ಪಾರ್ಲಿಮೆಂಟ್​ನಲ್ಲಿ ನೀಲಿಚಿತ್ರ ವೀಕ್ಷಿಸಿ ಸಿಕ್ಕಿಬಿದ್ದ ಸಂಸದ

ಸದನದಲ್ಲಿ ನೀಲಿ ಚಿತ್ರ ವೀಕ್ಷಣೆ ಕುರಿತು ಸುದ್ದಿಯಾಗುತ್ತಿದ್ದಂತೆ ಸಂಸದರು ಕೂಡ ತಪ್ಪೊಪ್ಪಿಕೊಂಡಿದ್ದಾರೆ. ಈ ಕುರಿತು ಸ್ಥಳೀಯ ಮಾಧ್ಯಮಕ್ಕೆ ಮಾತನಾಡಿರುವ ಅವರು, ಯಾವುದೋ ಸಂದೇಶ ಬಂದಿತ್ತು. ಈ ವೇಳೆ ಲಿಂಕ್​ ಕ್ಲಿಕ್​ ಮಾಡಿದಾಗ ನೀಲಿ ಚಿತ್ರ ಪ್ರಸಾರವಾಯಿತು ಎಂದಿದ್ದಾರೆ.

news18-kannada
Updated:September 18, 2020, 9:42 PM IST
ಪಾರ್ಲಿಮೆಂಟ್​ನಲ್ಲಿ ನೀಲಿಚಿತ್ರ ವೀಕ್ಷಿಸಿ ಸಿಕ್ಕಿಬಿದ್ದ ಸಂಸದ
ಪ್ರಾತಿನಿಧಿಕ ಚಿತ್ರ.
  • Share this:
ಜನರ ಸಮಸ್ಯೆಗಳ ಕುರಿತು ಸದನದಲ್ಲಿ ಧ್ವನಿ ಎತ್ತಬೇಕಾದ ಸಂಸದರೊಬ್ಬರು ಕಲಾಪ ನಡೆಯುವ ವೇಳೆ ನೀಲಿ ಚಿತ್ರ ನೋಡಿ ಸಿಕ್ಕಿಬಿದ್ದಿದ್ದಾರೆ. ಅವರು ಅಶ್ಲೀಲ ವಿಡಿಯೋ ನೋಡುತ್ತಿರುವ ದೃಶ್ಯ  ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಇನ್ನು ಈ ಘಟನೆ ಥೈಲ್ಯಾಂಡ್​ನಲ್ಲಿ ಈ ಘಟನೆ ನಡೆದಿದ್ದು, ಬಜೆಟ್​ ಮಂಡಿಸುವ ವೇಳೆ ರೊನತೇಪ್​ ಅನುವಾಟ್ ಸಂಸದರು ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ನೋಡಿದ್ದಾರೆ. ಸುಮಾರು​ 10 ನಿಮಿಷಗಳ ಕಾಲ ಸದನದಲ್ಲಿ ನೀಲಿ ಚಿತ್ರ ವೀಕ್ಷಿಸಿದ್ದಾರೆ. ಇವರು ಥೈಲ್ಯಾಂಡ್​ನ ಚೋನ್ಬುರಿ ಪ್ರಾಂತ್ಯದ ಪ್ರತಿನಿಧಿಯಾಗಿದ್ದು,  ಮಿಲಿಟರಿ ಪಲಂಗ್​ ಪ್ರಚಾರತ್​ ಪಕ್ಷದ ಸಂಸದರಾಗಿದ್ದಾರೆ.  ಸದನದಲ್ಲಿ ನೀಲಿ ಚಿತ್ರ ವೀಕ್ಷಣೆ ಕುರಿತು ಸುದ್ದಿಯಾಗುತ್ತಿದ್ದಂತೆ ಅವರು ತಪ್ಪೊಪ್ಪಿಕೊಂಡಿದ್ದಾರೆ. ಈ ಕುರಿತು ಸ್ಥಳೀಯ ಮಾಧ್ಯಮಕ್ಕೆ ಮಾತನಾಡಿರುವ ಸಂಸದರು, ಯಾವುದೋ ಆರ್ಥಿಕ ಸಹಾಯ ಕೇಳಿ  ಸಂದೇಶ ಬಂದಿತ್ತು. ಈ ವೇಳೆ ಲಿಂಕ್​ ಕ್ಲಿಕ್​ ಮಾಡಿದಾಗ ನೀಲಿ ಚಿತ್ರ ಪ್ರಸಾರವಾಯಿತು ಎಂದಿದ್ದಾರೆ. ಸಂಸದರು ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ ಹಿನ್ನಲೆ ಸರ್ಕಾರಿ ಅಧಿಕಾರಿಗಳು ಸಮನ್ಸ್​ ಜಾರಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಸ್ಪೀಕರ್​ ಚುಹನ್​ ಲೆಪೈ, ಅವರ ಸಭೆ ನಡಯುವಾಗ ಯಾರು ಮೊಬೈಲ್​ ನೋಡಬಾರದು ಎಂಬ ಯಾವುದೇ ನಿಯಮವಿಲ್ಲ. ಅಲ್ಲದೇ ಸಂಸದ ಮೊಬೈಲ್​ ವೀಕ್ಷಣೆ ಕುರಿತು ಬೇರೆ ಸಂಸದರು ಯಾರು ದೂರು ನೀಡಿಲ್ಲ. ಈ ಹಿನ್ನೆಲೆ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದಿದ್ದಾರೆ.

ಥಾಯ್ಲೆಂಡ್​ನಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಸಂಸದರು ನೀಲಿ ಚಿತ್ರ ವೀಕ್ಷಿಸಿ ಸಿಕ್ಕಿಬಿದ್ದಿಲ್ಲ ಈ ಹಿಂದೆ ಬ್ಯಾಂಕಾಕ್​ ಸಂಸದ ನಾಟ್​ ಬಂತದತನ್ ಕೂಡ ಸಂವಿಧಾನ ತಿದ್ದುಪಡಿ ಚರ್ಚೆ ವೇಳೆ ಅಶ್ಲೀಲ ಚಿತ್ರ ವೀಕ್ಷಿಸಿ ಸಿಕ್ಕಿಬಿದಿದ್ದರು.
Published by: Seema R
First published: September 18, 2020, 9:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading