ಬಿಹಾರ ಚುನಾವಣೆಗೂ ಮುನ್ನವೇ ಮಹಾ ಮೈತ್ರಿಕೂಟ ತೊರೆದ ಜಿತಾನ್‌ ರಾಮ್‌ ಮಾಂಜಿ ನೇತೃತ್ವದ ಎಚ್‌ಎಎಂ-ಎಸ್ ಪಕ್ಷ

ಜಿತಾನ್ ರಾಮ್ ಮಾಂಜಿ ಒಂದು ಕಾಲದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಟು ವಿಮರ್ಶಕರಾಗಿದ್ದರು. ರಾಜ್ಯ ಸರ್ಕಾರದ ಕಾರ್ಯ ವೈಖರಿಯನ್ನು ಸಾಕಷ್ಟು ಭಾರಿ ಟೀಕೆಗೆ ಒಳಪಡಿಸಿದ್ದರು. ಆದರೆ. ಇತ್ತೀಚೆಗೆ ಅವರು ರಾಜ್ಯ ಸರ್ಕಾರ ತೆಗೆದುಕೊಂಡ ವಿಭಿನ್ನ ನಿರ್ಧಾರಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಆಗಲೇ ಮಾಂಜಿ ಜೆಡಿಯು ಜೊತೆಗೆ ಕೈಜೋಡಿಸುವ ಅನುಮಾನ ರಾಷ್ಟ್ರ ಮಟ್ಟದಲ್ಲಿ ವ್ಯಕ್ತವಾಗಿತ್ತು.

MAshok Kumar | news18-kannada
Updated:August 20, 2020, 8:58 PM IST
ಬಿಹಾರ ಚುನಾವಣೆಗೂ ಮುನ್ನವೇ ಮಹಾ ಮೈತ್ರಿಕೂಟ ತೊರೆದ ಜಿತಾನ್‌ ರಾಮ್‌ ಮಾಂಜಿ ನೇತೃತ್ವದ ಎಚ್‌ಎಎಂ-ಎಸ್ ಪಕ್ಷ
ಜಿತಾನ್ ರಾಮ್‌ ಮಾಂಜಿ.
  • Share this:
ಪಾಟ್ನಾ (ಆಗಸ್ಟ್‌ 20); ಪ್ರಸ್ತುತ ಬಿಹಾರದ ವಿಧಾನಸಭಾ ಚುನಾವಣೆ ಇಡೀ ದೇಶದ ಗಮನ ಸೆಳೆಯುತ್ತಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತೊಂದು ಮತ್ತೊಂದು ಅವಧಿಗೆ ಸಿಎಂ ಆಗುವ ಕನಸು ಕಾಣುತ್ತಿದ್ದರೆ, ಪ್ರತಿಪಕ್ಷಗಳು ಅಧಿಕಾರ ಹಿಡಿಯುವ ತವಕದಲ್ಲಿವೆ. ಈ ನಡುವೆ  ಚುನಾವಣೆಗೆ ಮುನ್ನವೇ ಪ್ರತಿಪಕ್ಷ ಮಹಾಮೈತ್ರಿ‌ಗೆ ಹಿನ್ನಡೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಜಿತಾನ್ ರಾಮ್ ಮಾಂಜಿ ನೇತೃತ್ವದ ಹಿಂದೂಸ್ತಾನಿ ಅವಂ ಮೋರ್ಚಾ (ಜಾತ್ಯತೀತ) (ಎಚ್‌ಎಎಂ-ಎಸ್) ಮೈತ್ರಿಯನ್ನು ತೊರೆಯುವುದಾಗಿ ಘೋಷಿಸಿದೆ.

ಎನ್‌ಡಿಎಗೆ ಸೇರ್ಪಡೆಗೊಳ್ಳಲು ಸಜ್ಜಾಗಿರುವ ಹಿಂದೂಸ್ತಾನಿ ಅವಂ ಮೋರ್ಚಾ ಈ ಕುರಿತು ಒಂದೆರಡು ದಿನಗಳಲ್ಲಿ ಕರೆ ನೀಡುವುದಾಗಿ ತಿಳಿಸಿದೆ. "ಪಕ್ಷದ ಕಾರ್ಯಕಾರಿ ಸಮಿತಿಯು ಭವಿಷ್ಯದ ಕ್ರಮಗಳ ಬಗ್ಗೆ ಕ್ರಮ ತೆಗೆದುಕೊಳ್ಳಲು ಮಾಂಜಿ ಅವರಿಗೆ ಅಧಿಕಾರ ನೀಡಿದೆ" ಎಂದು HAM-S ವಕ್ತಾರ ಡ್ಯಾನಿಶ್ ರಿಜ್ವಾನ್ ತಿಳಿಸಿದ್ದಾರೆ.

"ಎಚ್‌ಎಎಂ-ಎಸ್ ಜೆಡಿಯು ಜೊತೆ ವಿಲೀನಗೊಳ್ಳಬಹುದು ಅಥವಾ ಬಿಹಾರ ವಿಧಾನಸಭಾ ಚುನಾವಣೆಗೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು. ಬಿಹಾರದ ರಾಜಕೀಯವು ಸಂಭವನೀಯತೆಗಳು ಮತ್ತು ಸಾಧ್ಯತೆಗಳಿಂದ ತುಂಬಿದೆ" ಎಂದು ರಿಜ್ವಾನ್ ಅಭಿಪ್ರಾಯಪಟ್ಟಿದ್ದಾರೆ.

ಜಿತನ್ ರಾಮ್ ಮಾಂಜಿ ಒಂದು ಕಾಲದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಟು ವಿಮರ್ಶಕರಾಗಿದ್ದರು. ರಾಜ್ಯ ಸರ್ಕಾರದ ಕಾರ್ಯ ವೈಖರಿಯನ್ನು ಸಾಕಷ್ಟು ಭಾರಿ ಟೀಕೆಗೆ ಒಳಪಡಿಸಿದ್ದರು. ಆದರೆ. ಇತ್ತೀಚೆಗೆ ಅವರು ರಾಜ್ಯ ಸರ್ಕಾರ ತೆಗೆದುಕೊಂಡ ವಿಭಿನ್ನ ನಿರ್ಧಾರಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಆಗಲೇ ಮಾಂಜಿ ಜೆಡಿಯು ಜೊತೆಗೆ ಕೈಜೋಡಿಸುವ ಅನುಮಾನ ರಾಷ್ಟ್ರ ಮಟ್ಟದಲ್ಲಿ ವ್ಯಕ್ತವಾಗಿತ್ತು. ಆದರೆ, ಈ ಅನುಮಾನ ಇದೀಗ ನಿಜವಾಗಿದೆ.

ಅಲ್ಲದೆ, ಮಾಂಜಿ ನೇತೃತ್ವದ ಹಿಂದೂಸ್ತಾನಿ ಅವಂ ಮೋರ್ಚಾ ಪಕ್ಷವು ಮಹಾಮೈತ್ರಿಯ ಭಾಗವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಆದರೆ, ಎನ್‌ಡಿಎ ಮೈತ್ರಿಕೂಟದ ಎದುರು ಹೀನಾಯವಾಗಿ ಸೋತಿತು. ಹಾಗಾಗಿ ಮಾಂಜಿ ಕಳೆದ ಎರಡು ತಿಂಗಳುಗಳಲ್ಲಿ ಒವೈಸಿ ನೇತೃತ್ವದ-ಎಐಐಎಂಐಎಂ ಸೇರಿದಂತೆ ವಿವಿಧ ಪಕ್ಷಗಳೊಂದಿಗೆ ಮೈತ್ರಿಯ ಆಯ್ಕೆಗಳನ್ನು ಹುಡುಕುತ್ತಿದ್ದರು.

ಇದಕ್ಕೂ ಮೊದಲು, 2015ರ ಆರಂಭದಲ್ಲಿ ಸಿಎಂ ಹುದ್ದೆಯನ್ನು ತ್ಯಜಿಸಿದ ನಂತರ ಮಾಂಜಿ, ನಿತೀಶ್ ಕುಮಾರ್ ಅವರ ಬಣದಿಂದ ಹೊರಗುಳಿದಿದ್ದರು. 2015ರ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ನಂತರ ಅವರು ಸಂಪೂರ್ಣವಾಗಿ ಎನ್‌ಡಿಎಯಿಂದ ಹೊರನಡೆದಿದ್ದರು.

ಇದನ್ನೂ ಓದಿ : ಆರೇಳು ತಿಂಗಳಲ್ಲೆ ನಿರುದ್ಯೋಗ ಪ್ರೇರಿತ ಕೆಟ್ಟ ಪರಿಣಾಮಗಳನ್ನು ಭಾರತ ಎದುರಿಸಲಿದೆ; ರಾಹುಲ್ ಗಾಂಧಿ ಎಚ್ಚರಿಕೆಬಿಹಾರ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಎಚ್‌ಎಎಂ-ಎಸ್ ತಲಾ ಒಬ್ಬ ಸದಸ್ಯರನ್ನು ಹೊಂದಿದೆ. ಪಕ್ಷದ ಮೂಲಗಳ ಪ್ರಕಾರ ಎಚ್‌ಎಎಂ-ಎಸ್ ಎನ್‌ಡಿಎಯ ಭಾಗವಾಗುವುದು ಔಪಚಾರಿಕವಾಗಿದೆ. ಪಕ್ಷವು, ಸ್ಥಾನಗಳ ಬಗ್ಗೆ ಯಾವುದೇ ಪೂರ್ವ ಷರತ್ತುಗಳನ್ನು ವಿಧಿಸಿಲ್ಲ ಎಂದು ತಿಳಿದುಬಂದಿದೆ.

"ಯಾವುದೇ ಪಕ್ಷ ಎನ್‌ಡಿಎ ನಾಯಕತ್ವ ಮತ್ತು ನೀತಿಯಲ್ಲಿ ನಂಬಿಕೆ ತೋರಿಸಿದರೆ, ಅಂತಹ ಪಕ್ಷಗಳು ನಮ್ಮ ಜೊತೆಗೆ ಕೈಜೋಡಿಸುವುದರಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ" ಎಂದು ಬಿಜೆಪಿ ವಕ್ತಾರ ನಿಖಿಲ್ ಆನಂದ್ ಈ ಹಿಂದೆಯೇ ಹೇಳಿದ್ದಾರೆ.
Published by: MAshok Kumar
First published: August 20, 2020, 8:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading