ಫೆಬ್ರವರಿ ಹೊತ್ತಿಗೆ ಭಾರತದ ಅರ್ಧದಷ್ಟು ಮಂದಿಯಲ್ಲಿ ಕೊರೋನಾ ಸೋಂಕು; ಸರ್ಕಾರದ ಸಮಿತಿ

ಮಾಸ್ಕ್​ ಧಾರಣೆ, ಸ್ವಚ್ಛತೆ, ಸಾಮಾಜಿಕ ಅಂತರ ನಿರ್ಲಕ್ಷ್ಯಿಸಿದರೆ, ಇದರಿಂದ ಪ್ರಕರಣಗಳ ಸಂಖ್ಯೆ ಒಂದೇ ತಿಂಗಳಲ್ಲಿ 2.6 ದಶಲಕ್ಷ ಹೆಚ್ಚಾಗುವ ಸಾಧ್ಯತೆ ಇದೆ. 

news18-kannada
Updated:October 19, 2020, 10:29 PM IST
ಫೆಬ್ರವರಿ ಹೊತ್ತಿಗೆ ಭಾರತದ ಅರ್ಧದಷ್ಟು ಮಂದಿಯಲ್ಲಿ ಕೊರೋನಾ ಸೋಂಕು; ಸರ್ಕಾರದ ಸಮಿತಿ
ಪ್ರಾತಿನಿಧಿಕ ಚಿತ್ರ.
  • Share this:
ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೋನಾ ವೈರಸ್​ ಸೋಂಕಿಗೆ ಭಾರತದ ಅರ್ಧದಷ್ಟು ಜನರು ತುತ್ತಾಗಲಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಸರ್ಕಾರದ ಸಮಿತಿ ತಿಳಿಸಿದೆ. ಮುಂದಿನ ಫೆಬ್ರವರಿ ವೇಳೆಗೆ ಈ ಸೋಂಕು ಹೆಚ್ಚಾಗುವ ಸಾಧ್ಯತೆ ಇದ್ದು, ಈ ವೇಳೆ 130 ಕೋಟಿ ಜನರಲ್ಲಿ ಅರ್ಧ ಅಂದರೆ 65 ಕೋಟಿ ಜನರು ನಿಧಾನವಾಗಿ ಸೋಂಕಿಗೆ ತುತ್ತಾಗಲಿದ್ದಾರೆ ಎಂದು ಕೇಂದ್ರ ಸರ್ಕಾರ ಸಮಿತಿ ತಿಳಿಸಿದೆ. ಸದ್ಯ ಭಾರತದಲ್ಲಿ 7.55ಮಿಲಿಯನ್​ ಜನರು ಸೋಂಕಿಗೆ ತುತ್ತಾಗಿದ್ದಾರೆ. ವಿಶ್ವದಲ್ಲಿಯೇ ಅಧಿಕ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗಿರುವ ದೇಶಗಳಲ್ಲಿ ಅಮೆರಿಕದ ನಂತರ ಭಾರತ ಸ್ಥಾನ ಪಡೆದಿದೆ. 

ಆದರೆ, ಕೋವಿಡ್​ ಸೋಂಕು ಹರಡುವಿಕೆ ಪ್ರಮಾಣ ಸೆಪ್ಟೆಂಬರ್​ ಮಧ್ಯದಿಂದ ಕಡಿಮೆಯಾಗುತ್ತಾ ಬಂದಿದೆ. ದಿನವೊಂದಕ್ಕೆ 61,390 ಹೊಸ ಪ್ರಕರಣಗಳು ದಿನವೊಂದಕ್ಕೆ ದಾಖಲಾಗುತ್ತಿದ ಎಂದು ರಾಯಿಟರ್​ ತಿಳಿಸಿದೆ, ನಮ್ಮ ಗಣಿತ ಮಾದರಿ ಅಂದಾಜಿನ ಪ್ರಕಾರ ಶೇ30ರಷ್ಟು ಜನಸಂಖ್ಯೆ ಪ್ರಸ್ತುತ ಸೋಂಕಿಗೆ ತುತ್ತಾಗಿದ್ದಾರೆ. ಈ ಸಂಖ್ಯೆ ಫೆಬ್ರವರಿ ವೇಳೇಗೆ ಶೇ 50ರಷ್ಟು ಆಗಲಿದೆ, ಎಂದು ಭಾರತೀಯ ತಾಂತ್ರಿಕ ಸಂಸ್ಥೆ ಪ್ರಾಧ್ಯಾಪಕ ಹಾಗೂ ಸಮಿತಿ ಸದಸ್ಯ ಮನೀಂದ್ರ ಅಗರ್​ವಾಲ್​ ತಿಳಿಸಿದ್ದಾರೆ.

ಪ್ರಸ್ತುತ ವೈರಸ್​ ಹರಡುವಿಕೆಯ ಪ್ರಮಾಣ ಸರ್ಕಾರದ ಸೆರೋಲಾಜಿಕಲ್​ ಸಮೀಕ್ಷೆಗಿಂತ ಹೆಚ್ಚಿದೆ. ಸರ್ಕಾರದ ಈ ಸಮೀಕ್ಷೆ ಶೇ 14ರಷ್ಟು ಜನಸಂಖ್ಯೆಗೆ ಮಾತ್ರ ಸೋಂಕಿಗೆ ತಗುಲಿದೆ ಎಂದು ಹೇಳಿದೆ.

ಈ ಸೆರೋಲಾಜಿಕಲ್​ ಸಮೀಕ್ಷೆ ಸ್ಯಾಂಪಲಿಂಗ್​  ಸಂಪೂರ್ಣವಾಗಿ ಸಂಗ್ರಹಿಸುವಲ್ಲಿ ಸಫಲವಾಗಿಲ್ಲ. ಇದಕ್ಕೆ ಕಾರಣ ಜನಸಂಖ್ಯೆಯ ಸಂಪೂರ್ಣ ಗಾತ್ರದ ಸಂಖ್ಯೆ ಬಳಕೆ ಮಾಡಿಕೊಳ್ಳದಿರುವುದು.

ಇದನ್ನು ಓದಿ: ಕೊರೋನಾ ವೈರಸ್ ದೇಹ ಹೊಕ್ಕು ತಿಂಗಳ ಬಳಿಕ ರೋಗದ ಲಕ್ಷಣ; ಆಕ್ಸಫರ್ಡ್​ ಅಧ್ಯಯನದಲ್ಲಿ ಬಯಲು

ವೈರಾಲಾಜಿಸ್ಟ್​, ವಿಜ್ಞಾನಿಗಳು ಮತ್ತು ಇತರ ತಜ್ಞರ ಸಮಿತಿಯು ಗಣಿತದ ಮಾದರಿ ಅವಲಂಬಿಸಿ ಸಮೀಕ್ಷೆ ನಡೆಸಿದ್ದು, ಭಾನುವಾರ ಇದನ್ನು ಪ್ರಕಟಿಸಲಾಗಿದೆ. ಇದರ ಅನ್ವಯ ಹೊಸ ಮಾದರಿ ಬಳಸಿ ರೂಪಿಸಲಾಗಿದೆ. ಇದರಲ್ಲಿ ಪ್ರಕರಣಗಳನ್ನು ಸ್ಪಷ್ಟವಾಗಿ ಗಣನೆಗೆ ತೆಗೆದುಕೊಂಡಿದ್ದೇವೆ. ಈ ಮೂಲಕ ಸೋಂಕಿತರನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ ಎಂದರು.

ಇದೇ ವೇಳೆ ಸಮಿತಿ ಮುನ್ನೆಚ್ಚರಿಕೆ ವಹಿಸದಿದ್ದರೆ ಇದರ ನಿಯಂತ್ರಣ ಸಾಧ್ಯವಿಲ್ಲ ಎಂದು ಕೂಡ ಸ್ಪಷ್ಟಪಡಿಸಿದೆ. ಮಾಸ್ಕ್​ ಧಾರಣೆ, ಸ್ವಚ್ಛತೆ, ಸಾಮಾಜಿಕ ಅಂತರ ನಿರ್ಲಕ್ಷ್ಯಿಸಿದರೆ, ಇದರಿಂದ ಪ್ರಕರಣಗಳ ಸಂಖ್ಯೆ ಒಂದೇ ತಿಂಗಳಲ್ಲಿ 2.6 ದಶಲಕ್ಷ ಹೆಚ್ಚಾಗುವ ಸಾಧ್ಯತೆ ಇದೆ. ರಜೆ ದಿನಗಳು ಹೆಚ್ಚಾಗುತ್ತಿದ್ದಂತೆ ಸೋಂಕಿ ಪ್ರಮಾಣ ಕೂಡ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
Published by: Seema R
First published: October 19, 2020, 10:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading