HOME » NEWS » National-international » GOVT HIKES MSP OF RABI CROPS AMID FARMERS PROTEST ANNOUNCEMENT LIKELY TODAY SOURCES MAK

ವಿವಾದಾತ್ಮಕ ಕೃಷಿ ಮಸೂದೆ; ರೈತರ ಆಕ್ರೋಶ ಪ್ರತಿಭಟನೆ ಬೆನ್ನಿಗೆ ಅನೇಕ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ

ಅತ್ತ ರಾಜ್ಯಸಭೆಯಲ್ಲಿ ವಿವಾದಾತ್ಮಕ ಕೃಷಿ ಬಿಲ್ ಪಾಸ್ ಆಗುತ್ತಲೇ ಇತ್ತ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರ ಪ್ರತಿಭಟನೆಯ ಕಾವು ದುಪ್ಪಟ್ಟಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಎರಡೂ ರಾಜ್ಯಗಳ ನಡುವಿನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಪ್ರತಿಭಟನೆ ತಾರಕಕ್ಕೇರಿದೆ.

MAshok Kumar | news18-kannada
Updated:September 21, 2020, 5:59 PM IST
ವಿವಾದಾತ್ಮಕ ಕೃಷಿ ಮಸೂದೆ; ರೈತರ ಆಕ್ರೋಶ ಪ್ರತಿಭಟನೆ ಬೆನ್ನಿಗೆ ಅನೇಕ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ
ಕೇಂದ್ರ ಕ್ಯಾಬಿನೆಟ್​.
  • Share this:
ನವ ದೆಹಲಿ (ಸೆಪ್ಟೆಂಬರ್​ 21); ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮೂರು ನೂತನ ಕೃಷಿ ಮಸೂದೆಗೆ ದೇಶದಾದ್ಯಂತ ರೈತರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ವಿವಾದಾತ್ಮಕ ಕೃಷಿ ಮಸೂದೆಯನ್ನು ಖಂಡಿಸಿ ಬಿಜೆಪಿ ಮಿತ್ರಪಕ್ಷದ ಅಕಾಲಿ ದಳದ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಸಹ ಇತ್ತೀಚೆಗೆ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವಿಚಾರ ರಾಷ್ಟ್ರಮಟ್ಟದಲ್ಲಿ ದೊಡ್ಡ ಸದ್ದು ಮಾಡಿತ್ತು. ಅಲ್ಲದೆ, ವಿರೋಧ ಪಕ್ಷಗಳೂ ಇದೇ ವಿಚಾರವನ್ನು ಮುಂದಿಟ್ಟು ಸರ್ಕಾರವನ್ನು ಟೀಕಿಗೆ ಒಳಪಡಿಸಿತ್ತು. ಈ ನಡುವೆ ಕೇಂದ್ರ ಸರ್ಕಾರ ಮೂರೂ ಕೃಷಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದುಕೊಂಡಿದೆ. ಆದರೂ, ರೈತರ ಹೋರಾಟ ಮಾತ್ರ ಸದ್ಯಕ್ಕೆ ನಿಲ್ಲುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಪಂಜಾಬ್ ಮತ್ತು ಹರಿಯಾಣ ರಾಜ್ಯದಲ್ಲಂತೂ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಹೀಗಾಗಿ ರೈತರನ್ನು ಸಮಾಧಾನಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರ "ರೈತರ ಬೆಳೆಗಳಿಗೆ ಕೇಂದ್ರ ನಿಗದಿಪಡಿಸಿರುವ ಕನಿಷ್ಟ ಬೆಂಬಲ ಬೆಲೆಯನ್ನು ಏರಿಸಲು ಸಚಿವ ಸಂಪುಟ ಸಭೆ ಇಂದು ಅನುಮೋದನೆ ನೀಡಿದೆ" ಎಂದು ಸರ್ಕಾರಿ ಮೂಲಗಳು ನ್ಯೂಸ್18ಗೆ ತಿಳಿಸಿವೆ.

ಸೋಮವಾರ ನಡೆಸಲಾಗಿರುವ ಕೇಂದ್ರ ಕ್ಯಾಬಿನೆಟ್ ಮೀಟಿಂಗ್​ನಲ್ಲಿ 2021-22ರ ಋತುವಿನಲ್ಲಿ ಬೆಳೆಯಲಾದ ಗೋಧಿ ಬೆಳೆಗಳ ಮೇಲಿನ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗೋಧಿಯ ಜೊತೆಗೆ ಮಸೂರ, ಬಾರ್ಲಿ, ಸಾಸಿವೆ, ಕಾಬೂಲ್ ಕಡಲೆ ಸೇರಿದಂತೆ ಅನೇಕ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ” ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಅಲ್ಲದೆ, ಕೇಂದ್ರ ಸರ್ಕಾರ ಸೋಮವಾರ ಸಂಜೆ ಸರ್ಕಾರ ಪತ್ರಿಕಾಗೋಷ್ಠಿ ನಡೆಸಿ ಬೆಂಬಲ ಬೆಲೆ ಹೆಚ್ಚಿಸಿರುವ ಕುರಿತು ಮಾಹಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ-2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ-2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದಕ್ಕೆ ಇಡೀ ರೈತ ಸಮುದಾಯ ಮತ್ತು ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದರ ನಡುವೆಯೂ ಮಸೂದೆಯ ಅಂಗೀಕರ ಪಡೆದ ಎರಡು ದಿನಗಳ ನಂತರ ಸರ್ಕಾರ ಈ ನಿರ್ಧಾರವನ್ನು ಪ್ರಕಟಿಸಿದೆ.

ಅತ್ತ ರಾಜ್ಯಸಭೆಯಲ್ಲಿ ವಿವಾದಾತ್ಮಕ ಕೃಷಿ ಬಿಲ್ ಪಾಸ್ ಆಗುತ್ತಲೇ ಇತ್ತ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರ ಪ್ರತಿಭಟನೆಯ ಕಾವು ದುಪ್ಪಟ್ಟಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಎರಡೂ ರಾಜ್ಯಗಳ ನಡುವಿನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಪ್ರತಿಭಟನೆ ತಾರಕಕ್ಕೇರಿದೆ. ನೂರಾರು ರೈತ ಸಂಘಟನೆಗಳು ಈ ಮಸೂದೆಯನ್ನು ವಿರೋಧಿಸಿ ಬೀದಿಗೆ ಇಳಿದಿದ್ದು, ಸೆಪ್ಟೆಂಬರ್ 25ರಿಂದ ಎರಡೂ ರಾಜ್ಯಗಳಲ್ಲಿ ಪ್ರತಿಭಟನೆಗೆ ಕರೆ ನೀಡಿವೆ.

ಇದನ್ನೂ ಓದಿ : ಮದ್ಯವರ್ತಿಗಳಿಂದ ರೈತರಿಗೆ ಮುಕ್ತಿ, ಕೃಷಿ ಕ್ಷೇತ್ರದ ಗೆಲುವು: ಕೃಷಿ ಮಸೂದೆ ಸಂಬಂಧ ಪ್ರಧಾನಿ ಮೋದಿ ಪ್ರತಿಕ್ರಿಯೆ

ಆದರೆ, ಈ ಮಸೂದೆಯ ಕುರಿತು ರೈತರಲ್ಲಿ ವಿಶ್ವಾಸ ಮೂಡಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ, “ಈ ಮಸೂದೆಗಳಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ರೈತರಿಗೆ ಇಷ್ಟು ದಿನ ಇದ್ದ ಮಧ್ಯವರ್ತಿಗಳ ಕಿರುಕುಳವನ್ನು ತಪ್ಪಿಸಲಿದೆ. ಅಲ್ಲದೆ, ರೈತರು ತಮ್ಮ ಎಲ್ಲಾ ಉತ್ಪನ್ನಗಳನ್ನು ಒಟ್ಟಾಗಿ ದೊಡ್ಡ ಖರೀದಿದಾರರಿಗೆ ಮಾರಾಟ ಮಾಡಲು ಈ ಮಸೂದೆಗಳು ಸಹಕಾರಿಯಾಗಲಿವೆ. ಕೃಷಿಗೆ ಸಂಬಂಧಿಸಿದ ಪ್ರಾಚೀನ ಕಾನೂನುಗಳನ್ನು ಸುಧಾರಿಸುತ್ತವೆ. ಈ ಹೊಸ ನಿಯಮಗಳಿಂದ ಗುತ್ತಿಗೆ ಕೃಷಿಗೂ ಸಹಕಾರಿಯಾಗಲಿದೆ” ಎಂದು ತಿಳಿಸಿದ್ದಾರೆ.
Youtube Video

ಆದರೆ ಬಿಜೆಪಿ ಮಿತ್ರಪಕ್ಷ ಅಕಾಲಿ ದಳದ ನಾಯಕಿ ಹರ್ಸಿಮ್ರತ್ ಕೌರ್ ಕಳೆದ ವಾರ ಸಚಿವ ಸಂಪುಟದಿಂದ ಹೊರಬಂದಿದ್ದು, ಈ ಮಸೂದೆಗಳನ್ನು "ರೈತ ವಿರೋಧಿ" ಎಂದು ಕರೆದಿದ್ದಾರೆ. ಅಲ್ಲದೆ ಈ ಮಸೂದೆಗಳು ದೊಡ್ಡ ಕಂಪೆನಿಗಳಿಗೆ ಲಾಭವಾಗಲಿದ್ದು, ಚಿಲ್ಲರೆ ವ್ಯಾಪಾರಿಗಳನ್ನು ನಿರ್ನಾಮ ಮಾಡಲಿದೆ ಎಂದು ವಿರೋಧ ಪಕ್ಷಗಳು ಸಹ ಕಟುವಾಗಿ ವಿರೋಧ ವ್ಯಕ್ತಪಡಿಸಿವೆ. ಆದರೂ ಸಹ ಕೇಂದ್ರ ಸರ್ಕಾರ ಈ ಎರಡೂ ಮಸೂದೆಗಳನ್ನು ಸಂಸತ್ನಲ್ಲಿ ಮಂಡಿಸಿ ಅಂಗೀಕಾರ ಪಡೆಯುವಲ್ಲಿ ಸಫಲವಾಗಿದೆ.
Published by: MAshok Kumar
First published: September 21, 2020, 5:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories