ್ರಾಣಿಗಳ ವಿಡಿಯೋ ತುಣುಕುಗಳನ್ನು ನಿಯಮಿತವಾಗಿ ಹಂಚಿಕೊಳ್ಳುವ ವೆಂಡಿ ಮೇರಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದ ಆರಂಭದಲ್ಲಿ ತನ್ನ ಗಿಣಿ, ಸ್ವೀಟ್ ಪೀ ಅನ್ನು ನಾಯಿಮರಿಗೆ ಪರಿಚಯಿಸಿದ್ದಾಳೆ. ಅವಳು ಹಾಗೆ ಮಾಡುವಾಗ, ಗಿಣಿ ಪ್ರೀತಿಯಿಂದ ನಾಯಿಯ ತಲೆಯನ್ನು ತನ್ನ ಕಾಲಿನಿಂದ ಮುಟ್ಟುತ್ತದೆ. ಕೆಲವು ಸೆಕೆಂಡುಗಳ ನಂತರ, ವೆಂಡಿ ಸ್ವೀಟ್ ಪೀಗೆ ಪುಟ್ಟ ನಾಯಿ ಮರಿಯನ್ನು ಪ್ರೀತಿಸುತ್ತೇನೆ ಎಂದು ಹೇಳಲು ಕೇಳುತ್ತಾಳೆ. ಇದಕ್ಕೆ ಉತ್ತರಿಸಿದ ಗಿಣಿ, ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ಎಂದು ಹೇಳುವ ಮೂಲಕ ಬೆರಗುಗೊಳಿಸುತ್ತದೆ. ಪ್ರೀತಿಯನ್ನು ಹೊರಹಾಕುವ ವಿಡಿಯೋಗೆ "ಸ್ವೀಟ್ ಪೀ ಮೊದಲ ಬಾರಿಗೆ ಹೊಸ ನಾಯಿ ಮರಿಯನ್ನು ಭೇಟಿಯಾಗಿದೆ'' ಎಂಬ ಕ್ಯಾಪ್ಷನ್ ನೀಡಿದ್ದಾಳೆ.
ಇನ್ನು, ಈ ಪ್ರೀತಿ ತುಂಬಿದ ವಿಡಿಯೋ ಪೋಸ್ಟ್ ಮಾಡಿದಾಗಿನಿಂದ, ನೆಟ್ಟಿಗರು ಸಹ ಪ್ರಿತಿ ತುಂಬಿದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅನೇಕ ಜನರು, ‘ಆವ್’, 'ಎಷ್ಟೊಂದು ಪ್ರೀತಿ ತುಂಬಿದೆ', 'ಎಷ್ಟು ಶುದ್ಧ’ - ಹೀಗೆ ನಾನಾ ರೀತಿ ಕಾಮೆಂಟ್ಗಳನ್ನು ಮಾಡಿದ್ದಾರೆ. ಇದಲ್ಲದೆ, ಸಾಕಷ್ಟು ಜನರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹೃದಯ ಕಣ್ಣಿನ ಎಮೋಜಿ, ಬೆಂಕಿ ಎಮೋಜಿ, ಕಿಸ್ ಎಮೋಜಿ, ಹೃದಯ ಎಮೋಜಿಗಳ ಮೂಲಕವೂ ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ಲದೆ, ಮತ್ತೊಂದು ಪೋಸ್ಟ್ನಲ್ಲಿ ವೆಂಡಿ ಅದೇ ವಿಡಿಯೋವನ್ನು ಟಿಕ್ಟಾಕ್ನಲ್ಲಿ ಹಂಚಿಕೊಂಡಿದ್ದನ್ನು ತಿಳಿಸಿದ್ದು, ಅದಕ್ಕೆ ಆ ವಿಡಿಯೋದಿಂದಲೇ 12.5 ಮಿಲಿಯನ್ ವೀವ್ಸ್ ಬಂದಿರುವ ಬಗ್ಗೆ ವೆಂಡಿ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಬಹಿರಂಗಪಡಿಸಿದ್ದಾಳೆ. ಇದಲ್ಲದೆ ಈ ವಿಡಿಯೋಗೆ ತುಂಬಾ ಪ್ರೀತಿ ತೋರಿಸಿದ ತನ್ನ ವರ್ಚುಯಲ್ ಕುಟುಂಬದ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾಳೆ.
“ನಾನು ನೋಡಿದ ಅತ್ಯಂತ ಸ್ವೀಟೆಸ್ಟ್ ವಿಡಿಯೋಗಳಲ್ಲಿ ಇದೂ ಒಂದಾಗಿದೆ. ಪ್ರತಿಯೊಂದು ವಿಧದ ಪ್ರಾಣಿಯು ಪ್ರೀತಿಸಲು ಮತ್ತು ಬಂಧವನ್ನು ಹಂಚಿಕೊಳ್ಳಲು ಬಯಸುತ್ತದೆ'' ಎಂದು ಈ ಪೋಸ್ಟ್ಗೆ ವ್ಯಕ್ತಿಯೊಬ್ಬರು ಪ್ರತಿಕ್ರಿಯೆ ನೀಡುವ ಮೂಲಕ ಮೆಚ್ಚಿಕೊಂಡಿದ್ದಾರೆ. ಜತೆಗೆ, ಈ ವಿಡಿಯೋ ಕ್ಲಿಪ್ ನೋಡಿ ಆಶ್ಚರ್ಯಚಕಿತರಾದ ಇನ್ನೊಬ್ಬ ಬಳಕೆದಾರರು, "ಓಹ್ ಅದು ನನ್ನ ಹೃದಯವನ್ನು ಮೆಲ್ಟ್ ಮಾಡಿ ನನ್ನನ್ನು ನಿಜವಾಗಲೂ ಅಳುವಂತೆ ಮಾಡಿತು" ಎಂದು ಕಾಮೆಂಟ್ ಮಾಡಿದ್ದಾರೆ.
ವೆಂಡಿ ಇನ್ಸ್ಟಾಗ್ರಾಂನಲ್ಲಿ ತನ್ನ ಗಿಳಿಗಳ ಬಗ್ಗೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಏನಾದರು ಅಪ್ಡೇಟ್ಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ.
Published by:
Harshith AS
First published:
March 25, 2021, 12:25 PM IST