HOME » NEWS » National-international » PAKISTAN PRIME MINISTER IMRAN KHAN UNFOLLOWS EVERYONE INCLUDING EX WIFE TWITTER AMUSED MAK

ಮಾಜಿ ಪತ್ನಿ ಸೇರಿದಂತೆ ಎಲ್ಲರನ್ನೂ ಟ್ವಿಟರ್​ನಲ್ಲಿ ಅನ್​​ಫಾಲೋ ಮಾಡಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್

ಇದೀಗ ಇಮ್ರಾನ್ ಖಾನ್ ಟ್ವಿಟರ್​ನಲ್ಲಿ ತಮ್ಮ ಮೊದಲ ಪತ್ನಿಯನ್ನೂ ಅನ್​ಫಾಲೋ ಮಾಡಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇಬ್ಬರ ನಡುವೆಯೂ ಏನೋ ನಡೆದಿದೆ ಅದಕ್ಕೆ ಇಮ್ರಾನ್ ಖಾನ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಜನ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

news18-kannada
Updated:December 8, 2020, 9:22 PM IST
ಮಾಜಿ ಪತ್ನಿ ಸೇರಿದಂತೆ ಎಲ್ಲರನ್ನೂ ಟ್ವಿಟರ್​ನಲ್ಲಿ ಅನ್​​ಫಾಲೋ ಮಾಡಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್
ಇಮ್ರಾನ್ ಖಾನ್
  • Share this:
ಇಸ್ಲಾಮಾಬಾದ್​ (ಡಿಸೆಂಬರ್​ 08); ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್​ ಖಾನ್​ ತಮ್ಮ ಟ್ವಿಟರ್ ಖಾತೆಯಿಂದ ಮಾಜಿ ಮೊದಲ ಪತ್ನಿ ಸೇರಿದಂತೆ ಎಲ್ಲರನ್ನೂ ಅನ್​ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ. ದಿ ನ್ಯೂಸ್ ಇಂಟರ್‌ನ್ಯಾಷನಲ್‌ ವರದಿಯ ಪ್ರಕಾರ, ಸೋಮವಾರ ಸಂಜೆಯಿಂದ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್ ತಮ್ಮ ಅಧಿಕೃತ ಟ್ವಿಟರ್​ ಖಾತೆ @ImranKhanPTI  ಯಿಂದ ಯಾರನ್ನೂ ಹಿಂಬಾಲಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಅವರು ಚಲನಚಿತ್ರ ನಿರ್ಮಾಪಕಿ ಹಾಗೂ ತಮ್ಮ ಮಾಜಿ ಪತ್ನಿ ಜಮೀಮಾ ಗೋಲ್ಡ್​ಸ್ಮಿತ್​ ಅವರನ್ನೂ ಅನ್​ಫಾಲೋ ಮಾಡಿದ್ದಾರೆ ಎಂದು ತಿಳಿಸಿದೆ.

ಇಮ್ರಾನ್ ಖಾನ್ 2010 ರಲ್ಲಿ ತನ್ನ ಟ್ವಿಟ್ಟರ್ ಪ್ರೊಫೈಲ್ ಅನ್ನು ರಚಿಸಿದ್ದರು. ಮೊದಲ ಪತ್ನಿ ಜಮೀಮಾ ಗೋಲ್ಡ್​ಸ್ಮಿತ್​ ಅವರಿಂದ ದೂರಾಗಿ ಮತ್ತೆ ಎರಡು ಮದುವೆಯಾಗಿದ್ದರೂ ಸಹ ಇಮ್ರಾನ್ ಖಾನ್ ಟ್ವಿಟರ್​ ಖಾತೆಯಲ್ಲಿ ಜಮೀಮಾ ಅವರನ್ನು ಹಿಂಬಾಲಿಸುತ್ತಿದ್ದರು. ಇಮ್ರಾನ್ ಖಾನೆಎ ಇತರರನ್ನು ಹಿಂಬಾಲಿಸದಿದ್ದರೂ ಟ್ವಿಟರ್​ನಲ್ಲಿ ತಮ್ಮ ಮೊದಲ ಪತ್ನಿಯನ್ನು ಅನ್​ಫಾಲೋ ಮಾಡುವುದು ಅವರಿಗೆ ಇಷ್ಟವಿಲ್ಲ ಎಂದೇ ಹೇಳಲಾಗುತ್ತಿತ್ತು.

ಇದನ್ನೂ ಓದಿ : ಈ ಕೃಷಿ ಕಾನೂನುಗಳನ್ನು ಕಾಂಗ್ರೆಸ್​ ಸಹ ತರಲು ಬಯಸಿತ್ತು ಎಂದಿದ್ದ ಸಚಿವ ರವಿಶಂಕರ್​ಗೆ ಶರದ್ ಪವಾರ್ ತಿರುಗೇಟು
Youtube Video

ಆದರೆ, ಇದೀಗ ಇಮ್ರಾನ್ ಖಾನ್ ಟ್ವಿಟರ್​ನಲ್ಲಿ ತಮ್ಮ ಮೊದಲ ಪತ್ನಿಯನ್ನೂ ಅನ್​ಫಾಲೋ ಮಾಡಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇಬ್ಬರ ನಡುವೆಯೂ ಏನೋ ನಡೆದಿದೆ ಅದಕ್ಕೆ ಇಮ್ರಾನ್ ಖಾನ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಜನ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
Published by: MAshok Kumar
First published: December 8, 2020, 9:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories