ಗುಜರಾತ್​ ಮಾಜಿ ಸಿಎಂ ಕೇಶುಭಾಯ್ ಪಟೇಲ್ ನಿಧನ; ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಸಂತಾಪ

Keshubhai Patel Death: 92 ವರ್ಷದ ಕೇಶುಭಾಯ್​ ಪಟೇಲ್ ಅವರು ಗುಜರಾತ್​ನ  ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿದ್ದವರು. ಕೇಶುಭಾಯ್ ಪಟೇಲ್ ಎರಡು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಇಂದು ಬೆಳಗ್ಗೆ ಅವರು ಸಾವನ್ನಪ್ಪಿದ್ದಾರೆ.

news18-kannada
Updated:October 29, 2020, 1:56 PM IST
ಗುಜರಾತ್​ ಮಾಜಿ ಸಿಎಂ ಕೇಶುಭಾಯ್ ಪಟೇಲ್ ನಿಧನ; ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಸಂತಾಪ
ಕೇಶುಭಾಯ್ ಪಟೇಲ್
  • Share this:
ನವದೆಹಲಿ (ಅ. 29): ಕಳೆದ ತಿಂಗಳು ಕೊರೋನಾ ಸೋಂಕಿಗೆ ತುತ್ತಾಗಿದ್ದ ಗುಜರಾತ್ ರಾಜ್ಯದ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಇಂದು  ನಿಧನರಾಗಿದ್ದಾರೆ. 92 ವರ್ಷದವರಾಗಿದ್ದ ಅವರಿಗೆ ಇಂದು ಬೆಳಗ್ಗೆ ಉಸಿರಾಟದ ತೊಂದರೆ ಮತ್ತು ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ, ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಕೇಶುಭಾಯ್​ ಪಟೇಲ್ ಅವರು ಗುಜರಾತ್​ನ  ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿದ್ದವರು. 

ಕಳೆದ ತಿಂಗಳು ಕೊರೋನಾ ಸೋಂಕಿಗೆ ತುತ್ತಾಗಿದ್ದ ಕೇಶುಭಾಯ್ ಪಟೇಲ್ ಬಳಿಕ ಗುಣಮುಖರಾಗಿದ್ದರು. ಕೇಶುಭಾಯ್ ಪಟೇಲ್ ಎರಡು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಕಳೆದ ಸೆಪ್ಟೆಂಬರ್ 30ರಂದು ಸೋಮನಾಥ ಮಂದಿರ ಟ್ರಸ್ಟ್‌ ಅಧ್ಯಕ್ಷರಾಗಿ ಅವರು ಎರಡನೇ ಬಾರಿಗೆ ಆಯ್ಕೆಯಾಗಿದ್ದರು. 1995 ಮತ್ತು 1998ರಲ್ಲಿ ಕೇಶುಭಾಯ್ ಪಟೇಲ್ ಗುಜರಾತ್​ನ ಸಿಎಂ ಆಗಿದ್ದರು. 6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕೇಶುಭಾಯ್​ ಪಟೇಲ್ 2012ರಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ್ದರು.
1930ರ ಜುಲೈ 24ರಂದು ಜನಿಸಿದ್ದ ಕೇಶುಭಾಯ್ ಪಟೇಲ್ ಆರ್​ಎಸ್​ಎಸ್​ ನಾಯಕರಾಗಿದ್ದರು. ಮಾರ್ಚ್ 1995 ರಿಂದ 1995 ರ ಅಕ್ಟೋಬರ್ ವರೆಗೆ ಮೊದಲ ಅವಧಿಗೆ ನಂತರ ಮಾರ್ಚ್ 1998ರಿಂದ ಅಕ್ಟೋಬರ್ 2001ರವರೆಗೆ ಎರಡು ಬಾರಿ ಕೇಶುಭಾಯ್ ಪಟೇಲ್ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. 2001ರ ಗುಜರಾತ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿಸಿದಷ್ಟು ಸ್ಥಾನ ಗಳಿಸದ ಕಾರಣ ಕೇಶುಭಾಯ್ ಪಟೇಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.


ಗುಜರಾತ್ ಮಾಜಿ ಸಿಎಂ ಕೇಶುಭಾಯ್ ಪಟೇಲ್ ಅವರ ನಿಧನದಿಂದ ಮನಸಿಗೆ ಬಹಳ ಬೇಸರವಾಗಿದೆ. ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

2012ರ ವಿಸಾವಾದರ್ ವಿಧಾನಸಭಾ ಕ್ಷೇತ್ರದಿಂದ ಕೇಶುಭಾಯ್ ಪಟೇಲ್ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ 2014ರಲ್ಲಿ ಅನಾರೋಗ್ಯದ ಕಾರಣದಿಂದ ಅವರು ರಾಜೀನಾಮೆ ನೀಡಿದ್ದರು. ಜನಸಂಘದ ಮೂಲಕ ರಾಜಕೀಯ ವೃತ್ತಿ ಆರಂಭಿಸಿದ ಕೇಶುಭಾಯ್ ಜನಸಂಘದ ಸಂಸ್ಥಾಪಕ ಸದಸ್ಯರಲ್ಲೊಬ್ಬರು.
Published by: Sushma Chakre
First published: October 29, 2020, 1:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading