Indian Railways; ಸೆಪ್ಟೆಂಬರ್‌ 21 ರಿಂದ ಹೆಚ್ಚುವರಿ 40 ರೈಲುಗಳ ಸಂಚಾರಕ್ಕೆ ಸಚಿವಾಲಯ ಒಪ್ಪಿಗೆ; ಇಲ್ಲಿದೆ ಮಾರ್ಗಗಳ ಪಟ್ಟಿ!

ಈಗಾಗಲೇ ದೇಶದಾದ್ಯಂತ ಸೇವೆಯಲ್ಲಿರುವ 310 ವಿಶೇಷ ರೈಲುಗಳ ಜೊತೆಗೆ ಹೆಚ್ಚುವರಿಯಾಗಿ ಈ ರೈಲುಗಳು ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಇಂದು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.

MAshok Kumar | news18-kannada
Updated:September 16, 2020, 3:01 PM IST
Indian Railways; ಸೆಪ್ಟೆಂಬರ್‌ 21 ರಿಂದ ಹೆಚ್ಚುವರಿ 40 ರೈಲುಗಳ ಸಂಚಾರಕ್ಕೆ ಸಚಿವಾಲಯ ಒಪ್ಪಿಗೆ; ಇಲ್ಲಿದೆ ಮಾರ್ಗಗಳ ಪಟ್ಟಿ!
ಭಾರತೀಯ ರೈಲ್ವೆ.
  • Share this:
ನವ ದೆಹಲಿ (ಸೆಪ್ಟೆಂಬರ್‌ 16); ಕೊರೋನಾ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗಿದ್ದು, ಇದೀಗ ಅಂತರ ರಾಜ್ಯ ಓಡಾಡ ಹಾಗೂ ಪ್ರವಾಸಕ್ಕೂ ಸಹ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್‌ ನೀಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಸಹ ಹಂತಹಂತವಾಗಿ ರೈಲು ಸಂಖ್ಯೆಯನ್ನು ಅಧಿಕಗೊಳಿಸುತ್ತಿದ್ದು, ಪ್ರಯಾಣದ ಬೇಡಿಕೆ ಅಧಿಕವಾಗಿರುವ ಕಾರಣ ಸೆಪ್ಟೆಂಬರ್ 21 ರಿಂದ 20 ಜೋಡಿ ರೈಲುಗಳನ್ನು (40 ರೈಲುಗಳು) ನಿರ್ದಿಷ್ಟ ಮಾರ್ಗಗಳಲ್ಲಿ ಓಡಿಸಲು ಮುಂದಾಗಿದೆ ಎನ್ನಲಾಗುತ್ತಿದೆ. ಈ ಕುರಿತು ಭಾರತೀಯ ರೈಲ್ವೆ ಮಂಗಳವಾರ ಪ್ರಕಟಣೆ ಹೊರಡಿಸಿದ್ದು, ಈ ಪ್ರಕಟಣೆಯಲ್ಲಿ, "ನಿರ್ದಿಷ್ಟ ಮಾರ್ಗಗಳಲ್ಲಿ ಪ್ರಯಾಣಿಸಲು ಭಾರಿ ಬೇಡಿಕೆಯನ್ನು ಪರಿಗಣಿಸಿ, 21.09.2020 ರಿಂದ 20 ಜೋಡಿ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ" ಎಂದು ತಿಳಿಸಲಾಗಿದೆ.

ಈ ಜೋಡಿ ರೈಲುಗಳು ಅಧಿಸೂಚಿತ ಸಮಯಗಳಲ್ಲಿ ಚಲಿಸುತ್ತವೆ ಮತ್ತು ಸಂಪೂರ್ಣ ಕಾಯ್ದಿರಿಸಿದ ರೈಲುಗಳಾಗಿರುತ್ತವೆ. ಇದರಲ್ಲಿ ಪ್ರಯಾಣಿಸಲು ಪ್ರಯಾಣಿಕರು ಮುಂಗಡವಾಗಿ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಕಾಯ್ದಿರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

20 ಜೋಡಿ ಕ್ಲೋನ್ ರೈಲುಗಳ ಪೂರ್ಣ ಪಟ್ಟಿ ಇಲ್ಲಿದೆ:

ಈ 19 ಜೋಡಿ ರೈಲುಗಳ ಟಿಕೆಟ್‌ಗಳನ್ನು ಹಮ್‌ಸಾಫರ್ ಎಕ್ಸ್‌ಪ್ರೆಸ್ ದರದಲ್ಲಿ ವಿಧಿಸಲಾಗುವುದು. ಇದು ಲಖನೌ ಮತ್ತು ದೆಹಲಿ ನಡುವೆ ಸಂಚರಿಸುತ್ತಿರುವ ಜನಶತಾಬ್ಡಿ ಎಕ್ಸ್‌ಪ್ರೆಸ್ ದರಗಳಿಗೆ ಸಮನಾಗಿರುತ್ತದೆ. ಈ ರೈಲುಗಳಿಗೆ ಮುಂಗಡ ಕಾಯ್ದಿರಿಸುವ ಅವಧಿ 10 ದಿನಗಳು ಎಂದು ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ : Coronavirus India Updates: ಕೊರೋನಾ ಪ್ರಕರಣಗಳ ಪೈಕಿ 50 ಕೋಟಿ ದಾಟಿದ ಜಗತ್ತಿನ 2ನೇ ರಾಷ್ಟ್ರ ಭಾರತ

ಈಗಾಗಲೇ ದೇಶದಾದ್ಯಂತ ಸೇವೆಯಲ್ಲಿರುವ 310 ವಿಶೇಷ ರೈಲುಗಳ ಜೊತೆಗೆ ಹೆಚ್ಚುವರಿಯಾಗಿ ಈ ರೈಲುಗಳು ಸಂಚರಿಸಲಿವೆ. ಮಾರ್ಚ್ 25 ರಿಂದ ರಾಷ್ಟ್ರವ್ಯಾಪಿ ಲಾಕ್ ಡೌನ್ ಹೇರಿದ ಕಾರಣ ಭಾರತೀಯ ರೈಲ್ವೆ ಎಲ್ಲಾ ಪ್ರಯಾಣಿಕ ರೈಲು ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಆದಾಗ್ಯೂ, ಇದು ಮೇ 1 ರಿಂದ ವಿವಿಧ ರಾಜ್ಯಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರು ತಮ್ಮ ಊರಿಗೆ ತಲುಪಲು ಸಹಾಯ ಮಾಡುವ ಸಲುವಾಗಿ ಶ್ರಮಿಕ್ ವಿಶೇಷ ರೈಲುಗಳಿಗೆ ಚಾಲನೆ ನೀಡುವ ಮೂಲಕ ಭಾರತೀಯ ರೈಲ್ವೆ ತನ್ನ ಸೇವೆಯನ್ನು ಪುನರಾರಂಭಿಸಿತು.

ಅದರ ನಂತರ ಭಾರತೀಯ ರೈಲ್ವೆ ಇಲಾಖೆ ದೇಶಾದ್ಯಂತ 230 ವಿಶೇಷ ರೈಲುಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಸೆಪ್ಟೆಂಬರ್ 12 ರಿಂದ 80 ವಿಶೇಷ ರೈಲುಗಳನ್ನು ಸೇವೆಗೆ ನಿಯೋಜಿಸಲಾಗಿದೆ. ಈಗ ಸೆಪ್ಟೆಂಬರ್‌ 21 ರಿಂದ ಹೆಚ್ಚುವರಿ 40 ರೈಲುಗಳ ಪ್ರಯಾಣಿಕರ ಸೇವೆಗೆ ನಿಯೋಜನೆಯಾಗಲಿದ್ದು, ಶೀಘ್ರದಲ್ಲೇ ರೈಲ್ವೆ ಇಲಾಖೆ ಹಳೆಯ ಮಾದರಿಯಲ್ಲಿ ಸೇವೆ ನೀಡಲಿದೆ ಎನ್ನಲಾಗುತ್ತಿದೆ.
Published by: MAshok Kumar
First published: September 16, 2020, 2:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading