Hema Malini: ಬಾಲಿವುಡ್​ ಬಗ್ಗೆ ಟೀಕಿಸಿದರೆ ಸಹಿಸಲು ಅಸಾಧ್ಯ; ಪರೋಕ್ಷವಾಗಿ ಕಂಗನಾ ನಡೆ ಖಂಡಿಸಿದ ಹೇಮಾ ಮಾಲಿನಿ

ಬಾಲಿವುಡ್​ ಎಂಬುದು ಸುಂದರವಾದ ಸ್ಥಳ, ಇದೊಂದು ಸೃಜನಾತ್ಮಕ ಪ್ರಪಂಚ, ಕಲೆ ಮತ್ತು ಸಂಸ್ಕೃತಿಯ ಉದ್ಯಮ- ಹೇಮಾ ಮಾಲಿನಿ

Seema.R | news18-kannada
Updated:September 16, 2020, 3:54 PM IST
Hema Malini: ಬಾಲಿವುಡ್​ ಬಗ್ಗೆ ಟೀಕಿಸಿದರೆ ಸಹಿಸಲು ಅಸಾಧ್ಯ; ಪರೋಕ್ಷವಾಗಿ ಕಂಗನಾ ನಡೆ ಖಂಡಿಸಿದ ಹೇಮಾ ಮಾಲಿನಿ
ಹೇಮಾ ಮಾಲಿನಿ
  • Share this:
ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಬಳಿಕ ಬಾಲಿವುಡ್​ನಲ್ಲಿ ಸ್ವಜನ ಪಕ್ಷಪಾತ ಹಾಗೂ ಡ್ರಗ್ಸ್​​ ಪ್ರಕರಣ ಕುರಿತು  ಸಾಕಷ್ಟು ವಾದ- ವಿವಾದಗಳು ಕೇಳಿ ಬರುತ್ತಿವೆ.  ಅದರಲ್ಲಿಯೂ ನಟಿ ಕಂಗನಾ ರನೌತ್​ ಬಾಲಿವುಡ್​ ನಟ- ನಟಿಯರ ಮೇಲೆ ನೇರ ಆರೋಪ ಮಾಡುತ್ತಿರುವುದು ಹಿರಿಯ ನಟರಲ್ಲಿ ಸಾಕಷ್ಟು ಅಸಮಾಧಾನ ಮೂಡಿಸಿದೆ. ಈ ಕುರಿತು ರಾಜ್ಯ ಸಭೆಯಲ್ಲಿ ಮಾತನಾಡಿದ ಸಂಸದೆ ಜಯಾ ಬಚ್ಚನ್​ ಕಂಗನಾ ಹೆಸರು ಹೇಳದೆ ಅವರ ಹೇಳಿಕೆ ಖಂಡಿಸಿದ್ದರು. ಯಾರೋ ಮಾಡುವ ತಪ್ಪಿಗೆ ಚಿತ್ರರಂಗ ದೂಷಿಸುವುದು ಸರಿಯಲ್ಲ ಎಂದಿದ್ದರು. ಈಗ ಅವರ ಬೆನ್ನಲ್ಲೇ ಮತ್ತೊಬ್ಬ ಹಿರಿಯ ನಟಿ ಹೇಮಾ ಮಾಲಿನಿ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಹೆಸರು, ಕೀರ್ತಿ, ಗೌರವ ಎಲ್ಲವನ್ನು ನೀಡಿರುವ ಬಾಲಿವುಡ್​ ಬಗ್ಗೆ ಈ ರೀತಿ ಮಾತನಾಡಿದರೆ ನೋವಾಗುವುದು ಎಂದು ಭಾವನಾತ್ಮಕವಾಗಿ ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಬಾಲಿವುಡ್​ಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಡ್ರೀಮ್​ ಗರ್ಲ್​ , ಬಾಲಿವುಡ್​ ಎಂಬುದು ಸುಂದರವಾದ ಕುಟುಂಬ. ಇದೊಂದು ಸೃಜನಾತ್ಮಕ ಪ್ರಪಂಚ, ಕಲೆ ಮತ್ತು ಸಂಸ್ಕೃತಿಯ ಉದ್ಯಮ ಎಂದಿದ್ದಾರೆ.

ಇಂತಹ ಉದ್ಯಮದ ಕುರಿತು ಡ್ರಗ್ಸ್​ ಆರೋಪ ಕೇಳಿದರೆ ಬೇಸರವಾಗುತ್ತದೆ. ಚಿತ್ರೋದ್ಯಮದಲ್ಲಿ ಮಾತ್ರ ಡ್ರಗ್ಸ್​​  ಪ್ರಕರಣಗಳಿವೆಯೇ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ, ಎಲ್ಲೆ ಕೊಳಕು ಕಂಡು ಬಂದರೂ ಅದನ್ನು ತೊಳೆದು ಹಾಕಿ ಮುನ್ನಡೆಯ ಬೇಕು. ಬಾಲಿವುಡ್​​ಗೆ ಅಂಟಿರುವ ಮಸಿ ಕೂಡ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಉದ್ಯಮದಲ್ಲಿ ಸಾಕಷ್ಟು ಮಹಾನ್​ ಕಲಾವಿದರು ಕೆಲಸ ನಿರ್ವಹಿಸಿದ್ದಾರೆ.  ಅವರನ್ನು ಜನರು ದೇವರಂತೆ ಆರಾಧನೆ ಮಾಡುತ್ತಾರೆ. ರಾಜ್​ ಕಪೂರ್​, ದೇವ್​ ಆನಂದ್​​, ಧರ್ಮೇಂದ್ರ , ಅಮಿತಾಬ್​ ಬಚ್ಚನ್ ನಂತಹ ಅನೇಕ​  ಕಲಾವಿದರು ಬಾಲಿವುಡ್ ಹೆಸರು​ ಪ್ರಕಾಶಿಸುವಂತೆ ಮಾಡಿದ್ದಾರೆ.  ಬಾಲಿವುಡ್​ ಎಂದರೆ ಭಾರತ ಎಂಬ ಭಾವನೆ ವಿದೇಶಿಗರಲ್ಲಿದೆ. ಅಂತಹ ಉದ್ಯಮದ ಬಗ್ಗೆ ಆರೋಪ ಮಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದಿದ್ದಾರೆ.

ಇದೇ ವೇಳೆ, ಬಾಲಿವುಡ್​ನಲ್ಲಿ ಒಂದೆರಡು ತಪ್ಪು ಕಂಡು ಬಂದಾಕ್ಷಣ ಇಡೀ  ಉದ್ಯಮವೇ ಸರಿಯಲ್ಲ ಎನ್ನುವುದು ತಪ್ಪು ಎಂದಿದ್ದಾರೆ.

ಇನ್ನು ಸ್ವಜನ ಪಕ್ಷಪಾತ ಕುರಿತು ಉತ್ತರಿಸಿರುವ ಅವರು, ಯಾರೋ ಸ್ಟಾರ್​ ನಟ- ನಟಿಯರ ಮಕ್ಕಳು ಉದ್ಯಮಕ್ಕೆ ಕಾಲಿಟ್ಟಾಕ್ಷಣ ಅವರು ಸೂಪರ್​ ಸ್ಟಾರ್​ ಆಗುವುದಿಲ್ಲ. ಇಲ್ಲಿ ಪ್ರತಿಭೆ ಹಾಗೂ ಅದೃಷ್ಟ ಕೂಡ ಮುಖ್ಯ .

ಈ ಉದ್ಯಮ ಬೆಳೆಯಲು ಸಾಕಷ್ಟು ಜನರ ಕೊಡುಗೆ ಇದೆ ಹೃಷಿಕೇಶ್​ ಮುಖರ್ಜಿ, ಬಿಮಲ್​ ರಾಯ್​, ಗುಲ್ಜಾರ್​, ರಮೇಶ್​, ಸುಭಾಶ್​ ಗಾಯ್​ ಅಂತಹೆ ಎಷ್ಟೋ ಜನರ ಪರಿಶ್ರಮ ಇದೆ. ಇವರ ಕಾರ್ಯಗಳನ್ನು ಒಂದೇ ನಿಮಿಷದಲ್ಲಿ ಅಲ್ಲಗಳೆಯಲು ಸಾಧ್ಯವಿಲ್ಲ ಎಂದಿದ್ದಾರೆ.ಜಯಾಗೆ ತಿರುಗೇಟು ನೀಡಿದ ಕಂಗನಾ

ಬಾಲಿವುಡ್ ನಲ್ಲಿ ಶೇ 90 ರಷ್ಟು ಡ್ರಗ್ಸ್​ ಪ್ರಕರಣಗಳಿವೆ ಎಂದು ಆರೋಪ ಮಾಡಿದ್ದ ಕಂಗನಾ ಹೇಳಿಕೆಗೆ  ಹಿರಿಯ ನಟಿ, ಸಂಸದೆ ಜಯಾ ಬಚ್ಚನ್​ ಸಂಸತ್​ನಲ್ಲಿ ಪರೋಕ್ಷವಾಗಿ  ಟೀಕಿಸಿದ್ದರು.





ಅವರ ಹೇಳಿಕೆಗೆ ಟ್ವೀಟ್​ ಮೂಲಕ ಜಯಾ ಬಚ್ಚನ್​ಗೆ ಉತ್ತರಿಸಿದ ನಟಿ ಕಂಗನಾ, ನಿಮ್ಮ ಮಗಳಿಗೆ ಯಾರಾದರೂ ಡ್ರಗ್ಸ್​ ನೀಡಿದ್ದರೆ, ದೌರ್ಜನ್ಯ ನಡೆಸಿದ್ದರೆ  ಹೀಗೆಯೇ ಮಾತನಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.  ಅಲ್ಲದೇ ನಿಮ್ಮ ಮಗ ಅಭಿಷೇಕ್​, ದೂರು ನೀಡಿದ ಬಳಿಕ ಒಂದು ದಿನ ಆತ್ಮಹತ್ಯೆ ಮಾಡಿಕೊಂಡರೆ  ಆಗ ನೀವು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
Published by: Seema R
First published: September 16, 2020, 3:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading