HOME » NEWS » National-international » MAMATA ANNOUNCES RS 2 LAKH COMPENSATION FOR WEST BENGAL VIOLENCE VICTIMS SESR

Mamata Banerjee: ಪಶ್ಚಿಮ ಬಂಗಾಳ ಹಿಂಸಾಚಾರ: ಸಾವನ್ನಪ್ಪಿದವರಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಜನಾದೇಶವನ್ನು ಅವರು ಒಪ್ಪಿಕೊಳ್ಳಲು ಸಿದ್ದರಿಲ್ಲ. ಜನರು ಈಗಾಗಲೇ ತೀರ್ಪು ನೀಡಿದ್ದು, ಇದನ್ನು ಒಪ್ಪಿಕೊಳ್ಳುವಂತೆ ಈ ಮೂಲಕ ನಾನು ಮನವಿ ಮಾಡುತ್ತೇನೆ

news18-kannada
Updated:May 6, 2021, 6:00 PM IST
Mamata Banerjee: ಪಶ್ಚಿಮ ಬಂಗಾಳ ಹಿಂಸಾಚಾರ: ಸಾವನ್ನಪ್ಪಿದವರಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಮಮತಾ ಬ್ಯಾನರ್ಜಿ
  • Share this:
ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಬಳಿಕ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದವರಿಗೆ ತಲಾ 2 ಲಕ್ಷ ಪರಿಹಾರ ನೀಡಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಈ ಪರಿಹಾರದ ಮೊತ್ತವನ್ನು ಯಾವುದೇ ತಾರತಮ್ಯವಿಲ್ಲದೇ ಎಲ್ಲರಿಗೂ ನೀಡಲಾಗುವುದು ಎಂದು ಇದೇ ವೇಳೆ ಟಿಎಂಸಿ ನಾಯಕಿ ಹೇಳಿದ್ದಾರೆ. ಇದೇ ವೇಳೆ ಅವರು ಈ ಹಿಂಸಾಚಾರಕ್ಕೆ ಬಿಜೆಪಿಯೇ ಕಾರಣ. ಅವರು ಜನರ ತೀರ್ಪನ್ನು ಸ್ವೀಕರಿಸಲು ಸಿದ್ದವಿರಲಿಲ್ಲ ಎಂದು ಆರೋಪಿಸಿದ್ದಾರೆ. ಹಿಂಸಾಚಾರದಲ್ಲಿ 16 ಮಂದಿ ಸಾವನ್ನಪ್ಪಿದ್ದುಮ ಇದರಲ್ಲಿ ಅರ್ಧಷ್ಟು ಮಂದಿ ಟಿಎಂಸಿಯವರು ಇನ್ನುಳಿದ 7 ಮಂದಿ ಬಿಜೆಪಿ ಹಾಗೂ ಒಬ್ಬ ಸಂಜುಕ್ತ ಮೋರ್ಚಾ ಕಾರ್ಯಕರ್ತ ಎಂದು ಚುನಾವಣಾ ಆಯೋಗ ತಿಳಿಸಿದೆ.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ದೆಹಲಿ ಗಲಭೆ ಮತ್ತು ಹತ್ರಾಸ್​ ಘಟನೆಗಳ ನಂತರ ಅವರ ತಂಡಗಳು ಪಶ್ಚಿಮ ಬಂಗಾಳಕ್ಕೆ ಬರುತ್ತಿವೆ ಎಂದು ಆರೋಪಿಸಿದ್ದಾರೆ

ರಾಜ್ಯದಲ್ಲಿ ಸಂಚರಿಸುತ್ತಿರುವ ಬಿಜೆಪಿ ನಾಯಕರು ಜನರನ್ನು ಉತ್ತೇಜಿಸುತ್ತಿದ್ದಾರೆ. ಹೊಸ ಸರ್ಕಾರ ರಚನೆಯಾಗಿ 24 ಗಂಟೆಗಳು ಕಳೆದಿಲ್ಲಅವರು ತಮ್ಮ ನಾಯಕರು, ತಂಡ ಹಾಗೂ ಪತ್ರಗಳನ್ನು ರವಾನಿಸುತ್ತಿದ್ದಾರೆ. ಜನಾದೇಶವನ್ನು ಅವರು ಒಪ್ಪಿಕೊಳ್ಳಲು ಸಿದ್ದರಿಲ್ಲ. ಜನರು ಈಗಾಗಲೇ ತೀರ್ಪು ನೀಡಿದ್ದು, ಇದನ್ನು ಒಪ್ಪಿಕೊಳ್ಳುವಂತೆ ಈ ಮೂಲಕ ನಾನು ಮನವಿ ಮಾಡುತ್ತೇನೆ ಎಂದರು

ಇದೇ ವೇಳೆ ರಾಜ್ಯಕ್ಕೆ ಯಾವುದೇ ಸಚಿವರು ಬರಬೇಕಾದರೇ ಆರ್​ಟಿಪಿಸಿಆರ್​ ಕಡ್ಡಾಯವಾಗಿದ್ದು, ನೆಗಟಿವ್​ ವರದಿ ತರುವುದು ಕಡ್ಡಾಯವಾಗಿದೆ. ಸೋಂಕು ನಿಯಂತ್ರಣದ ಹಿನ್ನಲೆ ರಾಜ್ಯಕ್ಕೆ ಬರುವ ವಿಶೇಷ ವಿಮಾನಗಳನ್ನು ಪರಿಶೀಲಿಸಲಾಗುವುದು ಎಂದರು.

ಪಶ್ಚಿಮ ಬಂಗಾಳದ ನಡೆದ ಹಿಂಸಾಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ನಾಲ್ವರು ತಂಡದವನ್ನು ತನಿಖೆಗೆ ನಿಯೋಜಿಸಿದೆ, ಹೆಚ್ಚುವರಿ ನಿರ್ದೇಶಕರ ಮಟ್ಟದ ನಾಲ್ವರು ತಂಡ ಹಿಂಸಾಚಾರ ದೃಷ್ಠಿಕೋನ ಕುರಿತು ತನಿಖೆ ನಡೆಸುತ್ತಿದೆ. ಈ ತಂಡ ಇಂದು ಪಶ್ಚಿಮ ಬಂಗಾಳಕ್ಕೆ ಆಗಮಿಸಿದ್ದು, ತನಿಖೆ ನಡೆಸಿದೆ.

ಉಚಿತ ಲಸಿಕೆ ವಿಚಾರ ಕುರಿತು ಇನ್ನು ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ. 20. 000 ಕೋಟಿಯಲ್ಲಿ ಹೊಸ ಸಂಸತ್ತು ನಿರ್ಮಾಣ ಮಾಡುತ್ತಿರುವಾಗ ಲಸಿಕೆಗಾಗಿ ಯಾಕೆ ಅವರು 30 ಸಾವಿರ ಕೋಟಿ ಮೀಸಲಿಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಟಿಎಂಸಿ ಗೂಂಡಾಗಳಿಂದ ನನ್ನ ಬೆಂಗಾವಲು ವಾಹನದ ಮೇಲೆ ದಾಳಿ; ಕೇಂದ್ರ ಸಚಿವ ಮುರಳೀಧರನ್​ ಆರೋಪಇನ್ನು ಇಂದು ಬೆಳಗ್ಗೆ ರಾಜ್ಯದ ಮಿಡ್ನಾಪುರದಲ್ಲಿ ರಾಜ್ಯ ಖಾತೆ ಕೇಂದ್ರ ಸಚಿವ ವಿ ಮುರಳೀಧರನ್​ ಬೆಂಬಲಿಗ ವಾಹನದ ಮೇಲೆ ದಾಳಿ ನಡೆದಿದೆ. ಟಿಎಂಸಿ ಗೂಂಡಾಗಳು ಈ ದಾಳಿ ನಡೆಸಿಒದ್ದಾರೆ ಎಂದು ವಿಡಿಯೋ ಸಮೇತ ಸಚಿವರು ಟ್ವೀಟ್​​ ಮಾಡಿದ್ದರು.ಇತ್ತೀಚೆಗಷ್ಟೇ ಸಚಿವರು ಪಶ್ಚಿಮ ಬಂಗಾಳದ ದಾಳಿ ಖಂಡಿಸಿ ಹೇಳಿಕೆ ನೀಡಿದ್ದರು. ಫಲಿತಾಂಶದ ದಿನ ಪಶ್ಚಿಮ ಬಂಗಾಳದಲ್ಲಿ ಅನೇಕ ಪಕ್ಷದ ಕಾರ್ಯಕರ್ತರನ್ನು ಕೊಲ್ಲಲಾಗಿದೆ, ಅತ್ಯಾಚಾರ, ಹಲ್ಲೆಯಂತಹ ಘಟನೆ ನಡೆಸಲಾಗಿದೆ. ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ ಎಂದು ಅವರು ಆರೋಪಿಸಿದ್ದರು.

ಪ್ರಮಾ ಣವಚನ ಸ್ವೀಕರಾದ ಬಳಿಕ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ ,ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದಿದ್ದರು.  ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರ ಕುರಿತು ಕೇಂದ್ರ ಸರ್ಕಾರ ವರದಿ ಕೋರಿದೆ. ಜೊತೆಗೆ ಘಟನೆ ಕುರಿತು ರಾಜ್ಯಪಾಲ ಜಗದೀಪ್​ ಧಂಕರ್​ ಅವರು ಪ್ರಧಾನಿ ಮೋದಿಗೆ ವಿವರಿಸಿದ್ದಾರೆ

ದೇಶದ ಜಿದ್ದಾಜಿದ್ದಿನ ಕಣವಾಗಿದ್ದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲಕ ಕಾಂಗ್ರೆಸ್​ ಪಕ್ಷ 213 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 77 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
Published by: Seema R
First published: May 6, 2021, 6:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories