Kerala: ಎರ್ನಾಕುಲಂನ ಕ್ವಾರಿಯಲ್ಲಿ ಸ್ಫೋಟ; ಕರ್ನಾಟಕ, ತಮಿಳುನಾಡಿನ ಇಬ್ಬರು ಕಾರ್ಮಿಕರು ಸಾವು

Ernakulam Blast: ಕೇರಳದ ಎರ್ನಾಕುಲಂನ ಮಲಯತ್ತೂರಿನಲ್ಲಿರುವ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿತ್ತು. ಈ ಸ್ಫೋಟಕಗಳು ಇಂದು ಮುಂಜಾನೆ ಸ್ಫೋಟಿಸಿ, ಕಟ್ಟಡದೊಳಗಿದ್ದ ಇಬ್ಬರು ಕಾರ್ಮಿಕರು ಮಲಗಿದಲ್ಲೇ ಸಾವನ್ನಪ್ಪಿದ್ದಾರೆ.

Sushma Chakre | news18-kannada
Updated:September 21, 2020, 11:20 AM IST
Kerala: ಎರ್ನಾಕುಲಂನ ಕ್ವಾರಿಯಲ್ಲಿ ಸ್ಫೋಟ; ಕರ್ನಾಟಕ, ತಮಿಳುನಾಡಿನ ಇಬ್ಬರು ಕಾರ್ಮಿಕರು ಸಾವು
ಎರ್ನಾಕುಲಂನಲ್ಲಿ ಸ್ಫೋಟ
  • Share this:
ತಿರುವನಂತಪುರಂ (ಸೆ. 21): ಕೇರಳದ ಎರ್ನಾಕುಲಂನಲ್ಲಿರುವ ಮಲಯತ್ತೂರಿನ ಕ್ವಾರಿಯೊಂದರಲ್ಲಿ ಇಂದು ಮುಂಜಾನೆ ಸ್ಫೋಟ ಸಂಭವಿಸಿದ್ದು, ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈ ವೇಳೆ ಮಲಗಿದ್ದ ಕಾರ್ಮಿಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಇಬ್ಬರು ಕಾರ್ಮಿಕರು ತಮಿಳುನಾಡು ಮತ್ತು ಕರ್ನಾಟಕದವರು. ಇಬ್ಬರ ಶವಗಳನ್ನೂ ಹೊರಗೆಳೆಯಲಾಗಿದೆ. ಕೇರಳದ ಎರ್ನಾಕುಲಂನ ಮಲಯತ್ತೂರಿನಲ್ಲಿರುವ ಕ್ವಾರಿಯಲ್ಲಿ ಕಲ್ಲು ಸ್ಫೋಟಕ್ಕೆ ಬಳಸುವ ಉದ್ದೇಶದಿಂದ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿತ್ತು. ಆದರೆ ಈ ಸ್ಫೋಟಕಗಳು ಇಂದು ಮುಂಜಾನೆ ಸ್ಫೋಟಿಸಿ ಕಟ್ಟಡದೊಳಗಿದ್ದ ಇಬ್ಬರು ಕಾರ್ಮಿಕರು ಮಲಗಿದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ತಮಿಳುನಾಡು ಮೂಲದ ಪೆರಿಯಣ್ಣನ್ ಮತ್ತು ಕರ್ನಾಟಕ ಮೂಲದ ನಾಗ ಎಂದು ಗುರುತಿಸಲಾಗಿದೆ. ಕರ್ನಾಟಕದ ಕಾರ್ಮಿಕನ ದೇಹ ಗುರುತು ಸಿಗದಂತೆ ಛಿದ್ರವಾಗಿತ್ತು. ತಮಿಳುನಾಡಿನ ಕಾರ್ಮಿಕನನ್ನು ಹೊರಗೆಳೆದ ಬಳಿಕ ಸಾವನ್ನಪ್ಪಿದ್ದಾನೆ.



ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಹಾಗೇ, ಸಮನ್ಸ್​ ಜಾರಿಗೊಳಿಸಲಾಗಿದೆ. ಅಕ್ಕಪಕ್ಕದ ಮನೆಯವರಿಗೆ ಸ್ಫೋಟದ ಸದ್ದು ಕೇಳಿದ ಕೂಡಲೆ ಪೊಲೀಸರಿಗೆ ಈ ವಿಷಯ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಹಾಗೇ, ಸಮನ್ಸ್​ ಜಾರಿಗೊಳಿಸಲಾಗಿದೆ ಎಂದು ದಿ ನ್ಯೂಸ್ ಮಿನಿಟ್ಸ್​ ವರದಿ ಮಾಡಿದೆ.
ಯಾವ ರೀತಿಯ ಸ್ಫೋಟಕಗಳನ್ನು ಕಟ್ಟಡದೊಳಗೆ ಸಂಗ್ರಹಿಸಿಡಲಾಗಿತ್ತು, ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿತ್ತೇ? ಹೇಗೆ ಸ್ಫೋಟ ಸಂಭವಿಸಿತು ಎಂಬ ಬಗ್ಗೆ ಎರ್ನಾಕುಲಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಖಚಿತವಾದ ಮಾಹಿತಿ ಇನ್ನಷ್ಟೇ ಸಿಗಬೇಕಿದೆ...
Published by: Sushma Chakre
First published: September 21, 2020, 11:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading