TIKTOK: ಅಮೆರಿಕದಲ್ಲಿ ಟಿಕ್‌ಟಾಕ್‌ ಖರೀದಿಗೆ ಮುಂದಾದ ಮೈಕ್ರೋಸಾಫ್ಟ್‌: ಟ್ರಂಪ್ ಅನುಮತಿ ಕೋರಿದ ಸತ್ಯ ನಾದೆಲ್ಲಾ

ಜಾಗತಿಕವಾಗಿ 2 ಶತಕೋಟಿಗಿಂತ ಹೆಚ್ಚು ಬಳಕೆದಾರರು ಟಿಕ್‌ಟಾಕ್‌ ಅಪ್ಲಿಕೇಶನ್‌‌ ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಟ್ರಂಪ್ ವಿರೋಧಿ ಕಾರ್ಯಕರ್ತರು ಪ್ರಚಾರ ಚಟುವಟಿಕೆಗಳನ್ನು ನಡೆಸಲು ಈ ವೇದಿಕೆಯನ್ನು ಬಳಸಿದ್ದರು. ಇದು ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷರ ಕೆಂಗಣ್ಣಿಗೆ ಗುರಿಯಾಗಿತ್ತು.

MAshok Kumar | news18-kannada
Updated:August 3, 2020, 9:01 PM IST
TIKTOK: ಅಮೆರಿಕದಲ್ಲಿ ಟಿಕ್‌ಟಾಕ್‌ ಖರೀದಿಗೆ ಮುಂದಾದ ಮೈಕ್ರೋಸಾಫ್ಟ್‌: ಟ್ರಂಪ್ ಅನುಮತಿ ಕೋರಿದ ಸತ್ಯ ನಾದೆಲ್ಲಾ
ವಿವಾದಾತ್ಮಕ ಟಿಕ್‌ಟಾಕ್ ಅಪ್ಲಿಕೇಶನ್‌ ಅನ್ನು ಅಮೆರಿಕದಲ್ಲೂ ನಿಷೇಧಿಸುವ ಕುರಿತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಯೋಚಿಸುತ್ತಿದ್ದಾರೆ ಎಂಬ ವರದಿಗಳು ಇತ್ತೀಚೆಗೆ ಸುದ್ದಿ ಮಾಡಿದ್ದವು. ಇದರ ಬೆನ್ನಿಗೆ ಅಮೆರಿಕ ಮೂಲದ ಮೈಕ್ರೋ ಸಾಫ್ಟ್‌ ಕಂಪೆನಿ ಟಿಕ್‌ಟಾಕ್‌ ಅನ್ನು ಖರೀದಿ ಮಾಡಲು ಮುಂದಾಗಿದೆ.
  • Share this:
Is Microsoft Considering Buying TikTok From ByteDance, At Least In The US
ವಿವಾದಾತ್ಮಕ ಟಿಕ್‌ಟಾಕ್ ಅಪ್ಲಿಕೇಶನ್‌ ಅನ್ನು ಅಮೆರಿಕದಲ್ಲೂ ನಿಷೇಧಿಸುವ ಕುರಿತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಯೋಚಿಸುತ್ತಿದ್ದಾರೆ ಎಂಬ ವರದಿಗಳು ಇತ್ತೀಚೆಗೆ ಸುದ್ದಿ ಮಾಡಿದ್ದವು. ಇದರ ಬೆನ್ನಿಗೆ ಅಮೆರಿಕ ಮೂಲದ ಮೈಕ್ರೋ ಸಾಫ್ಟ್‌ ಕಂಪೆನಿ ಟಿಕ್‌ಟಾಕ್‌ ಅನ್ನು ಖರೀದಿ ಮಾಡಲು ಮುಂದಾಗಿದೆ.

Donald Trump
ಈಗಾಗಲೇ ಮೈಕ್ರೋಸಾಫ್ಟ್ ಕಾರ್ಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾದೆಲ್ಲಾ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರೊಂದಿಗೆ ದೂರವಾಣಿ ಮೂಲಕ ಟಿಕ್‌ಟಾಕ್‌ ಖರೀದಿ ಕುರಿತು ಮಾತನಾಡಿದ್ದಾರೆ. ಈ ವೇಳೆ ಟಿಕ್‌ಟಾಕ್‌ ಖರೀದಿ ಮಾಡಿದರೆ ದೇಶದ ಆಡಳಿತ ಬೆಂಬಲ ನೀಡುತ್ತದೆಯೇ? ಎಂದು ಖಚಿತಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

TikTok
ಮೈಕ್ರೋಸಾಫ್ಟ್ ಅಮೆರಿಕಾ ಸೇರಿದಂತೆ ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಟಿಕ್‌ಟಾಕ್‌ ಅನ್ನು ಖರೀದಿಸುವ ಮಾತುಕತೆ ದೃಡಪಡಿಸಿದೆ ಮತ್ತು ಸೆಪ್ಟೆಂಬರ್ 15 ರ ನಂತರ ಒಪ್ಪಂದವನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದು ಸತ್ಯ ನಾದೆಲ್ಲಾ ತಿಳಿಸಿದ್ದಾರೆ.

Coronavirus Lockdown increases TikTok users downloads over 100 million times
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಮೆರಿಕಾ-ಚೀನಾ ಉದ್ವಿಗ್ನತೆಗಳಲ್ಲಿ ಟಿಕ್‌ಟಾಕ್ ಕೂಡಾ ಕೇಂದ್ರ ಬಿಂದುವಾಗಿದೆ.

ಅಮೆರಿಕನ್ ಬಳಕೆದಾರರ ಡೇಟಾವನ್ನು ಬೀಜಿಂಗ್‌ಗೆ ಹಸ್ತಾಂತರಿಸಲು, 165 ಮಿಲಿಯನ್ ಅಮೆರಿಕನ್ನರ ಮೇಲೆ ಪ್ರಭಾವ ಬೀರಲು ಟಿಕ್‌ಟಾಕ್‌ ಅಪ್ಲಿಕೇಶನ್ ಅನ್ನು ಬಳಸಬಹುದೆಂದು ಅಮೆರಿಕ ರಾಜಕಾರಣಿಗಳು ಕಳವಳ ವ್ಯಕ್ತಪಡಿಸಿದ್ದರು.

ಜಾಗತಿಕವಾಗಿ 2 ಶತಕೋಟಿಗಿಂತ ಹೆಚ್ಚು ಬಳಕೆದಾರರು ಟಿಕ್‌ಟಾಕ್‌ ಅಪ್ಲಿಕೇಶನ್‌‌ ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಟ್ರಂಪ್ ವಿರೋಧಿ ಕಾರ್ಯಕರ್ತರು ಪ್ರಚಾರ ಚಟುವಟಿಕೆಗಳನ್ನು ನಡೆಸಲು ಈ ವೇದಿಕೆಯನ್ನು ಬಳಸಿದ್ದರು. ಇದು ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷರ ಕೆಂಗಣ್ಣಿಗೆ ಗುರಿಯಾಗಿತ್ತು.

TikTok to Meet Govt Panel to Present 'Clarification', Says Will Comply With Privacy Needs
ಹೀಗಾಗಿ ಟಿಕ್‌ಟಾಕ್‌ ಅನ್ನು ನಿಷೇಧಿಸಲು ಚಿಂತನೆ ನಡೆಸಿದ್ದರು. ಇದೇ ಕಾರಣಕ್ಕೆ ಚೀನಾದ ಕಂಪೆನಿ ಶತಕೋಟಿ ವ್ಯವಹಾರ ಮಾಡುವ ಟಿಕ್‌ಟಾಕ್‌ ಅನ್ನು ಅಮೆರಿಕ ಮೂಲದ ಕಂಪೆನಿಗೆ ಮಾರಾಟ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ.
Make videos on TikTok you can earn crores
ಮೈಕ್ರೋಸಾಫ್ಟ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ, ಟಿಕ್‌ಟಾಕ್ ಅಪ್ಲಿಕೇಶನ್‌ಗೆ ಹೆಚ್ಚಿನ ಸುರಕ್ಷತೆ, ಗೌಪ್ಯತೆ ಮತ್ತು ಡಿಜಿಟಲ್ ಸುರಕ್ಷತಾ ರಕ್ಷಣೆಗಳನ್ನು ಸೇರಿಸಲು, ಅಮೆರಿಕನ್ನರ ಎಲ್ಲಾ ಖಾಸಗಿ ಡೇಟಾವನ್ನು ಅಮೆರಿಕಾಗೆ ಹಿಂತಿರುಗಿಸಲು ಮತ್ತು ದೇಶದ ಹೊರಗಿನ ಸರ್ವರ್‌ಗಳಲ್ಲಿರುವ ಅಮೆರಿಕನ್ನರ ಡಾಟ ಅಳಿಸುವ ಕುರಿತು ಭರವಸೆ ನೀಡಿದೆ.

ಮೈಕ್ರೋಸಾಫ್ಟ್ ಹೇಳಿಕೆಯು ಟ್ರಂಪ್ ಒಪ್ಪಂದವನ್ನು ಅಂಗೀಕರಿಸುತ್ತಾರೆಯೆ ಅಥವಾ ಟಿಕ್‌ಟಾಕ್ ನಿಷೇಧವನ್ನು ತ್ಯಜಿಸುತ್ತಾರೆಯೆ? ಎಂದು ಸ್ಪಷ್ಟವಾಗಿ ಹೇಳಲಿಲ್ಲ, ಆದರೂ ಮೈಕ್ರೋಸಾಫ್ಟ್ ಟ್ರಂಪ್ ಅವರೊಂದಿಗೆ ಚರ್ಚೆಯಲ್ಲಿದೆ ಎಂದು ಹೇಳಿದೆ.

ಟಿಕ್‌ಟಾಕ್ ಅನ್ನು ಎರಡು ವರ್ಷಗಳ ಹಿಂದೆ ಅಮೆರಿಕದಲ್ಲಿ ಪ್ರಾರಂಭಿಸಲಾಯಿತು. ಟಿಕ್‌ಟಾಕ್ ಜನಪ್ರಿಯವಾಗುತ್ತಿದ್ದಂತೆ, ಅದರ ವಿರುದ್ಧ ಟೀಕೆಗಳು ಸಹ ಕೇಳಿ ಬಂದಿದ್ದವು.

ಭಾರತದಲ್ಲೂ ಸಹ ಇತ್ತೀಚೆಗೆ ಭಾರತ ಸರ್ಕಾರ ಟಿಕ್‌ಟಾಕ್ ಸೇರಿದಂತೆ ಅನೇಕ ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು.
Published by: MAshok Kumar
First published: August 3, 2020, 9:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading