PAF Aircraft Crash: ಪಾಕಿಸ್ತಾನ ವಾಯುಪಡೆಯ ತರಬೇತಿ ವಿಮಾನ ಪತನ; ಜಿಗಿದು ಜೀವ ಉಳಿಸಿಕೊಂಡ ಪೈಲಟ್

ಪಾಕಿಸ್ತಾನದಲ್ಲಿ ಇಂದು ಬೆಳಗ್ಗೆ ತರಬೇತಿ ನೀಡುತ್ತಿದ್ದ ವಾಯುಪಡೆಯ ವಿಮಾನ ಇದ್ದಕ್ಕಿದ್ದಂತೆ ಕೆಳಮುಖವಾಗಿ ಚಲಿಸಲಾರಂಭಿಸಿತು. ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ತರಬೇತಿ ಪಡೆಯುತ್ತಿದ್ದ ಪೈಲಟ್ ಕೆಳಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಈ ವರ್ಷ ಪಾಕಿಸ್ತಾನದ ವಾಯುಸೇನೆಯಲ್ಲಿ ನಡೆಯುತ್ತಿರುವ 5ನೇ ವಿಮಾನ ದುರಂತ ಇದಾಗಿದೆ.

Sushma Chakre | news18-kannada
Updated:September 15, 2020, 3:07 PM IST
PAF Aircraft Crash: ಪಾಕಿಸ್ತಾನ ವಾಯುಪಡೆಯ ತರಬೇತಿ ವಿಮಾನ ಪತನ; ಜಿಗಿದು ಜೀವ ಉಳಿಸಿಕೊಂಡ ಪೈಲಟ್
ಸಾಂದರ್ಭಿಕ ಚಿತ್ರ
  • Share this:
ಇಸ್ಲಮಾಬಾದ್ (ಸೆ. 15): ಪಾಕಿಸ್ತಾನದ ವಾಯುಪಡೆಗೆ ಸೇರಿದ ವಿಮಾನ ಇಂದು ಮುಂಜಾನೆ ಅಪಘಾತಕ್ಕೀಡಾಗಿದೆ. ಪಿಂಡಿಘೇಬ್ ಬಳಿ ಪಾಕಿಸ್ತಾನದ ತರಬೇತಿ ವಿಮಾನ ಪತನಗೊಂಡಿದ್ದು, ಈ ಅವಘಡ ಸಂಭವಿಸುತ್ತಿದ್ದಂತೆ ಪೈಲಟ್ ವಿಮಾನದಿಂದ ಕೆಳಗೆ ಹಾರಿ ಬಚಾವಾಗಿದ್ದಾರೆ. ಪ್ರತಿನಿತ್ಯದಂತೆ ಬೆಳಗ್ಗೆ ತರಬೇತಿ ನೀಡುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ ಪತನಗೊಂಡಿದೆ. ಈ ವರ್ಷ ಪಾಕಿಸ್ತಾನದ ವಾಯುಸೇನೆಯಲ್ಲಿ ನಡೆಯುತ್ತಿರುವ 5ನೇ ವಿಮಾನ ದುರಂತ ಇದಾಗಿದೆ. ಈ ಘಟನೆಗೆ ನಿಖರವಾದ ಕಾರಣವೇನೆಂದು ತಿಳಿದುಬಂದಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಾಯುಪಡೆ ಅಧಿಕಾರಿಗಳು, ಪ್ರತಿನಿತ್ಯ ವಿಮಾನ ತರಬೇತಿ ನೀಡಲಾಗುತ್ತದೆ. ಇಂದು ಬೆಳಗ್ಗೆ ಕೂಡ ತರಬೇತಿ ನೀಡುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ ಕೆಳಮುಖವಾಗಿ ಚಲಿಸಲಾರಂಭಿಸಿತು. ಈ ಘಟನೆಯಲ್ಲಿ ಯಾರ ಜೀವಕ್ಕೂ ಅಪಾಯವಾಗಿಲ್ಲ. ಪೈಲಟ್​ಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ತರಬೇತಿ ಪಡೆಯುತ್ತಿದ್ದ ಪೈಲಟ್ ಕೆಳಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಹೀಗಾಗಿ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.ಈ ಘಟನೆಯ ಕುರಿತು ವರದಿ ನೀಡುವಂತೆ ಪಾಕ್ ವಾಯುಪಡೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೇ, ಇದಕ್ಕೆ ಕಾರಣವೇನೆಂದು ತನಿಖೆ ನಡೆಸಲು ಆದೇಶಿಸಲಾಗಿದೆ. ಯಾವ ವಿಮಾನ ಪತನಗೊಂಡಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ರೀತಿಯ ವಿಮಾನ ದುರಂತದಲ್ಲಿ ಪಾಕಿಸ್ತಾನ ವಾಯುಪಡೆ ಈ ವರ್ಷ 5 ವಿಮಾನಗಳನ್ನು ಕಳೆದುಕೊಂಡಿದೆ. ಈ ವರ್ಷ ಪಾಕಿಸ್ತಾನದ ವಾಯುಸೇನೆಯಲ್ಲಿ ನಡೆಯುತ್ತಿರುವ 5ನೇ ವಿಮಾನ ದುರಂತ ಇದಾಗಿದೆ ಎಂದು ಟೈಮ್ಸ್​ ನೌ ವರದಿ ಮಾಡಿದೆ.

ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ...
Published by: Sushma Chakre
First published: September 15, 2020, 3:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading