Hyderabad Floods: ಹೈದರಾಬಾದ್​ನಲ್ಲಿ ನಿಲ್ಲದ ಮಳೆಯ ಅಬ್ಬರ; ರಾತ್ರೋರಾತ್ರಿ ತಗ್ಗು ಪ್ರದೇಶಗಳ ಜನರ ಶಿಫ್ಟ್​

ಹೈದರಾಬಾದ್​ನಲ್ಲಿ ಇದುವರೆಗೂ 50 ಜನರು ಪ್ರವಾಹಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಮಳೆಯ ನೀರಿನಿಂದ ಮುಳುಗಿದ ರಸ್ತೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Sushma Chakre | news18-kannada
Updated:October 18, 2020, 8:50 AM IST
Hyderabad Floods: ಹೈದರಾಬಾದ್​ನಲ್ಲಿ ನಿಲ್ಲದ ಮಳೆಯ ಅಬ್ಬರ; ರಾತ್ರೋರಾತ್ರಿ ತಗ್ಗು ಪ್ರದೇಶಗಳ ಜನರ ಶಿಫ್ಟ್​
ಹೈದರಾಬಾದ್​ನಲ್ಲಿ ಪ್ರವಾಹ
  • Share this:
ಹೈದರಾಬಾದ್ (ಅ. 18): ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಹೈದರಾಬಾದ್​ನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಶನಿವಾರ ಸಂಜೆ ಸುರಿದ ಮಳೆ ಈ ವರ್ಷ ಉಂಟಾದ ಎರಡನೇ ಅತ್ಯಧಿಕ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಹೈದರಾಬಾದ್​ ನಗರದ ತುಂಬ ನೀರು ತುಂಬಿ, ರಸ್ತೆಗಳಲ್ಲಿ ವಾಹನಗಳು ಸಂಚರಿಸದಂತಾಗಿತ್ತು. ನಿನ್ನೆ ಸುರಿದ ಮಳೆಗೆ ಹೈದರಾಬಾದ್​ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹೈದರಾಬಾದ್​ನಲ್ಲಿ ಇದುವರೆಗೂ 50 ಜನರು ಪ್ರವಾಹಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಹೈದರಾಬಾದ್​ನ ಕೆಲವು ಪ್ರದೇಶಗಳಲ್ಲಿ ನಿನ್ನೆ ಸಂಜೆ 150 ಮಿ.ಮೀ.ಗೂ ಅಧಿಕ ಮಳೆಯಾಗಿದೆ. ಮಳೆಯ ನೀರಿನಿಂದ ಮುಳುಗಿದ ರಸ್ತೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಹೈದರಾಬಾದ್​ನ ರಸ್ತೆಗಳಲ್ಲಿ ನಿನ್ನೆ ಸಂಜೆ 2 ಅಡಿಯವರೆಗೂ ನೀರು ತುಂಬಿತ್ತು. ಹೈದರಾಬಾದ್​ನ ರಕ್ಷಣಾ ಸಿಬ್ಬಂದಿ ಮತ್ತು ಪಾಲಿಕೆ ಸಿಬ್ಬಂದಿ ನಿನ್ನೆ ಸಂಜೆಯಿಂದಲೂ ರಸ್ತೆಗಳಲ್ಲಿ ತುಂಬಿರುವ ನೀರನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಸಿದ್ದಾರೆ. ಇಂದು ಕೂಡ ಹೈದರಾಬಾದ್​ನಲ್ಲಿ ಗುಡುಗು, ಮಿಂಚು ಸಹಿತ ಮಳೆ ಮತ್ತು ಚಂಡಮಾರುತ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ಬೆಳಗ್ಗೆ ಕೂಡ ಹೈದರಾಬಾದ್​ನ ರಸ್ತೆಗಳಲ್ಲಿ ಮಳೆಯ ನೀರು ತುಂಬಿ ಅವಾಂತರ ಸೃಷ್ಟಿಸಿದೆ.
ಹೈದರಾಬಾದ್​ನ ತಗ್ಗು ಪ್ರದೇಶಗಳಿಂದ ಮೂರ್ನಾಲ್ಕು ದಿನಗಳಿಂದ ಜನರನ್ನು ಎತ್ತರದ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಪೂಲ್​ಬಾಗ್, ಓಮರ್ ಕಾಲೋನಿ, ಇಂದಿರಾನಗರ, ಶಿವಾಜಿನಗರ, ರಾಜೀವ್ ನಗರ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿರುವುದರಿಂದ ಜನರನ್ನು ಶಿಫ್ಟ್​ ಮಾಡಲಾಗುತ್ತಿದೆ.


ಆಂಧ್ರ ಪ್ರದೇಶ, ಉತ್ತರ ಕರ್ನಾಟಕಕ್ಕಿಂತ ತೆಲಂಗಾಣದಲ್ಲಿ ಅತಿಹೆಚ್ಚು ಮಳೆಯಾಗಿದೆ. ತೆಲಂಗಾಣದ ಪ್ರವಾಹಪೀಡಿತರನ್ನು ಗುರುತಿಸಿ, ಅವರ ಮನೆಬಾಗಿಲಿಗೇ ರೇಷನ್ ಕಿಟ್ ವಿತರಿಸಲಾಗುವುದು ಎಂದು ಸಚಿವ ಕೆ.ಟಿ. ರಾಮರಾವ್ ಹೇಳಿದ್ದಾರೆ.
Published by: Sushma Chakre
First published: October 18, 2020, 8:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading